Swara Bhasker Tested Positive: ನಟಿ ಸ್ವರಾ ಭಾಸ್ಕರ್‌ಗೆ ಕೊರೋನಾ ಪಾಸಿಟಿವ್

Published : Jan 07, 2022, 10:35 AM ISTUpdated : Jan 07, 2022, 10:44 AM IST
Swara Bhasker Tested Positive: ನಟಿ ಸ್ವರಾ ಭಾಸ್ಕರ್‌ಗೆ ಕೊರೋನಾ ಪಾಸಿಟಿವ್

ಸಾರಾಂಶ

Coronavirus Updates: ಬಾಲಿವುಡ್ ನಟಿಗೆ ಕೊರೋನಾ ಪಾಸಿಟಿವ್ ಸ್ವರಾ ಭಾಸ್ಕರ್‌ಗೂ ಪಾಸಿಟಿವ್ ದೃಢ, ಸೋಷಿಯಲ್ ಮೀಡಿಯಾದಲ್ಲಿ ಎನೌನ್ಸ್ ಮಾಡಿದ ನಟಿ

ಬಾಲಿವುಡ್‌ನಲ್ಲಿ(Bollywood) ಬಹಳಷ್ಟು ಜನಕ್ಕೆ ಕೊರೋನಾ ಪಾಸಿಟಿವ್(Corona Positive) ದೃಢಪಟ್ಟಿದೆ. ಇತ್ತೀಚೆಗಷ್ಟೆ ಕರೀನಾ ಕಪೂರ್, ಅರ್ಜುನ್ ಕಪೂರ್(Arjun Kapoor), ಎರಿಕಾ ಫರ್ನಾಂಡಿಸ್ ಸೇರಿ ಬಹಳಷ್ಟು ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೀಗ ಬಹುಭಾಷಾ ನಟಿ ಸ್ವರಾ ಭಾಸ್ಕರ್‌ಗೆ(Swara Bhasker) ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟಿ ಇದನ್ನು ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೊರೋನವೈರಸ್ ಮೂರನೇ ಅಲೆಯಲ್ಲಿ, ಅನೇಕ ಸೆಲೆಬ್ರಿಟಿಗಳ ಕೋವಿಡ್ -19 ಟೆಸ್ಟ್ ಪಾಸಿಟಿವ್ ಬಂದಿದೆ.

ಬಹುತೇಕ ಪ್ರತಿದಿನ, ಯಾರಾದರೂ ಮಾರಣಾಂತಿಕ ವೈರಸ್‌ ತಗುಲಿ ಕ್ವಾರೆಂಟೈನ್ ಆಗುವ ಸುದ್ದಿಯನ್ನು ನಾವು ಕೇಳುತ್ತಲೇ ಇದ್ದೇವೆ. ಈ ಪಟ್ಟಿಗೆ ಸೇರ್ಪಡೆಗೊಂಡ ಇತ್ತೀಚಿನ ಸೆಲೆಬ್ರಿಟಿ ಸ್ವರಾ ಭಾಸ್ಕರ್. ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿದೆ ಎಂದು ನಟಿ ತನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗೆ ತಿಳಿಸದ್ದಾರೆ. ನಟಿ ತನ್ನ ಸೋಷಿಯಲ್ ಮೀಡಿಯಾ ಎಕೌಂಟ್ ಮೂಲಕ ಸುದ್ದಿ ತಿಳಿಸಿದ್ದು ಸದ್ಯ ಅವರೆಲ್ಲ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಸ್ವರಾ ಭಾಸ್ಕರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ನನಗೆ ಕೋರೋನಾ ಪಾಸಿಟಿವ್ ದೃಢಪಟ್ಟಿದೆ. ಜನವರಿ 5, 2022 ರಂದು ನನಗೆ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶಗಳು ಕೊರೋನಾ ದೃಢಪಡಿಸಿವೆ. ನಾನು ಮತ್ತು ನನ್ನ ಕುಟುಂಬವು ಜನವರಿ 5 ರಂದು ಸಂಜೆಯಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಮತ್ತು ನಾನು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಾನು ಕೋವಿಡ್ ಹೊಂದಿರುವ ಬಗ್ಗೆ ಹಿಂದಿನ ವಾರದಲ್ಲಿ ನಾನು ಭೇಟಿಯಾದ ಎಲ್ಲರಿಗೂ ತಿಳಿಸಿದ್ದೇನೆ. ಆದರೆ ಯಾರಾದರೂ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ, ದಯವಿಟ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಡಬಲ್ ಮಾಸ್ಕ್ ಧರಿಸಿ ಮತ್ತು ಸುರಕ್ಷಿತವಾಗಿರಿ ಎಂದಿದ್ದಾರೆ ನಟಿ.

