ಮಧ್ಯ ಬೆರಳಲ್ಲಿ ನಾಯಕಿ: ವಿಜಯ್ ದೇವರಕೊಂಡ ತಮ್ಮನ ಸಿನಿಮಾ ಪೋಸ್ಟರ್ ವಿವಾದ, ವಿರೋಧದ ಬಳಿಕ ಡಿಲೀಟ್

Published : Jun 30, 2023, 01:08 PM ISTUpdated : Jun 30, 2023, 01:21 PM IST
ಮಧ್ಯ ಬೆರಳಲ್ಲಿ ನಾಯಕಿ: ವಿಜಯ್ ದೇವರಕೊಂಡ ತಮ್ಮನ ಸಿನಿಮಾ ಪೋಸ್ಟರ್ ವಿವಾದ, ವಿರೋಧದ ಬಳಿಕ  ಡಿಲೀಟ್

ಸಾರಾಂಶ

ಮಧ್ಯ ಬೆರಳಲ್ಲಿ ನಾಯಕಿ. ವಿಜಯ್ ದೇವರಕೊಂಡ ತಮ್ಮ ಆನಂದ್ ದೇವರಕೊಂಡ ನಟನೆಯ ಬೇಬಿ ಸಿನಿಮಾದ ಪೋಸ್ಟರ್ ವಿವಾದ ಸೃಷ್ಟಿಸಿದೆ. ಭಾರಿ ವಿರೋಧದ ಬಳಿಕ   ಸಿನಿಮಾತಂಡ ಡಿಲೀಟ್ ಮಾಡಿದೆ.  

ಬೇಬಿ ತೆಲುಗಿನಲ್ಲಿ ರಿಲೀಸ್‌ಗೆ ಸಿದ್ಧವಾಗಿರುವ ಸಿನಿಮಾ. ಪುಟ್ಟ ಸಿನಿಮಾವಾಗಿದ್ದರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಒಂದು ಪೋಸ್ಟರ್. ಬೇಬಿ ಸಿನಿಮಾದಿಂದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಸಂಚಲನ ಸೃಷ್ಟಿ ಮಾಡಿತ್ತು. ಅಷ್ಟೆಲ್ಲದೇ ದೊಡ್ಡ ವಿವಾದವನ್ನೇ ಎಬ್ಬಿಸಿತು. ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರಹಾಕಿದರು. ಅಷ್ಟಕ್ಕೂ ಆ ಪೋಸ್ಟರ್‌ನಲ್ಲಿ ಏನಿತ್ತು ಅಂತಿರಾ? ಪುರುಷನ ಮಧ್ಯ ಬೆರಳಲ್ಲಿ ನಾಯಕಿಯನ್ನು ಚಿತ್ರಿಸಲಾಗಿತ್ತು. ಆ ಪೋಸ್ಟರ್ ಸ್ತ್ರೀವಾದಿಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಬೇಬಿ ಒಂದು ಸುಂದರ ಪ್ರೇಮಕಥೆ ಅಂದುಕೊಂಡರೆ ಇಂಥ ಕೆಟ್ಟ ಪೋಸ್ಟರ್ ಗಳ ಮೂಲಕ ಚೀಪ್ ಪ್ರಚಾರ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. ಸಿನಿಮಾದಲ್ಲಿ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಇನ್ನೂ ಕೆಲವರು ಆರೋಪಿಸುತ್ತಿದ್ದಾರೆ. ಪೋಸ್ಟರ್ ದೊಡ್ಡ ಮಟ್ಟದಲ್ಲಿ ವಿವಾದ ಎಬ್ಬಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸಿನಿಮಾತಂಡ ತಕ್ಷಣ ಪೋಸ್ಟರ್ ಡಿಲೀಟ್ ಮಾಡಿದೆ.  ಅಷ್ಟೆಯಲ್ಲದೇ ನಿರ್ದೇಶಕ ಸಾಯಿ ರಾಜೇಶ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. 

ಕ್ಷಮೆಕೇಳುತ್ತಾ ಈ ಪೋಸ್ಟರ್ ಅನ್ನು ವಾಪಾಸ್ ಪಡೆಯಲಾಗಿದೆ. ಇದು ಚಿತ್ರದಲ್ಲಿನ ಪ್ರಮುಖ ದೃಶ್ಯವಾಗಿದೆ. ಖಂಡಿತವಾಗಿಯೂ ಚಲನಚಿತ್ರದ ಥೀಮ್‌ಗೆ ಸಂಬಂಧಿಸಿಲ್ಲ' ಎಂದು ಹೇಳಿದ್ದಾರೆ. ಪೋಸ್ಟರ್ ರಿಲೀಸ್ ಆದ ಕೇವಲ 30 ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ವಿವಾದ ಕೂಡ ದೊಡ್ಡ ಮಟ್ಟದಲ್ಲಿ ಬೆನ್ನಟ್ಟಿತು. ಇದೀಗ ಸಾಮಾಜಿಕ ಜಾಲತಾಣದ ಅನೇಕ ಖಾತೆಗಳಿಂದ ಪೋಸ್ಟರ್ ಡಿಲೀಟ್ ಆಗಿದೆ.

ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ; ರಶ್ಮಿಕಾ ಅಲ್ಲ!

ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ವೈಷ್ಣವಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ಬೇಬಿ ಇದೀಗ ಪೋಸ್ಟರ್ ವಿವಾದದ ಮೂಲಕ ಸದ್ದು ಮಾಡುತ್ತಿದೆ. ಈ ಬಗ್ಗೆ ಸಿನಿಮಾತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ, ನಿಜಕ್ಕೂ ಸಿನಿಮಾದಲ್ಲಿ ಏನಿದೆ ಎನ್ನುವುದು ಜುಲೈ 14ಕ್ಕೆ ಗೊತ್ತಾಗಲಿದೆ.

ರಶ್ಮಿಕಾ -ವಿಜಯ್ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್: ಫ್ಯಾಮಿಲಿ ಜೊತೆ ನಟ-ನಟಿ ಲಂಚ್ ಪಾರ್ಟಿ!

ಆನಂದ್ ದೇವರಕೊಂಡ ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ಮಿಂಚಿದ್ದಾರೆ. ದೊರಸಾನಿ ಸಿನಿಮಾ ಮೂಲಕ ಆನಂದ್ ದೇವರಕೊಂಡ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡರು. ಬಳಿಕ ಮಿಡಲ್ ಕ್ಲಾಸ್, ಪುಷ್ಪಕ ವಿಮಾನಂ ಹಾಗೂ ಹೈವೇ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಇದೀಗ ಬೇಬಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಗಳಿಸುತ್ತಾರಾ ಕಾದು  ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್