ಬಾಲಿವುಡ್ ಸೇರಿ ಭಾರತದ ಸಿನಿ ಜಗತ್ತಿನಲ್ಲಿ ಇದೀಗ ಹೆಚ್ಚು ಸುದ್ದಿಯಲ್ಲಿರೋದು ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಲೋವ್ ಸ್ಟೋರಿ. ಲಸ್ಟ್ ಸ್ಟೊರೀಸ್-2 ಮೂಲಕು ಈ ಜೋಡಿ ಸದ್ದು ಮಾಡುತ್ತಿದ್ದು, ಸೆಕ್ಸ್ ಬಗ್ಗೆಯೂ ಇದಾಗ ಬಾಯಿ ಬಿಟ್ಟಿದ್ದಾರೆ.
ನಟರಾದ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ (Vijay Varma) ಡೇಟಿಂಗ್ ಮಾಡುತ್ತಿರುವ ಸುದ್ದಿ ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ತಾರಾ ಜೋಡಿ ಲಸ್ಟ್ ಸ್ಟೋರೀಸ್ 2 ಮೂಲಕ ತೆರೆಯ ಮೇಲೆ ಬಂದಿದೆ. ಈ ಜೋಡಿ ‘ಲಸ್ಟ್ ಸ್ಟೋರಿಸ್ 2’ (Lust Stories 2 Movie) ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದೆ. ಅಲ್ಲಿಂದ ಇವರ ಮಧ್ಯೆ ಪ್ರೀತಿ ಮೂಡಿದೆ. ನಿನ್ನೆ ಅಂದರೆ ಜೂನ್ 29ಕ್ಕೆ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದು, ಇದಕ್ಕೆ ಸಕತ್ ಬೇಡಿಕೆಯೂ ಬಂದಿದೆ. ಈ ತಾರಾ ಜೋಡಿ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ ಅದರ ಬಗ್ಗೆ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದರೆ ಈಗ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಖುದ್ದು ತಮನ್ನಾ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ತಾವು ನಿಜವಾಗಿಯೂ ಸಂಬಂಧದಲ್ಲಿ ಇರುವುದಾಗಿ ಖಚಿತಪಡಿಸಿರುವುದು ಬಹುಶಃ ಇದೇ ಮೊದಲು. ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ ತೀರಾ ವೈಯಕ್ತಿಕ ವಿಷಯಗಳನ್ನು ಈ ಜೋಡಿಗೆ ಕೇಳಲಾಗಿದೆ.
ಇಬ್ಬರೂ ಪ್ರೀತಿ ವಿಚಾರವನ್ನು ಬಹುತೇಕ ಒಪ್ಪಿಕೊಂಡಿದ್ದಾರೆ. ಈಗ ವಿಜಯ್ ವರ್ಮಾ (Vijay Varma) ಅವರು ಸೆಕ್ಸ್ ವಿಚಾರದಲ್ಲಿ ನೇರವಾಗಿ ಮಾತನಾಡಿದ್ದಾರೆ. ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಈ ಜೋಡಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ಸೀನ್‌ಗಳ ಝಲಕ್ ಕೂಡ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಜೋಡಿಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ, ಜೋಡಿ ಮಾತ್ರ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ಈಗ ತಾವು ಡೇಟಿಂಗ್ ಮಾಡುತ್ತಿರುವ ವಿಚಾರದಲ್ಲಿ ಇಬ್ಬರೂ ನೇರವಾಗಿ ಹೇಳಿಕೆ ನೀಡುತ್ತಿದ್ದಾರೆ. ಸೆಕ್ಸ್ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಮೊದಲು ಭೇಟಿ ಆಗಿದ್ದು ಯಾವಾಗ? ಮೊದಲ ಭೇಟಿ ವೇಳೆ ಒಬ್ಬರ ಮೇಲೆ ಒಬ್ಬರಿಗೆ ಇದ್ದ ಅಭಿಪ್ರಾಯ ಸೇರಿ ಎಲ್ಲ ವಿಚಾರಗಳಲ್ಲಿ ಇವರು ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟು ದಿನಗಳ ಕಾಲ ನಮ್ಮ ನಡುವೆ ಏನಿಲ್ಲ ಎಂದು ಹೇಳುತ್ತಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯನ್ನ ಅಧಿಕೃತಗೊಳಿಸಿದ್ದಾರೆ. ಇತ್ತೀಚೆಗೆ ತಮನ್ನಾ, ವಿಜಯ್ ನನ್ನ ಖುಷಿಯ ಖಜಾನೆ ಎಂದು ಹೇಳಿದ್ದಾರೆ.
Lust Stories 2 : ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪಡೆದ ಸಂಭಾವನೆ ಎಷ್ಷು?
ತಮನ್ನಾ, ವಿಜಯ್ ವರ್ಮಾ, ನಿರ್ದೇಶಕ ಸುಜಯ್ ಘೋಷ್ (Sujay Ghosh) ಸಂದರ್ಶನದಲ್ಲಿ ಭಾಗಿ ಆಗಿದ್ದರು. ಸಂದರ್ಶನದ ಚೌಕಟ್ಟು ಮೀರಿದ ಪ್ರಶ್ನೆಗಳನ್ನು ಈ ಸಂದರ್ಭದಲ್ಲಿ ಕೇಳಲಾಗಿದೆ. ‘ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ’ ಎಂದು ಪ್ರಶ್ನೆ ಮಾಡಲಾಯಿತು. ಆಗ ಕೂಡಲೇ ತಮನ್ನಾ ‘ಬೋರಿಂಗ್ ಡೇಟ್’ ಎಂದು ಉತ್ತರ ನೀಡಿದರೆ, ಮಧ್ಯೆ ಪ್ರವೇಶಿಸಿದ ವಿಜಯ್ ವರ್ಮಾ, ‘ಮೊದಲ ಡೇಟ್ನಲ್ಲಿ ಯಾವುದೇ ಕಾಮ ಇರಲಿಲ್ಲ’ ಎಂದಿದ್ದಾರೆ. ಆಗ ಸುಜಯ್ ಅವರು, ‘ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ’ ಎಂದು ನಗುವ ಮೂಲಕ ಉತ್ತರಿಸಿದ್ದಾರೆ.
ಅಂದಹಾಗೆ ಇವರ ‘ಲಸ್ಟ್ ಸ್ಟೋರಿಸ್ 2’ ನಿನ್ನೆ ಅಂದರೆ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ.
ಲಸ್ಟ್ ಸ್ಟೋರೀಸ್ 2 ಸ್ಕ್ರೀನಿಂಗ್: ಒಟ್ಟಿಗೇ ಕಾಣಿಸಿಕೊಂಡ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ!