ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್ ಇನ್‌ಸ್ಟಾಗ್ರಾಮ್ ಹಿಂಬಾಲಕರನ್ನು ಹೊಂದಿ ದಾಖಲೆ ಬರೆದ ಜನಪ್ರಿಯ ನಟಿ!

By Gowthami K  |  First Published Sep 1, 2023, 1:00 PM IST

ಈ ಭಾರತೀಯ ನಟಿ 1 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದು, ಇನ್‌ಸ್ಟಾಗ್ರಾಮ್  ಸೇರಿದ 9 ಗಂಟೆಗಳಲ್ಲಿ  ದಾಖಲೆ ಬರೆದಿದ್ದಾರೆ. ಭಾರತದ ಯಾವ ನಟಿಯೂ ಇಷ್ಟೊಂದು ವೇಗದಲ್ಲಿ ಹಿಂಬಾಲಕರನ್ನು ಪಡೆದ ಉದಾಹರಣೆ ಇಲ್ಲ.


ಆಗಸ್ಟ್ 31 ರಂದು, ಭಾರತೀಯ ಮನರಂಜನಾ ಉದ್ಯಮದಲ್ಲಿ ಟಾಪ್‌ ನಲ್ಲಿರುವ ನಟಿಯೊಬ್ಬರ ಮುಖವು ಅಂತಿಮವಾಗಿ Instagram ಗೆ ಸೇರಿಕೊಂಡಿತು. ಫೋಟೋಶೇರಿಂಗ್ ಅಪ್ಲಿಕೇಶನ್ ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಯ ಆಯ್ಕೆಯಾಗಿದೆ ಆದರೆ ಈ ಟಾಪ್ ನಟಿ ಅದರಿಂದ ದೂರವಿದ್ದರು. 

ಆ ನಟಿ ಬೇರೆ ಯಾರು ಅಲ್ಲ ನಯನತಾರಾ. ನಟಿ  ಅಂತಿಮವಾಗಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದು ಕೇವಲ 9 ಗಂಟೆಗಳಲ್ಲಿ ತನ್ನ ಅಧಿಕೃತ ಪ್ರೊಫೈಲ್‌ನಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಗಳಿಸಿದರು. ಇದು ಭಾರತೀಯ ನಟಿಯರಲ್ಲಿ ಅತೀ ವೇಗವಾಗಿ   ಫಾಲೋವರ್ಸ್‌ಗಳನ್ನು ಹೊಂದಿದ ಮೊದಲ ನಟಿಯಾಗಿದ್ದಾರೆ.

Tap to resize

Latest Videos

 ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ಐಟಂ ಗರ್ಲ್ ಸಮಂತಾ, ಪ್ರತಿ ಹಾಡಿಗೆ 5 ಕೋಟಿ ರೂ!

ಒಂದೆರಡು ವರ್ಷಗಳ ಹಿಂದೆ ಕತ್ರಿನಾ ಕೈಫ್ ಇನ್‌ಸ್ಟಾಗ್ರಾಮ್‌ಗೆ ಸೇರಿದಾಗ, ಅವರು ಕೇವಲ 24 ಗಂಟೆಗಳಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದರು. ಇದೀಗ ಈ ದಾಖಲೆಯನ್ನು ನಯನತಾರಾ ಹಿಂದಿಕ್ಕಿದ್ದಾರೆ. ಈ ಮೂಲಕ ದಾಖಲೆ ಬರೆದಿದ್ದಾರೆ. 

ಅವರು ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್ ಇನ್‌ಸ್ಟಾ ಅನುಯಾಯಿಗಳನ್ನು ದಾಟಿದ್ದು, ಸೆ.1ರ ಶುಕ್ರವಾರ ಅಂದರೆ 24 ಗಂಟೆಗಳಲ್ಲಿ ಅವರ ಅನುಯಾಯಿಗಳ ಸಂಖ್ಯೆ 1.4 ಮಿಲಿಯನ್‌ ಗೆ ಏರಿಕೆಯಾಗಿದೆ.  

ಪಾಶ್ಚಾತ್ಯ ಸೆಲೆಬ್ರಿಟಿಗಳಾದ ಜೆನ್ನಿಫರ್ ಅನ್ನಿಸ್ಟನ್, ಬೆಯೋನ್ಸ್, ಜೆನ್ನಿಫರ್ ಲೋಪೆಜ್ ಮತ್ತು ಪ್ರಿಯಾಂಕಾ ಚೋಪ್ರಾ, ಸಮಂತಾ ಪ್ರಭು ಅವರ ಜವಾನ್ ಸಹನಟ ಶಾರುಖ್ ಖಾನ್, ಸಂಯೋಜಕ ಅನಿರುದ್ಧ್ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಸೇರಿದಂತೆ ಕೇವಲ 10 ಜನರನ್ನು ಮಾತ್ರ ನಯನತಾರಾ ಫಾಲೋ ಮಾಡುತ್ತಿದ್ದಾರೆ.

ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ ಲಂಡನ್ ನಿವಾಸ!

ನಯನತಾರಾ ತನ್ನ ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿ ತನ್ನ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಜೊತೆ   ರೀಲ್‌ ಮಾಡಿದ್ದಾರೆ. ಆರಂಭದಿಂದಲೂ ತಮ್ಮ ಟ್ವಿನ್ಸ್ ಮಕ್ಕಳ ಮುಖವನ್ನು ಎಲ್ಲೂ ತೋರಿಸದಿದ್ದ ನಯನತಾರಾ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳನ್ನು ಪರಿಚಯಿಸಿದ್ದಾರೆ.  ಮೂವರೂ ಕೂಡ ಮ್ಯಾಚಿಂಗ್ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದರು. ಈ ವೀಡಿಯೊಗೆ ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು ಬಂದಿದೆ. ನಟಿ  ಇದರ ಜೊತೆಗೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಜವಾನ್ ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ.

click me!