ತಲೈವರ್ 171 ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಅಥವಾ ಏಪ್ರಿಲ್ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ನಟಿಸಲಿದ್ದಾರೆ ಎಂಬ ಸುದ್ದಿಯಿದೆ.
ಭಾರತ ಚಿತ್ರಂಗದ ದಂತಕಥೆ, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಈಗ ಜ್ಞಾನವೇಲ್ ರಾಜಾ ನಿರ್ದೇಶನದ 'ವೆಟ್ಟೈಯನ್ (Vettaiyan Movie) ಚಿತ್ರದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೊದಲು ಬಿಡುಗಡೆಯಾಗಿದ್ದ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ದಾಖಲಿಸಿತ್ತು. ಈ ಚಿತ್ರದಲ್ಲಿ ಕನ್ನಡ ನಟ ಶಿವಣ್ಣ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು.
ರಜನಿಕಾಂತ್ ವೆಟ್ಟೈಯನ್' ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿರುವ ಈ ಸಮಯದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ 'ತಲೈವರ್ 171' ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ಈ ಬಗ್ಗೆ ಹೊಸದೊಂದು ಅಪ್ಡೇಟ್ ಬಂದಿದೆ. ಅದು, ತಲೈವರ್ 171 (Thalaivar 171) ಚಿತ್ರದ ಮುಖ್ಯ ವಿಲನ್ ಬಗ್ಗೆ. ಹೌದು, ತಲೈವರ್ 171 ಚಿತ್ರದಲ್ಲಿ ನಟ ರಜನಿಕಾಂತ್ ಎದುರು ತಮಿಳು ನಟ ವಿಜಯ್ ಸೇತುಪತಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ.
ರಜನಿ ಕಾಂತ್-ಲೋಕೇಶ್ ಕನಕರಾಜ್ ಜೋಡಿಯ ಮೊದಲ ಚಿತ್ರ ಇದಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. 'ಲಿಯೋ' ಚಿತ್ರೀಕರಣದ ವೇಳೆ ಲೋಕೇಶ್ 'ತಲೈವರ್ 171' ಚಿತ್ರದ ಕಥೆಯನ್ನು ರಜನಿಕಾಂತ್ ಗೆ ಹೇಳಿದ್ದರಂತೆ. ಕಥೆಯನ್ನು ಮೆಚ್ಚಿದ ಸೂಪರ್ ಸ್ಟಾರ್ ರಜನಿ ಕಾಂತ್ ಕೂಡ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎನ್ನಲಾಗಿದೆ.
ಬಾಕ್ಸಾಫೀಸ್ ನಲ್ಲಿ 305 ಕೋಟಿ ಗಳಿಸಿದ ಕಿಂಗ್ ಖಾನ್ ಶಾರುಖ್ ಡಂಕಿ; ಯಾಕಾಯ್ತು ಕಡಿಮೆ ಕಲೆಕ್ಷನ್?
ತಲೈವರ್ 171 ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಅಥವಾ ಏಪ್ರಿಲ್ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಇದೀಗ ಚಿತ್ರದ ವಿಲನ್ ಬಗ್ಗೆ ಒಂದು ಅಪ್ಡೇಟ್ ಬಿಡುಗಡೆಯಾಗಿದ್ದು, ಅದು ಬೇರಾರೂ ಅಲ್ಲ, ತಮಿಳು ಸ್ಟಾರ್ ವಿಲನ್ ವಿಜಯ್ ಸೇತುಪತಿ ಎನ್ನಲಾಗಿದೆ.
ಪ್ರಭಾಸ್-ಶಾರುಖ್ ಫ್ಯಾನ್ಸ್ ಸೋಷಿಯಲ್ ವಾರ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಶಾಂತ್ ನೀಲ್!
ಲೋಕೇಶ್ ಕನಕರಾಜ್ ತಮ್ಮ ನಿರ್ದೇಶನದ, ರಜನಿಕಾಂತ್ ನಾಯಕತ್ವದ 'ತಲೈವರ್ 171' ಚಿತ್ರದಲ್ಲಿ ವಿಲನ್ ಆಗಿ ನಟಿಸಲು ನಟ ವಿಜಯ್ ಸೇತುಪತಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವಿಜಯ್ ಸೇತುಪತಿ ಈ ಆಫರ್‌ಅನ್ನು ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಲೋಕೇಶ್ ನಿರ್ದೇಶನದಲ್ಲಿ ತೆರೆಕಂಡಿದ್ದ 'ಮಾಸ್ಟರ್' ಮತ್ತು 'ವಿಕ್ರಮ್' ಚಿತ್ರಗಳಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದರು, ಈಗ ಮತ್ತೆ ಅದೇ ನಿರ್ದೇಶಕರ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ; ಗಂಭೀರ ಆರೋಪ ಮಾಡಿದ ಖ್ಯಾತ ನಿರ್ದೇಶಕ!
ಒಟ್ಟಿನಲ್ಲಿ ಈಗ ವಿಜಯ್ ಸೇತುಪತಿ ಹಾಗೂ ರಜನಿಕಾಂತ್ ಈ ಇಬ್ಬರೂ ನಟರುಗಳ ಫ್ಯಾನ್ಸ್‌ಗಳೂ ಕೂಡ ಸಖತ್ ಖುಷಿಯಾಗಿದ್ದಾರೆ. ಅಚ್ಚರಿ ಎಂಬಂತೆ 'ಇನ್ಮುಂದೆ ನಾನು ವಿಲನ್ ಪಾತ್ರದಲ್ಲಿ ನಟಿಸುವುದಿಲ್ಲ' ಎಂದು ತಮಿಳು ನಟ ವಿಜಯ್ ಸೇತುಪತಿ ಇತ್ತೀಚೆಗೆ ಹೇಳಿದ್ದರು. ಆದರೆ, ಲೋಕೇಶ್ ಆಮಂತ್ರಣವನ್ನು ವಿಜಯ್ ಸೇತುಪತಿ ಒಪ್ಪಿಕೊಂಡ್ರೆ ಇದು ರಜನಿಕಾಂತ್ ಜತೆ ವಿಜಯ್ ಅವರ 2ನೇ ಸಿನಿಮಾವಾಗಲಿದೆ.