'ಕಿಚ್ಚ' ನಟನಿಗೆ ಅಣ್ಣನಿಂದಲೇ ವಿಷಪ್ರಾಶನ: ಭಯಾನಕ ಸತ್ಯ ತಿಳಿಸಿದ Ponnambalam

By Suvarna News  |  First Published Mar 17, 2023, 4:10 PM IST

ಕಿಚ್ಚ ಚಿತ್ರ ಸೇರಿ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ಟಾಲಿವುಡ್​ ಸ್ಟಂಟ್​ಮ್ಯಾನ್​ ಪೊನ್ನಂಬಲಂ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭ ನೆನಪಿಸಿಕೊಂಡಿದ್ದು, ಭಯಾನಕ ಸತ್ಯ ತೆರೆದಿಟ್ಟಿದ್ದಾರೆ. ಏನದು?
 


80-90ರ ದಶಕದಲ್ಲಿ ಜನಪ್ರಿಯ ಖಳನಟರಾಗಿ ಮಿಂಚಿದವರು ಪೊನ್ನಂಬಲಂ (Ponnambalam). ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಖಳನಾಯಕರಾಗಿರುವ ಇವರು  'ಸೂಪರ್ ಸ್ಟಾರ್' ರಜನಿಕಾಂತ್, ಕಮಲ್ ಹಾಸನ್, ಅಜಿತ್, 'ದಳಪತಿ' ವಿಜಯ್, ವಿಕ್ರಮ್ ಮುಂತಾದ ಸ್ಟಾರ್ ನಟರ ಎದುರು ವಿಲನ್ ಆಗಿ ನಟಿಸಿದ್ದಾರೆ. ಕನ್ನಡದ ‘ಚಿನ್ನ’, ‘ಲೇಡಿ ಕಮಿಷನರ್​’, ‘ಕಿಚ್ಚ’ (Kicchaa)  ‘ಗುನ್ನ’, ‘ಮಸ್ತಿ’ ಮೊದಲಾದ ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ತಮಿಳಿನಲ್ಲಿ ಕಾಮಿಡಿಯನ್ ಆಗಿ ಹೆಚ್ಚಾಗಿ ಗುರುತಿಸಿಕೊಂಡವರು. ಇಂಥ ನಟನಿಗೆ ಈಗ  59 ವರ್ಷ ವಯಸ್ಸು. ಈಚೆಗೆ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಇತ್ತೀಚೆಗೆ ಕಿಡ್ನಿ ಕಸಿಗೆ ಒಳಗಾದರು. ಕೈಯಲ್ಲಿ ದುಡ್ಡು ಇಲ್ಲದ ಸಮಯದಲ್ಲಿ ಅವರ ಸಂಪೂರ್ಣ ಖರ್ಚನ್ನು ವಹಿಸಿಕೊಂಡಿದ್ದು, ನಟ ಜಿರಂಜೀವಿಯವರು. ಈ ಕುರಿತು ಮಾಹಿತಿ ನೀಡಿದ್ದ ಪೊನ್ನಂಬಲಂ,  'ನನ್ನ ಚಿಕಿತ್ಸೆಗೆ ಖರ್ಚಾಗಿದ್ದ 45 ಲಕ್ಷ ರೂಪಾಯಿಗಳನ್ನೂ  ಚಿರಂಜೀವಿ ಅವರೇ ನೀಡಿದರು.  ದೇವರಂತೆ ಬಂದು ನನಗೆ ಸಹಾಯ ಮಾಡಿದರು. ಅಪೋಲೋ ಆಸ್ಪತ್ರೆ ರಾಮ್ ಚರಣ್ ಅವರ ಪತ್ನಿಯದ್ದು. ಅವರ ಮೂಲಕವೇ ನನಗೆ ಚಿಕಿತ್ಸೆ ಸಿಕ್ಕಿತು' ಎಂದು ನುಡಿದಿದ್ದರು.

ಅಷ್ಟಕ್ಕೂ ಇವರಿಗೆ ಕಿಡ್ನಿ ಸಮಸ್ಯೆ ಉಂಟಾಗಲು ಕಾರಣವನ್ನು ಅವರು ಈಗ ತೆರೆದಿಟ್ಟು ಇಡೀ ಚಿತ್ರರಂಗವೇ ಶಾಕ್​ ಆಗಿದೆ. ಮಾತ್ರವಲ್ಲದೇ ಅವರ ಕಥೆಯನ್ನು ಕೇಳಿ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದಾರೆ. ಪೊನ್ನಂಬಲಂ (Ponnambalam) ಹೆಚ್ಚು ಕುಡಿಯುತ್ತಾರೆ, ಈ ಕಾರಣಕ್ಕೆ ಕಿಡ್ನಿ ವೈಫಲ್ಯ (Kidney Fail) ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಸಲಿ ಕಥೆ ಬೇರೆಯೇ ಇದೆ. ಈ ಕುರಿತು ಅವರೇ ಮಾಹಿತಿ ನೀಡಿದ್ದಾರೆ. ಇವರನ್ನು  ಕೊಲ್ಲಲು  ಕುಟುಂಬಸ್ಥರೆ ಸಂಚು ರೂಪಿಸಿರುವ ಭಯಾನಕ ಸತ್ಯವನ್ನು ಅವರು ಹೇಳಿದ್ದಾರೆ. ಬಿಯರ್​ನಲ್ಲಿ ಅವರ ಸಹೋದರ ವಿಷ ಬೆರೆಸಿದ್ದರಿಂದ ಕಿಡ್ನಿ ಫೇಲ್ ಆಯ್ತು ಅಂತ ಪೊನ್ನಂಬಲಂ ಮಾಹಿತಿ ನೀಡಿದ್ದಾರೆ.  ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಬಹಿರಂಗಗೊಳಿಸಿದ್ದಾರೆ. 

