ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಕೇಳಿದಾಗ ನಟಿ ಕೊಟ್ಟ ಉತ್ತರವೇನು?
ಹಿಂದೊಮ್ಮೆ ಇದ್ದರೆ ಇಂಥ ಜೋಡಿ ಇರಬೇಕು ಎಂದು ಹೇಳಿದ್ದು ನಟ ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್ ಪ್ರಭು ಸ್ಟಾರ್ ಜೋಡಿಗಳ ಕುರಿತು. ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿತು ಈ ಜೋಡಿ. 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದು ಇದಾಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆದರೆ ಇವರ ಡಿವೋರ್ಸ್ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ. ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ (Dating) ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇಬ್ಬರೂ ಲಂಡನ್ ಹೋಟೆಲ್ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು. ಇದೇ ಕಾರಣಕ್ಕೆ ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
ಅದೇ ಇನ್ನೊಂದೆಡೆ, ಸಮಂತಾ (Samantha Ruth Prabhu) ಕೆಲ ತಿಂಗಳ ಹಿಂದೆ ಮಾಜಿ ಪತಿ ನಾಗ ಚೈತನ್ಯ ಅವರ ಬಗ್ಗೆ ಮಾತನಾಡಿದ್ದರು. ಅವರಿಂದ ತಾವು ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ನಟಿ, ನನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದಿದ್ದರು. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ ಎನ್ನುವ ಮೂಲಕ ನಾಗ ಚೈತನ್ಯ ಅವರ ಮೇಲೆ ಇನ್ನೂ ಇರುವ ಪ್ರೀತಿಯನ್ನು ತೋರಿಸಿದ್ದರು.
'ರಾಮಾಯಣ'ಕ್ಕೆ ಸಂಭಾವನೆ ಬೇಡವೆಂದ ನಟ ಯಶ್, ಆದ್ರೆ ಇಲ್ಲಿದೆ ಇನ್ನೊಂದು ಟ್ವಿಸ್ಟ್, ಏನದು?
ಇದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ನಟಿ, ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುತ್ತಾರೆ. ಸಮಂತಾ ಅವರ ಅಭಿಮಾನಿಯೊಬ್ಬ ತೀರಾ ಪರ್ಸನಲ್ ವಿಷಯ ಕೆದಕಿದ್ದಾರೆ. ಅಮಾಯಕ ಪತಿಗೆ ಮೋಸ ಯಾಕೆ ಮಾಡಿದ್ರಿ ಎಂದು ಸಮಂತಾರನ್ನು ವಿಶಾಲ್ ಕದಮ್ ಹೆಸರಿನ ಖಾತೆಯುಳ್ಳ ಅಭಿಮಾನಿಯೊಬ್ಬರು ಕೇಳಿದ್ದಾರೆ. ಸಮಂತಾ ಸಾಮಾನ್ಯವಾಗಿ ತಮ್ಮ ಪರ್ಸನಲ್ ವಿಷಯಕ್ಕೆ ಯಾರೂ ತಲೆ ಹಾಕುವುದನ್ನು ಇಷ್ಟಪಡುವುದಿಲ್ಲ. ಇದರ ಹೊರತಾಗಿಯೂ ನಟಿ ಕೂಲ್ ಆಗಿಯೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ನನ್ನ ಅಭ್ಯಾಸಗಳ ಬಗ್ಗೆ ನಿಮಗೆ ಹೇಳಿದರೆ ಅದು ನಿಮಗೆ ಅರ್ಥವಾಗದೇ ಹೋಗಬಹುದು. ಆದ್ದರಿಂದ ಬೇರೆ ಏನನ್ನಾದರೂ ಕೇಳಿ. ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ವಿಷಯಕ್ಕೆ ಬರಬೇಕು ಎಂದು ನಟಿ ಪರೋಕ್ಷವಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಡಿ ಒಟ್ಟಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡಿತ್ತು. ಇವರಿಬ್ಬರೂ ಒಂದಾದರಾ ಎಂದು ಫ್ಯಾನ್ಸ್ ಖುಷಿಪಟ್ಟಿದ್ದರು. ಆದರೆ ಅಸಲಿಗೆ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದು, ಒಂದಾದ ಕಾರಣಕ್ಕೆ ಅಲ್ಲ. ಬದಲಿಗೆ, ಅಮೆಜಾನ್ ಪ್ರೈಮ್ನಲ್ಲಿ ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಅನಾವರಣ ಮಾಡುವ ಸಂಬಂಧ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ 2024 ಶೀರ್ಷಿಕೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಜೋಡಿ ಮಾತ್ರ ಪರಸ್ಪರ ನೋಡಿಕೊಳ್ಳಲಿಲ್ಲ. ಒಂದೇ ವೇದಿಕೆಯ ಮೇಲೆ ಇದ್ದರೂ ಹತ್ತಿರ ಬರಲಿಲ್ಲ. ಇಬ್ಬರೂ ಮಾತು ಕೂಡ ಆಡಲಿಲ್ಲ.
ಸುಂದರಿಯಾಗಿ ಕಾಣಲು ನಟಿಯರು ಲಕ್ಷ ಲಕ್ಷ ಖರ್ಚು ಮಾಡಿದ್ರೆ ಟಬು ಮಾಡಿದ್ದೇನು? ಅಭಿಮಾನಿಗಳಿಗೆ ಭಾರಿ ಬೇಸರ!