ಕುಟುಂಬಕ್ಕೇ ಕೊರೋನಾ, ಹ್ಯಾಪಿ ಕೋವಿಡ್ ಫ್ಯಾಮಿಲಿ ಎಂದ ಗಾಯಕ

ಸ್ವರಾ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿ, 'ಹಲೋ ಕೋವಿಡ್! ನನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ಬಂದಿದೆ. ಪಾಸಿಟಿವ್ ದೃಢಪಟ್ಟಿದೆ. ಕ್ವಾರಂಟೈನ್‌ನಲ್ಲಿದ್ದೇನೆ. ರೋಗಲಕ್ಷಣಗಳು ಜ್ವರ, ತಲೆನೋವು ಮತ್ತು ರುಚಿ ನಷ್ಟವಾಗುವಿಕೆ ಅನುಭವವಾಗಿದೆ. ಎರಡು ಬಾರಿ ಲಸಿಕೆ ಹಾಕಲಾಗಿದೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ನಟಿ ಬರೆದಿದ್ದಾರೆ.

ಬಿಟೌನ್ ಸೆಲೆಬ್ರಿಟಿಗಳು ಹೆಚ್ಚಿರುವ ಮುಂಬೈನಲ್ಲಿ ಕೊರೋನಾ ತಾಂಡವ:

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್(Coronavius) ಗಣನೀಯವಾಗಿ ಏರಿಕೆಯಾಗಿದೆ. ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ವಾಸಿಸೋ ಮುಂಬೈನಲ್ಲಿ(Mumbai) ಪರಿಸ್ಥಿತಿ ಕೈಮೀರುತ್ತಿದೆ. ಪ್ರತಿ ದಿನ 10,000 ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ದಿನದಿಂದ ದಿನಕ್ಕೆ ಮುಂಬೈನಲ್ಲಿ ಕೋವಿಡ್ ಪ್ರಕರಣ ದ್ವಿಗಣಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ದಿನ 20,000 ಕೇಸ್ ದಾಖಲಾದರೆ ಲಾಕ್‌ಡೌನ್(Lockdown) ಖಚಿತ ಎಂದಿದ್ದಾರೆ. 

ಒಂದೇ ವಾರದಲ್ಲಿ ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ಕ್ಕ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ(Covid Guidelines) ಪ್ರತಿ ದಿನ 20,000 ಹೊಸ ಕೊರೋನಾ ಕೇಸ್ ದಾಖಲಾದರೆ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ. ಮುಂದಿನ 2ರಿಂದ 3 ದಿನಗಳ ಕೊರೋನಾ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

ಮುಂಬೈನಲ್ಲಿ ಕೊರೋನಾ ಹೆಚ್ಚಳ ಕಾರಣ ಕಠಿಣ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ (Mask) ಧರಿಸುವುದು, ಸಾಮಾಜಿಕ ಅಂತರ(Social Distance) ಕಾಪಾಡಿಕೊಳ್ಳುವುದನ್ನು ಜನರು ಮರೆತಿದ್ದಾರೆ. ಚಿತ್ರಮಂದಿರ, ಮಾರುಕಟ್ಟೆ, ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಸಂದಣಿ ಹಾಗೇ ಇದೆ. ಈಗಾಗಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಿದ್ದಾರೆ. ಅಗತ್ಯಬಿದ್ದರೆ ಮಿನಿ ಲಾಕ್‌ಡೌನ್(Semi Lockdown) ಜಾರಿಗೊಳಿಸಲು ಸೂಚಿಸಿದ್ದಾರೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!