5 ವರ್ಷ ಸಂಬಂಧ ಲೇಖಕನೊಂದಿಗೆ, ಮದ್ವೆ ಮುಸ್ಲಿಂ ರಾಜಕಾರಣಿಯೊಂದಿಗೆ! ಸ್ವರಾ ಭಾಸ್ಕರ್​ ಇತಿಹಾಸ ವೈರಲ್​

By Suvarna News  |  First Published Sep 19, 2023, 11:13 AM IST

5 ವರ್ಷ ಸಂಬಂಧ ಲೇಖಕನೊಂದಿಗೆ, ಮದ್ವೆ ಮುಸ್ಲಿಂ ರಾಜಕಾರಣಿಯೊಂದಿಗೆ! ಸ್ವರಾ ಭಾಸ್ಕರ್​ ಇತಿಹಾಸ ವೈರಲ್​


ಸದಾ ವಿವಾದಗಳಿಂದ ಸುತ್ತುವರೆದಿರುವ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ (Swara Bhaskar) ಅವರು ಈ ವರ್ಷ ಫೆಬ್ರವರಿ 16 ರಂದು ಅಂದರೆ 2023 ರಂದು ರಾಜಕೀಯ ಕಾರ್ಯಕರ್ತ, ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಆದ್ರೆ ಮದುವೆಗೂ ಮುನ್ನ ಸ್ವರಾ ಭಾಸ್ಕರ್ ಗೆ 5 ವರ್ಷ ಅಫೇರ್ ಇತ್ತು ಗೊತ್ತಾ? ಹೌದು. ತಮ್ಮ ಮದುವೆಯ ಕುರಿತು ನಟಿ ದಿಢೀರ್​ ಘೋಷಿಸಿದ್ದರು.  ತಾವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ  (Registered)  ತಿಳಿಸಿದ್ದರು. ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು.  ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ ಎಂದು ಸ್ವರಾ ಹೇಳಿದ್ದರು. 

ನಂತರ ಫೆಬ್ರುವರಿ ತಿಂಗಳಿನಲ್ಲಿ ಇವರ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು.  ಇದೀಗ ಸ್ವರಾ ಮತ್ತು ಫಹಾದ್ ಇಬ್ಬರೂ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ ಮತ್ತು ಸಾಕಷ್ಟು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸ್ವರಾ ಅವರು ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅದರ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಚಿತ್ರದಲ್ಲಿ ಸ್ವರಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಸ್ವರಾ ಭಾಸ್ಕರ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿ ಫಹಾದ್ ಅಹ್ಮದ್ ಅವರೊಂದಿಗೆ ತುಂಬಾ ಸುಂದರವಾದ ಚಿತ್ರಗಳನ್ನು ಹಂಚಿಕೊಂಡಿದ್ದರು. ಮುಂದಿನ ತಿಂಗಳು ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ. 

