
ಬಾಲನಟಿಯಾಗಿ ತಮ್ಮ 11ನೇ ವಯಸ್ಸಿಗೇ ತಮಿಳು ಚಿತ್ರರಂಗ ಪ್ರವೇಶಿಸಿದ್ದ ನಟಿ ಕವಿತಾ, ತಮಿಳಿನಲ್ಲಿ ಸುಮಾರು 100ಕ್ಕೂಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ. ಅವರು ರಜನಿಕಾಂತ್, ಶಿವಾಜಿ ಗಣೇಶನ್ ಸೇರಿದಂತೆ ಹಲವಾರು ಘಟಾನುಘಟಿ ನಾಯಕರ ಜತೆ ನಟಿಸಿ ಟಾಪ್ ನಟಿ ಎನಿಸಿಕೊಂಡವರು. ತೆಲುಗಿನಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್‌ನಲ್ಲಿ ತುಂಬಾ ಖ್ಯಾತಿ ಪಡೆದುಕೊಂಡವರು.
ಇಂತಹ ನಟಿ ಕವಿತಾ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಕಟವಾಗಿದೆ. 'ನಟ ರಜನಿಕಾಂತ್ ಜತೆ ಸಿನಿಮಾದಲ್ಲಿ ನಟಿಸುವಾಗ ನಟ ರಜನಿಕಾಂತ್ ಹಾಗೂ ನಟಿ ಕವಿತಾ ಗುಟ್ಟಾಗಿ ಮದುವೆಯಾಗಿದ್ದಾರೆ' ಎಂಬ ಸುದ್ದಿ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ಸಮಯದಲ್ಲಿ ನಟಿ ನಟ ಮೋಹನ್ ಬಾಬು ಜತೆ ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಈ ಸಂಗತಿ ಕವಿತಾ ಗಮನಕ್ಕೆ ಬಂದಿದೆ. ತಕ್ಷಣ ಅವರು ಅದನ್ನುಮೋಹನ್ ಬಾಬು ಜತೆ ಹಂಚಿಕೊಂಡಿದ್ದಾರೆ.
ಈ ಸುದ್ದಿ ಕವಿತಾ ವೃತ್ತಿ ಜೀವನಕ್ಕೆ ತೊಂದರೆ ತರುತ್ತದೆ ಎಂದು ಭಾವಿಸಿದ ನಟ ಮೋಹನ್ ಬಾಬು ತಕ್ಷಣ ಶೂಟಿಂಗ್ ನಿಲ್ಲಿಸಲು ಹೇಳಿದ್ದಾರೆ. ಬಳಿಕ, ಸಂಬಂಧಪಟ್ಟ ಪತ್ರಿಕಾ ಕಛೇರಿಗೆ ನಟಿ ಕವಿತಾರನ್ನು ಕರೆದುಕೊಂಡು ಹೋಗಿ ಜಗಳವಾಡಿ ಈ ವಿಷಯ ಸತ್ಯಕ್ಕೆ ದೂರ ಎಂದು ವಾದಿಸಿದರಂತೆ. ಪತ್ರಿಕೆಯವರು ಈ ಸುದ್ದಿಯ 'ನಿರಾಕರಣೆ' ಪ್ರಕಟಿಸುವುದಾಗಿ ಹೇಳಿದ ಬಳಿಕವಷ್ಟೇ ಮೋಹನ್ ಬಾಬು ಅಲ್ಲಿಂದ ಕಾಲು ತೆಗದಿದ್ದಾರೆ. ಈ ಮೂಲಕ ಸಹನಟಿ ಮಾನ ಹರಾಜು ಆಗುವುದನ್ನು ತಪ್ಪಿಸಿದ್ದಾರಂತೆ.
ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!
ಆದರೆ ಅಂತಹ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿದ್ದಾದರೂ ಹೇಗೆ? ಆಗಿದ್ದಿಷ್ಟು ಎನ್ನಲಾಗಿದೆ. ನಟಿ ಕವಿತಾ ಅವರು ಯೂಟ್ಯೂಬ್ ಒಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ 'ನಟ ರಜನಿಕಾಂತ್ ಹಾಗೂ ತಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿತ್ತು, ನಾವಿಬ್ಬರೂ ರಹಸ್ಯವಾಗಿ ಮದುವೆ ಆಗಿದ್ದೇವೆ' ಎಂದು ಕೂಡ ಗಾಸಿಪ್ ಹಬ್ಬಿತ್ತು.' ಎಂದು ಹಬ್ಬಿರುವ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಈ ವಿಷಯ ಮರುದಿನ ಮಾಧ್ಯಮಗಳಲ್ಲಿ 'ರಜನಿಕಾಂತ್ ಹಾಗೂ ಕವಿತಾ ಗುಟ್ಟಾಗಿ ಮದುವೆಯಾಗಿದ್ದಾರೆ' ಎಂದು ಪ್ರಕಟವಾಗಿದೆಯಂತೆ.
ಮೊದಲ ಸಿನಿಮಾದಲ್ಲೇ ಸ್ಟಾರ್ ನಟಿಯಾಗಿ ಬಳಿಕ 50 ಪ್ಲಾಪ್ ಕೊಟ್ಟು ತೆರೆಮರೆಗೆ ಸರಿದಿದ್ದ ನಟಿ; ಮತ್ತೆ ಕಮ್‌ಬ್ಯಾಕ್?
ತಮ್ಮಿಬ್ಬರ ಮದುವೆ ಗುಟ್ಟಾಗಿ ನಡೆದಿತ್ತು ಎಂದು ಹಬ್ಬಿರುವ ಸುದ್ದಿಯ ಬಗ್ಗೆ ಹೇಳಿದ ಕವಿತಾಗೆ ಶಾಕ್ ಎಂಬಂತೆ ಅದೇ ಗಾಸಿಪ್ ತಕ್ಷಣ ಅಧಿಕೃತ ಸುದ್ದಿ ಎಂಬಂತೆ ಪ್ರಕಟವಾಗಿದೆ. ನೋಡಿದ ಕವಿತಾ ಶಾಕ್ ಆಗಿದ್ದಲ್ಲದೇ ಸಹನಟ ಮೋಹನ್ ಬಾಬು ಹಂಚಿಕೊಂಡಿದ್ದಾರೆ. ಬಳಿಕ ಮೋಹನ್ಬಾಬು ನೇತೃತ್ವದಲ್ಲಿ ಅದಕ್ಕೊಂದು ಅಂತ್ಯ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.