ಪ್ರಜ್ಞೆ ತಪ್ಪಿ ಬಿದ್ದ ಹಾಸ್ಯ ನಟ Powerstar ಶ್ರೀನಿವಾಸನ್ ಆಸ್ಪತ್ರೆಗೆ ದಾಖಲು!

Suvarna News   | Asianet News
Published : Nov 16, 2021, 12:21 PM IST
ಪ್ರಜ್ಞೆ ತಪ್ಪಿ ಬಿದ್ದ ಹಾಸ್ಯ ನಟ Powerstar ಶ್ರೀನಿವಾಸನ್ ಆಸ್ಪತ್ರೆಗೆ ದಾಖಲು!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಪವರ್‌ಸ್ಟಾರ್ ಶ್ರೀನಿವಾಸನ್ ಆಸ್ಪತ್ರೆಯಲ್ಲಿರುವ ವಿಡಿಯೋ ವೈರಲ್. ನಟನ ಪರಿಸ್ಥಿತಿ ನೋಡಿ ಭಾವುಕರಾದ ವೀಕ್ಷಕರು...  

ತಮಿಳು ಚಿತ್ರರಂಗದ (Kollywood) ಪವರ್‌ಸ್ಟಾರ್ ಶ್ರೀನಿವಾಸನ್ (Powerstar Sinivas) ಯಾರಿಗೆ ಗೊತ್ತಿಲ್ಲ? ಗೊತ್ತಿಲ್ಲ ಎನ್ನೋರು ಬೆರಳೆಣಿಕೆಯಲ್ಲಿ ಸಿಗಬಹುದು ಅಷ್ಟೆ. ವಿಭಿನ್ನ ಶೈಲಿಯಲ್ಲಿ ಅಭಿಮಾನಿಗಳನ್ನು ವಿಪರೀತ ನಗಿಸುವ ನಟ ಶ್ರೀನಿವಾಸನ್ ಇದೀಗ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ (Social Media) ಈ ನಟ ಆಸ್ಪತ್ರೆಯಲ್ಲಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಗಾಬರಿಗೊಂಡಿದ್ದಾರೆ. 

ಕೆಲವು ದಿನಗಳ ಹಿಂದೆ ಶ್ರೀನಿವಾಸನ್ ಅವರು 'ಪಿಕಪ್ ಡ್ರಾಪ್' (Pickup drop) ತಮಿಳು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರು, ಕ್ಯಾಮೆರಾ (Camera) ಎದುರೇ ಪ್ರಜ್ಞೆ (faint) ತಪ್ಪಿ ಬಿದ್ದಿದ್ದಾರೆ. ಸೆಟ್‌ನಲ್ಲಿದ್ದ ಕಲಾವಿದರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀನಿವಾಸನ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿರುವ ಕಾರಣ ಹೀಗಾಗಿದೆ ಎನ್ನಲಾಗಿದೆ. ದಿನೇ ದಿನೇ ಶ್ರೀನಿವಾಸನ್ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಅಭಿಮಾನಿಗಳು ಅವರ ಕುಟುಂಬಸ್ಥರನ್ನು ಸಂಪರ್ಕ ಮಾಡುತ್ತಿದ್ದಾರೆ. 

ಸಿನಿಮಾದಲ್ಲಿ ಎಲ್ಲರನ್ನೂ ಉತ್ಸಾಹದಿಂದ ಮಾತನಾಡಿರುವ ವ್ಯಕ್ತಿ ಈ ರೀತಿ ಹಾಸಿಗೆ ಹಿಡಿದಿರುವುದನ್ನು ನೋಡಲು ಬೇಸರವಾಗುತ್ತಿದೆ ಎಂದಿದ್ದಾರೆ ಅಭಿಮಾನಿಗಳು. ಶ್ರೀನಿವಾಸನ್ ಅವರು ಯಾವ ಆಸ್ಪತ್ರೆಯಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಹೀಗಾಗಿ ಅಭಿಮಾನಿಗಳು ಸ್ವಯಂ ಹುಡುಕಾಟ ಶುರು ಮಾಡಿದ್ದಾರೆ.

ಚೆನ್ನೈನಲ್ಲಿ ಫೈನ್ಯಾನ್ಸ್‌ (Finance Firm) ವ್ಯಾಪಾರ ಶುರು ಮಾಡಿದ ಶ್ರೀನಿವಾಸನ್ ಜಾಹೀರಾತು ನಿರ್ದೇಶನ ಮಾಡುವವರಿಗೆ ಲೋನ್ ನೀಡುತ್ತಿದ್ದರು. ಆನಂತರ ತಾವೇ Lathika ಸಿನಿಮಾ ನಿರ್ಮಾಣ (Produce) ಮಾಡಲು ಮುಂದಾಗಿದ್ದರು. 2011ರಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡ ಶ್ರೀನಿವಾಸನ್ 2013ರಲ್ಲಿ 'ಕಣ್ಣಾ ಲಡ್ಡು ತಿನ್ನಾ ಆಸೆಯ್ಯಾ' ಚಿತ್ರದ ಮೂಲಕ ನಟನಾಗಿ ಎಂಟ್ರಿ ಕೊಟ್ಟರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡುತ್ತಿದ್ದಂತೆ, ಶ್ರೀನಿವಾಸನ್ ಅವರಿಗೆ ನಟಿಸಲು ಒಂದೊಂದೇ ಅವಕಾಶಗಳು ಹರಿದು ಬಂದವು. 

#WeStandWithSuriya: ನಟನಿಗೆ 5 ಕೋಟಿ ರೂ. ಪರಿಹಾರ ನೀಡಲು ಲೀಗಲ್ ನೋಟಿಸ್

ಮದುರೈನಲ್ಲಿ (Madhurai) ಹುಟ್ಟಿದ್ದ ಶ್ರೀನಿವಾಸನ್ ಅವರು ಮೊದಲು ವಿಜಯಾ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಕಾರಣಾಂತರಗಳಿಂದ ವಿಚ್ಛೇದನ ನೀಡಿ ಜೂಲಿ ಎಂಬುವವರನ್ನು ಮದುವೆ ಆಗಿದ್ದಾರೆ. 2012ರಲ್ಲಿ ವಂಚನೆ ಆರೋಪದ ಮೇಲೆ ಕಿಲ್ಪಾಕ್ ಪೊಲೀಸರು ಇವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. 2015ರಲ್ಲಿ ತಮಿಳು ಮಾನಿಲ ಕಚ್ಚಿ ಪಕ್ಷ ಸೇರಿಕೊಂಡರು.  2016ರಲ್ಲಿ ಪತ್ನಿ ಜೊತೆ ಬಿಜೆಪಿ ಸೇರಿಕೊಂಡರು. ಇದಾದ ನಂತರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು ಮತ್ತು 2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಪಕ್ಷದ RPI ಮಕ್ಕಳ್ ನಿಧಿ ಮೈಯಂ ಜೊತೆ ಸೇರಿಕೊಂಡರು. ತಲೈವಾ ರಜನಿಕಾಂತ್ ಏನಾದರೂ ರಾಜಕೀಯ ಪಕ್ಷನವನು ಪ್ರಾರಂಭಿಸಿದ್ದಿದ್ದರೆ, ತಾವೂ ಆ ಪಕ್ಷ ಆರಂಭಿಸುವುದಾಗಿ ಹೇಳಿಕೊಂಡಿದ್ದರು ಈ ನಟ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?