ಸುಲ್ತಾನ್ ಆಫ್ ದೆಹಲಿ ವೆಬ್ ಸೀರೀಸ್ನಲ್ಲಿ ನಾನು ಮಾಡಿದ್ದು ಸೆಕ್ಸ್ ಸೀನೆಂದು ಪ್ಲೀಸ್ ನೋಯಿಸಬೇಡಿ, ಅದು ರೇಪ್ ಸೀನ್ ಅಷ್ಟೇ ಎಂದು ನಟಿ ಮೆಹ್ರೀನ್ ಹೇಳಿದ್ದಾರೆ.
ತೆಲಗು ಚಿತ್ರರಂಗದ ಖ್ಯಾತ ನಟಿ ಮೆಹ್ರೀನ್ ಕೌರ್ ಪಿರ್ಜಾದಾ. ‘ಸುಲ್ತಾನ್ ಆಫ್ ದೆಹಲಿ’ ವೆಬ್ ಸರಣಿಯಲ್ಲಿ ನಟಿಸಿ ಸಕತ್ ಫೇಮಸ್ ಆಗಿರೋ ಈ ನಟಿ ಇದೀಗ ತಮಗೆ ಅವಮಾನ ಮಾಡಲಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. 2016 ರಲ್ಲಿ ತೆರೆಕಂಡ `ಕೃಷ್ಣ ಗಾಡಿ ವೀರ ಪ್ರೇಮಗಾಥಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಖ್ಯಾತಿ ಪಡೆದಿರುವ ಮೆಹ್ರೀನ್ ಇದೀಗ ‘ಸುಲ್ತಾನ್ ಆಫ್ ದೆಹಲಿ’ ವೆಬ್ ಸರಣಿಯ ವಿಷಯದಲ್ಲಿ ಬಹಳ ಸುದ್ದಿಯಲ್ಲಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್ ಸರಣಿಯಲ್ಲೂ ಬೇಡಿಕೆ ಹೊಂದಿರೋ ನಟಿ, ಈಚೆಗೆ ಒಟಿಟಿ ಲೋಕಕ್ಕೆ ಕಾಲಿಟ್ಟಿದ್ದು, ಇಲ್ಲಿ ತಮಗೆ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇವರು ನಟಿಸಿರೋ ಮೊದಲ ವೆಬ್ ಸೀರಿಸೇ ‘ಸುಲ್ತಾನ್ ಆಫ್ ದೆಹಲಿ’ (Sultan of Delhi). ಇದು ಇತ್ತೀಚೆಗೆ ಬಿಡುಗಡೆ ಆಗಿದ್ದು, ಇದರಲ್ಲಿ ಈಕೆ ಸೆಕ್ಸ್ ಸೀನ್ ಮಾಡಿದ್ದಾರೆ ಎಂದು ಸುದ್ದಿಯಾಗುತ್ತಿದೆ.
ಅಷ್ಟಕ್ಕೂ ‘ಸುಲ್ತಾನ್ ಆಫ್ ದೆಹಲಿ’ ವೆಬ್ ಸರಣಿಯಲ್ಲಿ ತಾವು ಮಾಡಿರುವುದು ಸೆಕ್ಸ್ ಸೀನ್ ಅಲ್ಲ, ಬದಲಿಗೆ ಅಲ್ಲಿ ಇರುವುದು ಕ್ರೂರವಾದ ವೈವಾಹಿಕ ಅತ್ಯಾಚಾರದ ದೃಶ್ಯ. ನಾನು ಅದನ್ನು ನಟಿಸಿದ್ದೇನೆ. ಆದರೆ ಹಲವರು ಇದನ್ನೇ ಸೆಕ್ಸ್ ಸೀನ್ ಎಂದು ಹೇಳಿ ಅವಮಾನ ಮಾಡುತ್ತಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ನಟಿ ಮೆಹ್ರೀನ್ ಪಿರ್ಜಾದಾ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿರುವ ನನ್ನ ವೈವಾಹಿಕ ಅತ್ಯಾಚಾರದ ದೃಶ್ಯವನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಸೆಕ್ಸ್ ಸೀನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು, ಮಾಧ್ಯಮಗಳಲ್ಲಿ ನನ್ನ ಬಗ್ಗೆ ತಪ್ಪಾಗಿ ಬರೆಯಲಾಗಿದೆ ಎಂದು ನಟಿ ನೋವು ತೋಡಿಕೊಂಡಿದ್ದಾರೆ.
