ಸದ್ದಿಲ್ಲದೇ ಮದ್ವೆಯಾದ ಬಾಲಿವುಡ್ ನಟಿ ತಾಪ್ಸಿ ಪನ್ನು, ಇದೀಗ ಫೋಟೋ, ವಿಡಿಯೋ ಕೂಡ ಶೇರ್ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು? ಕೊನೆಗೂ ಬಾಯ್ಬಿಟ್ಟ ನಟಿ ಹೇಳಿದ್ದೇನು?
ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳು ಮತ್ತು ಕಮೆಂಟ್‌ಗಳಿಂದಲೇ ಸದಾ ಸುದ್ದಿಯಲ್ಲಿ ಇರುತ್ತಾರೆ. ತಾಪ್ಸಿ (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದು ಹಾಲಿಡೇ ಎಂಜಾಯ್ ಮಾಡೋ ಮೂಡ್‌ನಲ್ಲಿರೋ ನಟಿ ಕೈತುಂಬಾ ಸಿನಿಮಾಗಳಿವೆ. ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಇದಲ್ಲದೇ, ‘ಏಲಿಯನ್’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್ ಆಯಿ ಹಸೀನ್ ದಿಲ್ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನುಗೆ ಅವಕಾಶ ಸಿಕ್ಕಿದೆ. ಇದಾಗಲೇ ನಟಿ, ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. . 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಕೆಲ ಕಾಲ ದೇಶ-ವಿದೇಶಗಳ ಟೂರ್ ಮೂಡಿನಲ್ಲಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟೀವ್ ಆಗಿದ್ದಾರೆ.
ಸದ್ಯ ನಟಿ 10 ವರ್ಷಗಳ ಡೇಟಿಂಗ್ ಬಳಿಕ, ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ (Mathias Boe) ಅವರ ಜೊತೆ ಮಾರ್ಚ್‌ನಲ್ಲಿ ಮದುವೆಯಾಗುತ್ತಿದ್ದಾರೆ ಎಂದು ಬಹಳ ದಿನಗಳಿಂದ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಅವರು ಈ ಹಿಂದೆ ಹೇಳಿದ್ದ ಮಾತೊಂದು ಇದೀಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ತಾಪ್ಸಿ ಪನ್ನು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಆಗಾಗ್ಗೆ ಉತ್ತರ ಕೊಡುವುದು ಉಂಟು. ಕೆಲವೊಮ್ಮೆ ಸೀರಿಯಸ್ ಆಗಿ, ಕೆಲವೊಮ್ಮೆ ಫನ್ನಿ ಆಗಿ ಉತ್ತರಿಸುತ್ತಾರೆ. ಅಭಿಮಾನಿಯೊಬ್ಬರು ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ಮಥಾಯಿಸ್ ಬೋ ಜೊತೆ ಸಕತ್ ಟೂರ್ ಮಾಡುತ್ತ ಲೈಫ್ ಎಂಜಾಯ್ ಮಾಡುತ್ತಿರುವುದನ್ನು ನೋಡಿದ್ದ ಅಭಿಮಾನಿ, ಮದ್ವೆಯಾವಾಗ ಕೇಳಿದ್ದರು. ಅದಕ್ಕೆ ನಟಿ, ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಆಗುವುದೂ ಇಲ್ಲ. ಇನ್ಯಾಕೆ ಮದ್ವೆ, ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದಿದ್ದರು.
ಸುಂದರಿಯಾಗಿ ಕಾಣಲು ನಟಿಯರು ಲಕ್ಷ ಲಕ್ಷ ಖರ್ಚು ಮಾಡಿದ್ರೆ ಟಬು ಮಾಡಿದ್ದೇನು? ಅಭಿಮಾನಿಗಳಿಗೆ ಭಾರಿ ಬೇಸರ!