Tap to resize

Latest Videos

Kapil Sharma: ನಕ್ಕು ನಗಿಸುವ ಹಾಸ್ಯನಟ ಕಪಿಲ್​ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

‘ಕುಡಿತದಿಂದ ನನ್ನ ಕಿಡ್ನಿ ಹಾಳಾಗಿಲ್ಲ. ಇದಕ್ಕೆ ಕಾರಣ ನನ್ನ ಸಹೋದರ. ನನ್ನ ತಂದೆಗೆ ನಾಲ್ಕು ಹೆಂಡತಿಯರು. ಮೂರನೇ ಹೆಂಡತಿಯ ಮಗ ಅಂದರೆ ಮಲ ಸಹೋದರ ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅವನ ಮೇಲೆ ಸಾಕಷ್ಟು ನಂಬಿಕೆ ಇತ್ತು. ನಾನು ಕುಡಿಯುತ್ತಿದ್ದ ಬಿಯರ್​ನಲ್ಲಿ ಸ್ಲೋ ಪಾಯ್ಸನ್ ಬೆರೆಸಿದ. ಇದರಿಂದ ನನ್ನ ಕಿಡ್ನಿ ವೈಫಲ್ಯ ಕಂಡಿತು’ ಎಂದು ಮಾಹಿತಿ ನೀಡಿದ್ದಾರೆ  ಪೊನ್ನಂಬಲ. ವೈದ್ಯರ (Doctor) ಬಳಿ ಪರೀಕ್ಷೆಗೆ ಒಳಗಾದಾಗಲೇ ವಿಷ ಉಣಿಸಿರುವ ವಿಚಾರ ಗೊತ್ತಾಯಿತು. ಇನ್ನು, ಪೊನ್ನಂಬಲಂ ಮೇಲೆ ಮಾಟಮಂತ್ರ ಕೂಡ ಮಾಡಲಾಗಿದೆಯಂತೆ. ‘ಶ್ರಮವಹಿಸಿ 1500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇಷ್ಟೆಲ್ಲ ಗಳಿಕೆ ಮಾಡಿದ್ದು ನನ್ನ ಕುಟುಂಬಕ್ಕಾಗಿ. ಆದರೆ, ನನ್ನ ಸಹೋದರನೇ ಈ ರೀತಿ ಮಾಡಿದ ಎಂದಾಗ ಬೇಸರ ಆಗುತ್ತದೆ’ ಎಂದಿದ್ದಾರೆ. ಅವನ ಮೇಲೆ ತುಂಬಾ ಭರವಸೆ ಇಟ್ಟಿದ್ದೆ. ಆದರೆ ಆತ ಯಾಕೆ ಹಾಗೆ ಮಾಡಿದನೋ ಗೊತ್ತಿಲ್ಲ. ತಿನ್ನುವ ಆಹಾರದಲ್ಲಿಯೂ ವಿಷ ಬೆರೆಸಿದ್ದ. ನನಗೆ ವೈದ್ಯರು ಹೇಳಿದಾಗಲೇ ವಿಷಯ ಗೊತ್ತಾದದ್ದು ಎಂದಿದ್ದಾರೆ. 

ನಟ ಕಮಲ್ ಹಾಸನ್ ಅವರು ಪೊನ್ನಂಬಲ ಅವರ ಮಕ್ಕಳ ಶಿಕ್ಷಣವೆಚ್ಚವನ್ನು ಭರಿಸುವ ಭರವಸೆ ನೀಡಿದ್ದು,  ರಜನಿಕಾಂತ್​ ಸಂಪೂರ್ಣ ನೆರವು ನೀಡಿದ್ದಾರೆ.  ಪೊನ್ನಂಬಲಂ ಅವರಿಗೆ ತಮಿಳಿನ ಶರತ್ ಕುಮಾರ್ ಸೇರಿದಂತೆ ಒಂದಷ್ಟು ಮಂದಿ ಸಹಾಯ ಮಾಡಿದ್ದಾರೆ. ಪೊನ್ನಂಬಲಂ ತಮ್ಮ ಪಿಆರ್ ಆಫೀಸರ್ ಮೂಲಕ ವಿಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ ನಟ ಆಕ್ಸಿಜನ್ ಮಾಸ್ಕ್ ನೆರವಿನಿಂದ ಉಸಿರಾಡುತ್ತಿರುವುದು ಕಂಡು ಬಂದಿತ್ತು. ಸ್ಟಂಟ್ ಮ್ಯಾನ್‌ (Stunt Man) ಆಗಿ ಸಿನಿಮಾರಂಗಕ್ಕೆ ಕಾಲಿರಿಸಿದ ಪೊನ್ನಂಬಲಂ ಅವರು, ಮುತ್ತು, ಅರುಣಾಚಲಂ ಸಿನಿಮಾದಲ್ಲಿ ರಜನಿ ಜೊತೆ ನಟಿಸಿದ್ದಾರೆ. 

Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ

click me!