Kamal Haasan Birthday; 35 ವರ್ಷಗಳ ಬಳಿಕ ಮಣಿರತ್ನಂ ಜೊತೆ ಕಮಲ್ ಹಾಸನ್ ಸಿನಿಮಾ

Published : Nov 07, 2022, 11:47 AM IST
Kamal Haasan Birthday; 35 ವರ್ಷಗಳ ಬಳಿಕ ಮಣಿರತ್ನಂ ಜೊತೆ ಕಮಲ್ ಹಾಸನ್ ಸಿನಿಮಾ

ಸಾರಾಂಶ

ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಹುಟ್ಟುಹಬ್ಬದ ಸಂಭ್ರಮ. 67ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಕಮಲ್ ಹಾಸನ್ ಅವರಿಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. 

ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಹುಟ್ಟುಹಬ್ಬದ ಸಂಭ್ರಮ. 67ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಕಮಲ್ ಹಾಸನ್ ಅವರಿಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಬರೋಬ್ಬರಿ 60 ವರ್ಷಗಳಿಂದ ಕಮಲ್ ಹಾಸನ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ.  ಬಾಲನಟನಾಗಿಯೇ ಸಿನಿಮಾ ಜಗತ್ತಿಗೆ ಕಾಲಿಟ್ಟ ಕಮಲ್ ಹಾಸನ್ ಬಳಿಕ ಸೂಪರ್​ ಸ್ಟಾರ್​ ಖ್ಯಾತಿಳಿಸಿದರು. ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದು ಬಹುಬೇಡಿಕೆಯ ಹೀರೋ ಆಗಿದ್ದಾರೆ. ಫಿಟ್ ಅಂಡ್ ಫೈನ್ ಕಮಲ್ ಯುವಕರೂ ನಾಚುವಂತೆ ಫೈಟ್​ ಮಾಡುತ್ತ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಮಲ್ ಹಾಸನ್ ಇತ್ತೀಚಿಗಷ್ಟೆ ವಿಕ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಕ್ರಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಕಮಲ್ ಹಾಸನ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಜೊತೆ ಕಮಲ್ ಹಾಸ ಸಿನಿಮಾ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಥ್ರಿಲಿಂಗ ಸುದ್ದಿ ನೀಡಿದ್ದಾರೆ. ವಿಶೇಷ ಎಂದರೆ ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 35 ವರ್ಷಗಳ ಒಂದಾಗುತ್ತಿದ್ದಾರೆ. 1987ರಲ್ಲಿ ರಿಲೀಸ್ ಆಗಿದ್ದ ನಾಯಕನ್ ಸಿನಿಮಾದಲ್ಲಿ ಮಣಿರತ್ನಂ ಮತ್ತು ಕಮಲ್ ಹಾಸನ್ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ 3 ದಶಗಳ ಬಳಿಕ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 

ಕಮಲ್ ಹಾಸನ್ 'ಇಂಡಿಯನ್-2' ಸಿನಿಮಾದಲ್ಲಿ ಖ್ಯಾತ ಕ್ರಕೆಟರ್ ತಂದೆ

ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿರುವ ಕಮಲ್ ಹಾಸನ್, KH234 ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದೇವೆ ಎಂದು ಟೀಸರ್ ರಿಲೀಸ್ ಮಾಡಿದ್ದಾರೆ. ಇಬ್ಬರೂ ಘಟಾನುಘಟಿ  ಸ್ಟಾರ್ ಒಟ್ಟಿಗೆ ಸೇರಿರುವುದು ಅಭಿಮಾನಿಗಳಿಗೆ ಮಾತ್ರವಲ್ಲದೇ ಸಿನಿಮಾ ಮಂದಿಗೂ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾಗೆ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್, ಕಮಲ್ ಹಾಸನ್ ಅವರ ಕಮಲ್ ಫಿಲ್ಮ್ಸ್ ಇಂಟನ್ಯಾಷನ್ ಹಾಗೂ ಮಣಿ ರತ್ನಂ ಅವರ ಮಾದ್ರಸ್ ಟಾಕೀಸ್ ಒಟ್ಟಿಗೆ ಸೇರಿ ನಿರ್ಮಾಣ ಮಾಡುತ್ತಿದೆ. 

ಅಂದಹಾಗೆ ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದೆ. ಎಲ್ಲವು ಅಂದುಕೊಂಡಂತೆ ಆದರೆ ಈ ಸಿನಿಮಾ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ. ನಾಯಕಿ, ತಾಂತ್ರಿಕ ವರ್ಗ ಸೇರಿದಂತೆ ಈ ಸಿನಿಮಾದ ಬಗ್ಗೆ ಇನ್ನು ಹೆಚ್ಚಿನ ಸದ್ಯದಲ್ಲೇ ರಿವೀಲ್ ಆಗುವ ಸಾಧ್ಯತೆ ಇದೆ. 

Puneetha Parva; ಅಪ್ಪು ಬಗ್ಗೆ ಪ್ರೀತಿಯ ವಿಡಿಯೋ ಸಂದೇಶ ಕಳುಹಿಸಿದ ಕಮಲ್ ಹಾಸನ್

ಕಮಲ್ ಹಾಸನ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಧಕ್ಕೆ ನಿಂತಿದ್ದ ಇಂಡಿಯನ್-2 ಮತ್ತೆ ಪ್ರಾರಂಭವಾಗಿದ್ದು ಸದ್ಯ ಚಿತ್ರೀಕರಣ ನಡೆಯುತ್ತಿದೆ. ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಇನ್ನು ಮಣಿರತ್ನಂ ಸದ್ಯ ಪೊನ್ನಿಯಿನ್ ಸೆಲ್ವನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಪೊನ್ನಿಯನ್ ಸೆಲ್ವನ್ 1 ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಬಳಿಕ ಮಣಿರತ್ನಂ ಮತ್ತು ಕಮಲ್ ಸಿನಿಮಾ ಪ್ರಾರಂಭವಾಗಲಿದೆ. ಈ ಬಹುನಿರೀಕ್ಷೆಯ ಸಿನಿಮಾ 2024ರಲ್ಲಿ ರಿಲೀಸ್ ಆಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?