ಆದರೆ ಸದ್ದಿಲ್ಲದೇ ಇಬ್ಬರ ಮದುವೆ ಆಗಿದೆ. ಮದುವೆ ಬಗ್ಗೆ ನಟಿ ಇನ್ನೂ ಯಾವುದೇ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ. ಇದೀಗ ತಾಪ್ಸಿ ಮದುವೆಯ ಮೊದಲ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ತಾಪ್ಸಿ ವಧುವಾಗಿ ಕಾಣಿಸಿಕೊಂಡಿದ್ದಾರೆ. ಮಥಿಯಾಸ್ ವರನಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಮದುವೆಗೆ ಆಪ್ತರು ಮತ್ತು ಕುಟುಂಬದವರು ಸಾಕ್ಷಿಯಾಗಿದ್ದರು. ಅಷ್ಟಕ್ಕೂ ಮದ್ವೆ ಸುದ್ದಿ ವೈರಲ್ ಆಗುತ್ತಿದ್ದರೂ ಮದುವೆಯ ಬಗ್ಗೆ ಇನ್ನೂ ನಟಿ ಸ್ಪಷ್ಟವಾಗಿ ಬಾಯಿ ಬಿಟ್ಟಿರಲಿಲ್ಲ. ಆದರೆ ನಟಿ ಯಾವುದೇ ಬಾಲಿವುಡ್ ತಾರೆಯರನ್ನು ಮದುವೆಗೆ ಕರೆಯುತ್ತಿಲ್ಲ ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಇವರ ಮದುವೆ ನಡೆಯುತ್ತಿರುವುದು ಹೌದೋ, ಅಲ್ಲವೋ ಎನ್ನುವುದೇ ಸ್ಪಷ್ಟವಾಗಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಮದುವೆಯ ವಿಡಿಯೋಗಳು ವೈರಲ್ ಆಗಿರುವ ಕಾರಣ, ತಾಪ್ಸಿ ಕೊನೆಗೂ ಮದ್ವೆಯಾಗಿರುವುದು ತಿಳಿದಿದೆ.
ಹೀಗಿದ್ದರೂ ನಟಿ, ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡುವುದಿಲ್ಲ. ಸೆಲೆಬ್ರಿಟಿಗಳ ಮದುವೆ ಎಂದರೆ ತಿಂಗಳುಗಳ ಮೊದಲೇ ಭರ್ಜರಿ ಸುದ್ದಿಯಾಗುತ್ತದೆ. ಮದುವೆ ಮುಗಿದ ಮೇಲೆ ಒಂದೆರಡು ತಿಂಗಳು ಅದರದ್ದೇ ಸುದ್ದಿಗಳು, ಫೋಟೋಗಳು, ವಿಡಿಯೋ. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ಧ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ನೇರವಾಗಿ ಉತ್ತರಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಟಿ, "ನಾನು ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಲು ಇಷ್ಟಪಡುವುದಿಲ್ಲ. ನನ್ನ ಸಂಗಾತಿ ಮತ್ತು ನನ್ನ ಮದುವೆ ಎರಡೂ ವೈಯಕ್ತಿಕವಾದದ್ದು. ಅದನ್ನು ಸಾರ್ವಜನಿಕಗೊಳಿಸುವ ಇಚ್ಛೆ ನನಗೆ ಇಲ್ಲ ಎಂದಿದ್ದಾರೆ. ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರೊಂದಿಗೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ಅನಗತ್ಯ ಎಂದು ನನಗೆ ಎನಿಸುತ್ತದೆ. ಏಕೆಂದರೆ ಮದುವೆಯಂಥ ವಿಷಯವನ್ನು ಸಾರ್ವಜನಿಕ ವ್ಯವಹಾರ ಮಾಡಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ಕೇಳಿದ ಫ್ಯಾನ್ಸ್: ನಟಿ ಹೇಳಿದ್ದೇನು?
ಅಂದಹಾಗೆ ನಟಿ, ಉದಯಪುರದ ಪರಿಣಯಸೂತ್ರದಲ್ಲಿ ಮದುವೆಯಾದರು. ತಾಪ್ಸಿ ಅವರ ಪತಿ ಒಲಿಂಪಿಕ್ ಪದಕ ವಿಜೇತರು. ಮದುವೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಪ್ಸಿ ವಧುವಿನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ಮಥಿಯಾಸ್ ಪೆವಿಲಿಯನ್ ಸೈಕಲ್ ಮೇಲೆ ಬಂದರು. ಇವರಿಬ್ಬರ ಮದುವೆಯಲ್ಲಿ ಮಂಟಪ ಇರಲಿಲ್ಲ. ಬದಲಿಗೆ ಓಪನ್ ಸ್ಟೇಜ್ ಇತ್ತು. ಪಂಜಾಬಿ ಪದ್ಧತಿಯಂತೆ ಜೋಡಿ ಮದುವೆಯಾಗಿದೆ.