
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿಢೀರ್ ಮದುವೆಯಾಗುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ಶಾಕ್ ನೀಡಿದರು. ನಿನ್ನೆ (ಫೆಬ್ರವರಿ 17) ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸ್ವರಾ ಜನವರಿ 6ರಂದು ದಾಂಪತ್ಯಕ್ಕೆ ಕಾಲಿಟ್ಟರು. ಸರಳವಾಗಿ ವಿವಾಹವಾಗಿರುವ ಸ್ವರಾ ಮತ್ತು ಫಹಾದ್ ಅಹ್ಮದ್ 1 ತಿಂಗಳ ಬಳಿಕ ಫೋಟೋಗಳನ್ನು ಶೇರ್ ಮಾಡಿ ಮದುವೆ ವಿಚಾರ ಬಹಿರಂಗ ಪಡಿಸಿದರು. 2023 ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸ್ವರಾ ಮತ್ತು ಫಹಾದ್ ನ್ಯಾಯಾಲಯದಲ್ಲಿ ವಿವಾಹ ನೋಂದಾಯಿಸಿದ್ದರು.
ಸರಳ ವಿವಾಹದಲ್ಲಿ ನಟಿ ಸ್ವರಾ ಭಾಸ್ಕರ್ ವಿಶೇಷ ಸೀರೆಯಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಸೀರೆ ಧರಿಸಿದ್ದ ಸ್ವರಾ ಸೀರೆಯ ವಿಶೇಷತೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸ್ವರಾ ಧರಿಸಿದ್ದು ಅಮ್ಮನ ಸೀರೆ ಮತ್ತು ಆಭರಣ. ಸ್ವರಾ ಶೇರ್ ಮಾಡಿರುವ ಫೋಟೋದಲ್ಲಿ ಇಡು ಕುಟುಂಬದ ಜೊತೆ ಪೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಫಹಾದ್ ಅಹ್ಮದ್ ಮತ್ತು ಸ್ವರಾ ಇಬ್ಬರು ಬೀದಿಯಲ್ಲಿ ಡಾನ್ಸ್ ಮಾಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಪತಿಯ ಕೈ ಹಿಡಿದು ಬರುತ್ತಿದ್ದಾರೆ. ಸ್ವರಾ ಸರಳವಾಗಿ ವಿವಾಹವಾದರೂ ಮಾಂಟಿಕಾ , ಚೋಕರ್ ಎಲ್ಲಾ ಧರಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸ್ವರಾ, 'ಕುಟುಂಬ ಹಾಗೂ ಸ್ನೇಹಿತರ ಬೆಂಬಲ, ಪ್ರೀತಿಗೆ ಪುಣ್ಯಮಾಡಿದ್ದೆ.
ನನ್ನ ತಾಯಿಯ ಸೀರೆ ಮತ್ತು ಆಭರಣಗಳನ್ನು ಧರಿಸಿ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾದೆವು' ಎಂದು ಹೇಳಿದ್ದಾರೆ. ಸ್ವರಾ ಶೇರ್ ಮಾಡಿರುವ ಫೋಟೋದಲ್ಲಿ ಕುಟುಂಬದವರು ಕೂಡ ಜೊತೆಯಲ್ಲಿದ್ದಾರೆ. ಪೋಷಕರು ಮತ್ತು ಸ್ನೇಹಿತರ ನಡುವೆ ಸ್ವರಾ ದಾಂಪತ್ಯಕ್ಕೆ ಕಾಲಿಟ್ಟರು.
ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್
ಅಫಾದ್ ಅಹ್ಮದ್ ಬಗ್ಗೆ
ಅಹ್ಮದ್ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ. ಅಹ್ಮದ್ ಮತ್ತು ಸ್ವರಾ ಇಬ್ಬರೂ ರ್ಯಾಲಿಯಲ್ಲಿ ಭೇಟಿಯಾಗಿದ್ದರು ಬಳಿಕ ಸ್ನೇಹಿತರಾಗಿದ್ದ ಇಬ್ಬರೂ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಮದ್ವೆಯಾಗಿ ಏಕಾಏಕಿ ಶಾಕ್ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?
ಸ್ವರಾ ಭಾಸ್ಕರ್ ಟ್ರೋಲ್
ಸ್ವರಾ ಪತಿಯನ್ನು ಕಳೆದ ಕೆಲವು ದಿನಗಳ ಹಿಂದೆ ಅಣ್ಣ ಎಂದು ಕರೆದಿದ್ದರು. ಅಣ್ಣ ಎಂದು ಕರೆದಿದ್ದ ಹಳೆಯ ಟ್ವೀಟ್ ವೈರಲ್ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ' ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದರು. ಈ ಹಳೆಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.