10ನೇ ಕ್ಲಾಸ್​​ ತಮನ್ನಾ ವಿಡಿಯೋ ವೈರಲ್​: ವಯಸ್ಸಿನ ಕುರಿತು ತಲೆ ಕೆಡಿಸಿಕೊಳ್ತಿದ್ದಾರೆ ಫ್ಯಾನ್ಸ್​!

By Suvarna News  |  First Published Oct 12, 2023, 3:21 PM IST

10ನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ವೇಳೆ ನಟಿ​​ ತಮನ್ನಾ ಭಾಟಿಯಾ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಈಕೆಯ ವಯಸ್ಸಿನ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.
 


ತಮನ್ನಾ ಭಾಟಿಯಾ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಅವರು ಅನೇಕ ಕಾರಣಗಳಿಗಾಗಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತೆಲುಗು ಹಾಗೂ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಜನಪ್ರಿಯರಾಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿಸಿದ್ದ ಭೋಳಾ ಶಂಕರ್ ಹಿಟ್ ಆಗದಿದ್ದರೂ ತಲೈವರ್ ರಜನಿಕಾಂತ್ ಅವರ ಜೈಲರ್ ಐಟಂ ಸಾಂಗ್ ಹಿಟ್ ಬ್ಯೂಟಿಗೆ ಉತ್ತಮ ಕಿಕ್ ನೀಡುತ್ತಿದೆ.   ಲಸ್ಟ್ ಸ್ಟೋರೀಸ್ 2, ಬಾಹುಬಲಿ 2, ಜೈಲರ್, ವೀರಂ, ಎಂಟರ್‌ಟೈನ್‌ಮೆಂಟ್, ಅಯಾನ್, ಆಕ್ಷನ್, ಬದರಿನಾಥ್ ಮತ್ತು ಇನ್ನೂ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿದ್ದಾರೆ ತಮನ್ನಾ. ಈಕೆ  ಮತ್ತು ನಟ ವಿಜಯ್ ವರ್ಮಾ  (Vijay Varma)  ಡೇಟಿಂಗ್ ಮಾಡುತ್ತಿರುವ ಸುದ್ದಿ ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ತಾರಾ ಜೋಡಿ  ಲಸ್ಟ್ ಸ್ಟೋರೀಸ್ 2 ಮೂಲಕ ತೆರೆಯ ಮೇಲೆ ಬಂದಿದೆ. ಈ ಜೋಡಿ ‘ಲಸ್ಟ್ ಸ್ಟೋರಿಸ್ 2’ (Lust Stories 2 Movie) ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದೆ. ಅಲ್ಲಿಂದ ಇವರ ಮಧ್ಯೆ ಪ್ರೀತಿ ಮೂಡಿದೆ. ನಿನ್ನೆ ಅಂದರೆ  ಜೂನ್ 29ಕ್ಕೆ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದು, ಇದಕ್ಕೆ ಸಕತ್​ ಬೇಡಿಕೆಯೂ ಬಂದಿದೆ. 

ಇದೀಗ ನಟಿಯ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಅದು 2005ರ ವಿಡಿಯೋ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು. ಈ ವಿಡಿಯೋ ತೆಗೆದಿದ್ದು 2005ರಲ್ಲಿ. ಅಂದರೆ ಆಗ ತಮನ್ನಾ ಅವರಿಗೆ 16 ವರ್ಷ ವಯಸ್ಸಾಗಿತ್ತು. ಎಸ್​ಎಸ್​​ಎಲ್​ಸಿಯಲ್ಲಿ ಓದುತ್ತಿದ್ದ ದಿನಗಳವು. ಅದೇ ವೇಳೆ ತಮನ್ನಾ ಚಾಂದ್ ಸಾ ರೋಷನ್ ಚೆಹ್ರಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಸಲಿಗೆ 13ನೇ ವರ್ಷದಿಂದಲೇ ಅವರು ನಟನಾ ಪ್ರಪಂಚಕ್ಕೆ ಕಾಲಿಟ್ಟಿದ್ದರು. ಅಂದು 10ನೇ ಕ್ಲಾಸ್​ ಅಂತಿಮ ಪರೀಕ್ಷೆ ಬರೆಯುತ್ತಿದ್ದ ತಮನ್ನಾ ಪರೀಕ್ಷೆಯ ಬಗ್ಗೆ ಮಾತನಾಡಿದ್ದರು.

Tap to resize

Latest Videos

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

  2004-2005 ರಲ್ಲಿ   ತಮನ್ನಾ ತನ್ನ ಚೊಚ್ಚಲ ಚಿತ್ರದ ಬಗ್ಗೆ ಸಂದರ್ಶನ ಮಾಡಿದ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕ್ಲಿಪ್‌ನಲ್ಲಿ, ತಮನ್ನಾ ಅವರು ಕೇವಲ 13 ವರ್ಷದವರಾಗಿದ್ದಾಗ ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕುವ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ನಟಿ,  ನೀಲಿ ಮತ್ತು ಕಿತ್ತಳೆ ಬಣ್ಣದ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರವಾದ ಕಿವಿಯೋಲೆಗಳನ್ನು ಧರಿಸಿದ್ದ ಅವರು  ನಾನು ಇದೀಗ ಶಾಲೆಯಲ್ಲಿ ಓದುತ್ತಿದ್ದೇನೆ. ನಾನು 10 ನೇ ತರಗತಿಯಲ್ಲಿದ್ದೇನೆ; ನಾನು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದೇನೆ.  ನಾನು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಆದರೆ, ನಾನು ಚಿತ್ರಕ್ಕೆ ಸಹಿ ಹಾಕಿದಾಗ ನನಗೆ ಕೇವಲ 13 ವರ್ಷ ವಯಸ್ಸಾಗಿತ್ತು. ಅಭ್ಯಾಸ ಮತ್ತು ಪರೀಕ್ಷೆ ಎರಡನ್ನೂ ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ.

