
ನವದೆಹಲಿ: ಸ್ಯಾಂಡಲ್‌ವುಡ್, ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಅನೇಕ ಹಾರರ್ ಸಿನಿಮಾಗಳು ಬಿಡುಗಡೆಯಾಗಿವೆ. ಇಂದಿಗೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಲ್ಲ ಸಾಮರ್ಥ್ಯವನ್ನು ಈ ಸಿನಿಮಾಗಳು ಹೊಂದಿವೆ. ಹಳೆ ಹಾರರ್ ಸಿನಿಮಾಗಳು ಮತ್ತೊಮ್ಮೆ ನೋಡಿದ್ರೆ ಹೃದಯಬಡಿತ ಹೆಚ್ಚಳವಾಗುತ್ತದೆ. ಇಂದು ನಾವು ಹೇಳುತ್ತಿರುವ ಹಾರರ್ ಸಿನಿಮಾ 1999ರಲ್ಲಿ ಬಿಡುಗಡೆಯಾಗಿತ್ತು. ಎಷ್ಟೋ ಜನರು ಈ ಚಿತ್ರವನ್ನು ಒಂಟಿಯಾಗಿ ನೋಡಲು ಹೆದರುತ್ತಾರೆ. 1999ರಲ್ಲಿ ಬಿಡುಗಡೆಯಾದ 'ದಿ ಬ್ಲೇರ್ ವಿಚ್ ಪ್ರಾಜೆಕ್ಟ್' (The Blair Witch Project) ಸಿನಿಮಾ ಹಲವು ದಾಖಲೆಗಳನ್ನು ಬರೆದಿರುತ್ತವ ಹಾರರ್ ಮೂವಿ ಆಗಿದೆ. ಡೇನಿಯಲ್ ಮ್ಯಾರಿಕ್ ಮತ್ತು ಎಡ್ವರ್ಡೊ ಸ್ಯಾಂಚೆಜ್ (Daniel Myrick and Eduardo Sanchez) ಜೊತೆಯಾಗಿ ದಿ ಬ್ಲೇರ್ ವಿಚ್ ಪ್ರಾಜೆಕ್ಟ್ ಎಂಬ ಹಾರರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ದಿ ಬ್ಲೇರ್ ವಿಚ್ ಪ್ರಾಜೆಕ್ಟ್ ಸಿನಿಮಾ Paranormal Activity ಕಥೆಯನ್ನು ಹೊಂದಿದೆ. ಈ ರೀತಿಯ ಕಥೆಯನ್ನಾಧರಿಸಿ ಬಿಡುಗಡೆಯಾಗಿ ಸಕ್ಸಸ್ ಆದ ಸಿನಿಮಾಗಳಲ್ಲಿ ಇದು ಒಂದಾಗಿದೆ. ಮೂವರು ಯುವಕರು ಪ್ರೊಜೆಕ್ಟ್ ಕೆಲಸಕ್ಕಾಗಿ ಹೋಗಿರುತ್ತಾರೆ. ಆದ್ರೆ ಈ ಮೂವರು ಯುವಕರು ದಿಢೀರ್ ಅಂತ ಕಣ್ಮರೆಯಾಗುತ್ತಾರೆ. ಒಂದು ವರ್ಷದ ನಂತರ ಮೂವರು ಯುವಕರ ಬಳಿಯಲ್ಲಿದ್ದ ಒಂದು ಕ್ಯಾಮೆರಾ ಪತ್ತೆಯಾಗುತ್ತದೆ. ಈ ಕ್ಯಾಮೆರಾದಲ್ಲಿ ಮೂವರು ಯುವಕರಿಗೆ ಏನಾಯ್ತು ಎಂದು ವಿಡಿಯೋ ಇರುತ್ತದೆ. ಈ ದೃಶ್ಯಗಳು ಕ್ಷಣ ಕ್ಷಣಕ್ಕೂ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ದಿ ಬ್ಲೇರ್ ವಿಚ್ ಪ್ರಾಜೆಕ್ಟ್ ಸಿನಿಮಾದಲ್ಲಿ ಹೀದರ್ ಡೊನಾಹ್ಯೂ, ಮೈಕೆಲ್ ವಿಲಿಯಮ್ಸ್ ಮತ್ತು ಜೋಶುವಾ ಲಿಯೊನಾರ್ಡ್ ನಟಿಸಿದ್ದಾರೆ. ಈ ಮೂವರೇ ಚಿತ್ರದ ಹೈಲೆಟ್. ಮೂವರ ಸಹಜ ನಟನೆ ನೋಡುಗರಿಗೆ ತಮ್ಮದೇ ಹಾರ್ಟ್‌ಬೀಟ್ ಕೇಳಿಸುತ್ತದೆ. ಅಷ್ಟು ಸಹಜವಾಗಿ ಮೂವರು ಕಲಾವಿದರು ನಟಿಸಿದ್ದಾರೆ.
1999ರಲ್ಲಿ ಬಿಡುಗಡೆಯಾದ The Blair Witch Project ಸಿನಿಮಾ ಕೇವಲ 49 ಲಕ್ಷ ರೂಪಾಯಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ತೆರೆ ಕಂಡಿತ್ತು. ಇಷ್ಟು ಕಡಿಮೆ ಬಜೆಟ್ ಸಿನಿಮಾ ವಿಶ್ವದಾದ್ಯಂತೆ 20 ಬಿಲಿಯನ್ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಮತ್ತೊಂದು ವಿಶೇಷತೆ ಏನಂದ್ರೆ ಕೇವಲ 8 ದಿನಗಳಲ್ಲಿಯೇ ಸಿನಿಮಾದ ಚಿತ್ರೀಕರಣ ನಡೆದಿದೆ.
ನೀವು ಈ ಚಿತ್ರವನ್ನು ಇನ್ನೂ ನೋಡಿಲ್ಲವಾ? ಹಾಗಾದ್ರೆ ಈ ವೀಕೆಂಡ್‌ಗೆ ಈ ಸಿನಿಮಾವನ್ನು ನೋಡಬಹುದಾಗಿದೆ. OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ ದಿ ಬ್ಲೇರ್ ವಿಚ್ ಪ್ರಾಜೆಕ್ಟ್ ಸಿನಿಮಾವನ್ನು ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.