Tap to resize

Latest Videos

ಸ್ವರಾ ಭಾಸ್ಕರ್​ ಬೇಬಿ ಬಂಪ್ ಷೋ: ಧೈರ್ಯವಿದ್ರೆ ಮಗುವಿಗೆ ಹಿಂದೂ ಹೆಸರಿಡಿ ಎಂದ ಫ್ಯಾನ್ಸ್​!
 ಅಷ್ಟಕ್ಕೂ ಸ್ವರಾ ಭಾಸ್ಕರ್​ ಮದುವೆಗೂ ಮುನ್ನ ನಟನೊಬ್ಬರ ಜೊತೆ ಐದು ವರ್ಷ ಸಂಬಂಧದಲ್ಲಿದ್ದರು.  ಅವರೇ ಹಿಮಾಂಶು ಶರ್ಮಾ.  ರಾಷ್ಟ್ರ ಪ್ರಶಸ್ತಿ ವಿಜೇತ ಮತ್ತು ಚಿತ್ರಕಥೆಗಾರ ಹಿಮಾಂಶು ಶರ್ಮಾ (Himanshu Sharma) ಅವರೊಂದಿಗೆ ಸ್ವರಾ ಐದು ವರ್ಷ ಡೇಟಿಂಗ್​ ಮಾಡುತ್ತಿದ್ದರು.  ಮಾಧ್ಯಮಗಳ ಮುಂದೆ ಸ್ವರಾ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು. ಇವರ ಮದುವೆಯಾಗುತ್ತದೆ ಎಂದೇ ಹೇಳಲಾಗಿತ್ತು. ಸ್ವರಾ ಮತ್ತು ಹಿಮಾಂಶು ರಾಂಝಾನಾ ಚಿತ್ರದ ತಯಾರಿಕೆಯ ಸಮಯದಲ್ಲಿ ಪರಸ್ಪರ ಭೇಟಿಯಾದವರು.  ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರೀಕರಣದ ಸಮಯದಲ್ಲಿ ಹತ್ತಿರವಾದರು. ಅವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿರುವ ಸ್ವರಾ, "ಹೌದು, ನಾವು ಒಬ್ಬರಿಗೊಬ್ಬರು ಡೇಟಿಂಗ್ ಮಾಡುತ್ತಿದ್ದೇವೆ ಮತ್ತು ಸಂತೋಷವಾಗಿದ್ದೇವೆ. ಹಿಮಾಂಶು ನನ್ನ ನೆಚ್ಚಿನ ಡೈಲಾಗ್ ರೈಟರ್ ಏಕೆ ಎಂದು ಈಗ ನಿಮಗೆ ತಿಳಿದಿದೆ" ಎಂದು ಹೇಳಿದ್ದರು. ಇದಾದ ನಂತರ ಹಿಮಾಂಶು ಅವರು ಸ್ವರಾ ಅವರನ್ನು ಡೇಟಿಂಗ್ ಮಾಡುವ ಸುದ್ದಿಯನ್ನು ಖಚಿತಪಡಿಸಿದ್ದರು.  ನಾವು ಇನ್ನೂ ಮದುವೆಯ ಬಗ್ಗೆ ಯೋಚಿಸಿಲ್ಲ, ಆದರೆ ಸಮಯ ಬಂದಾಗ, ನಾವು ಖಂಡಿತವಾಗಿಯೂ ಮುಂದುವರಿಯುತ್ತೇವೆ ಎಂದಿದ್ದರು.
  
ಅಂದಹಾಗೆ ಸ್ವರಾ ಭಾಸ್ಕರ್​ ಮದುವೆಯಾದ ಹೊಸತರದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.  ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು.  ಸ್ವರಾ  ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದರು.  ದೆಹಲಿಯಲ್ಲಿ ನಡೆದಿದ್ದ  ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.  ಆದರೆ ಸ್ವರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಇದೀಗ ತುಂಬು ಗರ್ಭಿಣಿಯಾಗಿದ್ದು ಅದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಹಲವಾರು ರೀತಿಯ ಕಮೆಂಟ್ಸ್​ಗಳು ಬರುತ್ತಿವೆ. ಹಲವರು ಹಾರ್ಟ್​ ಎಮೋಜಿ ಹಾಕಿದ್ದರೆ, ಇನ್ನು ಕೆಲವರು ನೀನು ಹಿಂದೂ ಧರ್ಮಕ್ಕೆ ಕಳಂಕ ಎಂದು ಈಗಲೂ ಟೀಕಿಸುತ್ತಿದ್ದಾರೆ. ನಿಮ್ಮ ಪ್ರೀತಿ ನಿಜವಾಗಿದ್ದರೆ ಮಗುವಿಗೆ ಹಿಂದೂ ಹೆಸರು ಇಡಿ ಎನ್ನುತ್ತಿದ್ದಾರೆ.  

ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್​ ಮಾಡಿದ ನಟಿ SWARA BHASKAR
 

click me!