 

ಆದರೆ ಅಸಲಿಗೆ ಈ ವಿಡಿಯೋದಲ್ಲಿ ನಟಿ 10ನೇ ಕ್ಲಾಸ್​​ ಹುಡುಗಿಯ ರೀತಿ ಕಾಣಿಸುತ್ತಿಲ್ಲ ಎನ್ನುವುದು ಈಕೆಯ ಫ್ಯಾನ್ಸ್​ ಅಭಿಮತ. ನೋಡಲು ಕೂಡ ಚೆನ್ನಾಗಿರಲಿಲ್ಲ, ಈಗ ಕೆಜಿಗಟ್ಟಲೆ ಮೇಕಪ್​ ಮಾಡಿ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂದು ಹಲವರು ಹೇಳಿದರೆ, ಈಕೆ ಈಗಿನ ತಮನ್ನಾ ಭಾಟಿಯಾ ಎಂದು ಅಂದುಕೊಳ್ಳುವುದು ಕಷ್ಟವೇ. 10ನೇ ಕ್ಲಾಸ್​ನಲ್ಲಿಯೇ ಇಷ್ಟು ದೊಡ್ಡ ಮಹಿಳೆಯ ರೀತಿ ಕಾಣಿಸುತ್ತಿದ್ದಾರೆ ಎಂದು ಹಲವರು ಆಡಿಕೊಳ್ಳುತ್ತಿದ್ದಾರೆ. ಈಕೆ  20-21 ವಯಸ್ಸಿನವಳಂತೆ ಕಾಣುತ್ತಾಳೆ. ಬಾಲಕಿಯ ರೀತಿ ಕಾಣಿಸುವುದೇ ಇಲ್ಲ ಎಂದಿದ್ದಾರೆ. ಇನ್ನು ಕೆಲವರು ಮಹಿಳೆಯರು ಅದರಲ್ಲಿಯೂ ನಟಿಯರು ಯಾವಾಗಲೂ ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಾರೆ. ಈಕೆಯ ವಿಡಿಯೋ ನೋಡಿದರೆ 16 ವರ್ಷ ವಯಸ್ಸಾದಂತೆ ಇಲ್ಲವೇ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ತಮನ್ನಾ ವಯಸ್ಸಿನ ಕುರಿತು ಭಾರಿ ಚರ್ಚೆ ಶುರುವಾಗಿದೆ.

ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್​ ಕಪೂರ್​ ಈ ಪರಿ ರೊಮ್ಯಾನ್ಸ್! ಉಫ್​ ಎಂದ ಫ್ಯಾನ್ಸ್​...

 ಇನ್ನು ತಮನ್ನಾ ಅವರು ಸಿನಿ ಕರಿಯರ್​ ಕುರಿತು ಹೇಳುವುದಾದರೆ, ಇವರು ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ  ಹೆಸರುವಾಸಿಯಾಗಿದ್ದಾರೆ. 2005 ರ ಹಿಂದಿ ಚಲನಚಿತ್ರ ಚಾಂದ್ ಸಾ ರೋಷನ್ ಚೆಹ್ರಾ ನಂತರ, ತಮನ್ನಾ ಶ್ರೀ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮರುವರ್ಷವೇ ಕೇದಿ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ಅದೇ ಹೆಸರಿನ 1983 ರ ಹಿಂದಿ ಚಲನಚಿತ್ರದ ರಿಮೇಕ್ ಹಿಮ್ಮತ್‌ವಾಲಾ (2013) ನೊಂದಿಗೆ ಚೊಚ್ಚಲ ಪಾತ್ರದ ನಂತರ ಅವರು ಹಿಂದಿ ಚಲನಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇತ್ತೀಚಿಗೆ, ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಅವರ ಚಿತ್ರ ಜೈಲರ್ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು, ವಿಶ್ವದಾದ್ಯಂತ ₹650 ಕೋಟಿಗೂ ಹೆಚ್ಚು ಗಳಿಸಿತು. SS ರಾಜಮೌಳಿಯ ಬಾಹುಬಲಿ: ದಿ ಬಿಗಿನಿಂಗ್ (2015) ನಲ್ಲಿನ ಯೋಧ ರಾಜಕುಮಾರಿ ಆವಂತಿಕಾ ಅವರ ಅತ್ಯಂತ ಗಮನಾರ್ಹ ಪಾತ್ರಗಳಲ್ಲಿ ಒಂದಾಗಿದೆ, ಇದು ದ್ವಿಭಾಷಾ ಮಹಾಕಾವ್ಯ ಚಲನಚಿತ್ರ ಬಾಹುಬಲಿಯಲ್ಲಿನ ಎರಡು ಚಲನಚಿತ್ರಗಳಲ್ಲಿ ಮೊದಲನೆಯದು, ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

click me!