ಲವರ್ ಇದ್ರೆ ಹೇಳಿಬಿಡು, ಮದ್ವೆ ಮಾಡಿಸ್ತೇನೆ ಅಂದೆ ಡ್ರೋನ್ಗೆ: ಪ್ರತಾಪನ ಹಾಡಿ ಹೊಗಳಿದ ಸ್ನೇಕ್ ಶ್ಯಾಮ್
‘ಅವರಿಗೂ ಅಕ್ಕ-ತಂಗಿ ಇದ್ದಾರೆ ಎಂಬುದು ಅರ್ಥ ಆಗಬೇಕು. ಯಾರಿಗೂ ಇಂಥ ಸ್ಥಿತಿ ಬರಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಟಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಕೆಲಸ. ನಿರ್ದೇಶಕ ಮಿಲನ್ ಲುತಾರಿಯಾ ಅವರು ತುಂಬ ವೃತ್ತಿಪರವಾಗಿ ನಡೆದುಕೊಂಡಿದ್ದಾರೆ. ಅಂಥ ಕಷ್ಟದ ಸನ್ನಿವೇಶದ ಶೂಟಿಂಗ್ ವೇಳೆ ನಮಗೆ ಮುಜುಗರ ಆಗದಂತೆ ನೋಡಿಕೊಂಡಿದ್ದಾರೆ. ಯಾವುದೇ ಪಾತ್ರಕ್ಕಾದರೂ ನಾನು ಅತ್ಯುತ್ತಮವಾಗಿ ನಟಿಸಲು ಪ್ರಯತ್ನಿಸುತ್ತೇನೆ’ ಎಂದು ಮೆಹ್ರೀನ್ ಅವರು ಬರೆದುಕೊಂಡಿದ್ದಾರೆ. ‘ನನ್ನ ಅಭಿಮಾನಿಗಳು ಈ ವೆಬ್ ಸೀರಿಸ್ ನೋಡಿ ಎಂಜಾಯ್ ಮಾಡಿದ್ದಾರೆ ಅಂತ ಭಾವಿಸುತ್ತೇನೆ. ಕೆಲವೊಮ್ಮೆ ಸ್ಕ್ರಿಪ್ಟ್ಗಾಗಿ ನಮ್ಮ ನೀತಿ-ನಿಯಮಗಳಿಗೆ ವಿರುದ್ಧವಾದನ್ನು ಮಾಡಬೇಕಾಗುತ್ತದೆ. ನಟನೆಯನ್ನು ಕಲೆ ಮತ್ತು ಉದ್ಯೋಗ ಎಂದು ತಿಳಿದಿರುವ ಕಲಾವಿದರು ಈ ರೀತಿ ಮಾಡಬೇಕಾಗುತ್ತದೆ. ನಾನು ಮಾಡಿರುವುದು ಸೆಕ್ಸ್ ಸೀನ್ ಅಲ್ಲ ಎಂದಿದ್ದಾರೆ. ಈ ರೀತಿ ಸೆಕ್ಸ್ ಸೀನ್ ಎಂದು ಬಿಂಬಿಸಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ನೀವು ಧೈರ್ಯವಾಗಿರಿ ಮೇಡಂ ಎಂದಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಶಾಲಾ ದಿನಗಳಲ್ಲಿ ಎನ್.ಸಿ.ಸಿ ಯಲ್ಲಿ ಸಕ್ರಿಯವಾಗಿದ್ದ ಇವರು ಅಡ್ವೆಂಚರ್ ಮತ್ತು ಟ್ರೆಕ್ಕಿಂಗ್ ನಲ್ಲಿ ಎಡಿನ್ ಬರ್ಗ್ ನ ಡ್ಯೂಕ್ ನಿಂದ ಪ್ರಶಸ್ತಿ ಪಡೆದವರು. ವಾಷಿಂಗ್ಟನ್ ಮತ್ತು ನ್ಯೂಯಾರ್ಕ ಸಿಟಿಯಲ್ಲಿ ನಡೆದ `ಯಂಗ್ ಗ್ಲೋಬಲ್ ಲೀಡರ್ಸ್ ಕಾನ್ಫರೆನ್ಸ್' ನಲ್ಲಿ ಭಾರತದ ಪ್ರತಿನಿಧಿಯಾಗಿದ್ದರು. ಭರತನಾಟ್ಯ ಕಲಾವಿದೆ ಕೂಡ. ತಮ್ಮ 10ನೇ ವಯಸ್ಸಿನಲ್ಲಿಯೇ ರ್ಯಾಂಪ್ ವಾಕ್ ಮಾಡಿ ಕಸೌಲಿ ಪ್ರಿನ್ಸೆಸ್ ಬ್ಯೂಟಿ ಪೀಜಂಟ್ ಪ್ರಶಸ್ತಿ ಪಡೆದರು. 2013 ರಲ್ಲಿ ಟೋರಂಟೊದಲ್ಲಿ ಮಿಸ್ ಸೌಥ್ ಏಷಿಯಾ ಕೆನಡಾ ಪ್ರಶಸ್ತಿ ಪಡೆದರು. ಹಲವು ಜಾಹೀರಾತುಗಳಲ್ಲಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ನಾನಿ ಚಿತ್ರದ ಮೂಲಕ 2016 ರಲ್ಲಿ ತೆಲಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ, ಅನುಷ್ಕಾ ಶರ್ಮ ಅವರ ಪಿಲ್ಲೌರಿ ಚಿತ್ರದ ಮೂಲಕ ಬಾಲಿವುಡ್ ಕೂಡ ಪ್ರವೇಶಿಸಿದರು.
BIGG BOSS: ಎಣ್ಣೆ ಮಸಾಜ್ ಮಾಡ್ತಾ ಮಾಡ್ತಾ ಲವ್ ಶುರು? ಕಾರ್ತಿಕ್- ಸಂಗೀತಾ ಪ್ರೇಮ್ ಕಹಾನಿ