ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ತಮನ್ನಾರ ರ‍್ಯಾಂಪ್ ವಾಕ್ ಟ್ರೋಲ್‌, ಕುಸ್ತಿ ಆಡಲು ಬಂದ್ರಾ ಎಂದ ನೆಟಿಜನ್ಸ್

Published : Oct 18, 2023, 01:15 PM IST
ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ತಮನ್ನಾರ ರ‍್ಯಾಂಪ್ ವಾಕ್ ಟ್ರೋಲ್‌, ಕುಸ್ತಿ ಆಡಲು ಬಂದ್ರಾ ಎಂದ ನೆಟಿಜನ್ಸ್

ಸಾರಾಂಶ

ಭಾರತದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್‌ ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು,  ಆಕೆಯ  ರ‍್ಯಾಂಪ್ ವಾಕ್ ವೀಡಿಯೊ ಈಗ ಸಖತ್‌ ಟ್ರೋಲ್‌ಗೆ ಗುರಿಯಾಗಿದೆ.

ಭಾರತದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್‌ ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು,  ಆಕೆಯ  ರ‍್ಯಾಂಪ್ ವಾಕ್ ವೀಡಿಯೊ ಈಗ ಸಖತ್‌ ಟ್ರೋಲ್‌ಗೆ ಗುರಿಯಾಗಿದೆ. ರ‍್ಯಾಂಪ್ ವಾಕ್  ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ನೆಟಿಜನ್‌ಗಳು ಆಕೆಯ ಕ್ಯಾಟ್‌ ವಾಕ್‌ ಬಗ್ಗೆ ದೂಷಿಸಿದ್ದಾರೆ. ಇದು ಬೆಕ್ಕಿನ ನಡಿಗೆಯಲ್ಲ, ನಟಿಗೆ ಕ್ಯಾಟ್‌ ವಾಕ್‌ ಮಾಡಲು ಬರುವುದಿಲ್ಲ. ಈಕೆ ಕುಸ್ತಿ ಆಡಲು ಬಂದಂತಿದೆ ಎಂದು ವ್ಯಂಗ್ಯವಾಡಿದ್ದಾರೆ

ಇನ್ನು ಕೆಲವರು ಆಕೆ ಡಬ್ಲೂ ಡಬ್ಯೂ  ಅಂಡರ್‌ ಟೇಕರ್ ನಡಿಗೆಯಂತೆ ಆಕೆಯ ನಡಿಗೆ ಕಾಣುತ್ತಿದೆ. ಅದರಲ್ಲಿ ಏನು ತಪ್ಪಾಗಿದೆ ಎಂದು ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಬೌನ್ಸರ್‌ ನಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ.

ಮುತ್ತುಗಳಿಂದ ಪೂಣಿಸಿದ್ದ ಭಾರೀ ಲೆಹೆಂಗಾ ಚೋಲಿಯನ್ನು ನಟಿ ಈ ಫ್ಯಾಶನ್‌ ವೀಕ್‌ ಗೆ ಧರಿಸಿದ್ದರು. ಲೆಹೆಂಗಾ ಚೋಲಿ ಭಾರವಾಗಿದ್ದ ಕಾರಣ ಆಕೆಗೆ ಕ್ಯಾಟ್‌ ವಾಕ್‌ ಮಾಡುವುದು ಕಷ್ಟವಾಗಿದೆ. ಹೀಗಾಗಿ ನೋಡುಗರಿಗೆ ಅದು ಬೆಕ್ಕಿನ ನಡಿಗೆಯಂತೆ ಕಂಡಿಲ್ಲ. ಈ ಲೆಹೆಂಗಾವನ್ನು ಪ್ರಖ್ಯಾತ ಫ್ಯಾಶನ್ ಸಂಸ್ಥೆ ವಿವಾನಿ ಡಿಸೈನ್‌ ಮಾಡಿದೆ. ಮೊದಲ ಬಾರಿಗೆ ಲಾಕ್ಮೇ ಪ್ಯಾಷನ್‌ ವೀಕ್‌ ನಲ್ಲಿ ವಿವಾನಿಗೆ ಈ ಅವಕಾಶ ಸಿಕ್ಕಿತ್ತು.  ಸ್ಮೋಕಿ ಕಣ್ಣುಗಳು, ಹೊಳಪುಳ್ಳ ಲಿಪ್‌ಸ್ಟಿಕ್ ಧರಿಸಿದ್ದ ನಟಿ ಈ ಬಟ್ಟೆಯಲ್ಲಿ ತುಂಬಾ ಅಂದವಾಗಿ ಕಾಣುತ್ತಿದ್ದರು. 

ತಮನ್ನಾ ಭಾಟಿಯಾ ಪ್ರಧಾನವಾಗಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ. ಅಭಿಜಿತ್ ಸಾವಂತ್ ಅವರ ಆಲ್ಬಮ್‌ನ ಮ್ಯೂಸಿಕ್ ವಿಡಿಯೋ ಲಫ್ಜೋ ಮೇನಲ್ಲಿ ನಟಿಸುವ ಮೂಲಕ ನಟಿ ಮನರಂಜನಾ ಉದ್ಯಮದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದರು. ಚಾಂದ್ ಸಾ ರೋಷನ್ ಚೆಹ್ರಾ ಎಂಬ ಹಿಂದಿ ಚಲನಚಿತ್ರದ ಮೂಲಕ ಅವರು ನಟನೆಗೆ ಪದಾರ್ಪಣೆ ಮಾಡಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್