ಭೂಮಿ ಪೆಡ್ನೇಕರ್​ರನ್ನು ತಬ್ಬಿಕೊಂಡು ತುಟಿಗೆ ತುಟಿಯಿಟ್ಟ ಶೆಹನಾಜ್​ ಗಿಲ್: ಹೆಣ್ಮಕ್ಕಳನ್ನೂ ಬಿಡಲ್ವಾ ಅಂದ ಫ್ಯಾನ್ಸ್​

Published : Oct 03, 2023, 04:30 PM ISTUpdated : Oct 03, 2023, 04:32 PM IST
ಭೂಮಿ ಪೆಡ್ನೇಕರ್​ರನ್ನು ತಬ್ಬಿಕೊಂಡು ತುಟಿಗೆ ತುಟಿಯಿಟ್ಟ ಶೆಹನಾಜ್​ ಗಿಲ್:  ಹೆಣ್ಮಕ್ಕಳನ್ನೂ ಬಿಡಲ್ವಾ ಅಂದ ಫ್ಯಾನ್ಸ್​

ಸಾರಾಂಶ

ಥ್ಯಾಂಕ್ಯೂ ಫಾರ್​  ಕಮಿಂಗ್​ ಚಿತ್ರದ ಪ್ರಮೋಷನ್​ ವೇಳೆ ನಟಿ ಶೆಹನಾಜ್​ ಗಿಲ್​ ಇನ್ನೋರ್ವ ನಟಿ ಭೂಮಿ ಪೆಡ್ನೇಕರ್​ ಅವರಿಗೆ ಕಿಸ್​ ಮಾಡಲು ಹೋದಾಗ ನಟಿ ನಯವಾಗಿ ತಳ್ಳಿದ್ದು ಅದರ ವಿಡಿಯೋ ವೈರಲ್​ ಆಗಿದೆ.   

ಪಂಜಾಬ್‌ನ ಕತ್ರಿನಾ ಎಂದು ಕರೆಯಲ್ಪಡುವ ನಟಿ ಶೆಹನಾಜ್​ ಗಿಲ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬಿಜಿ ಆಗಿರುವ ನಟಿ  ಬೋಲ್ಡ್​ ಲುಕ್​ನಲ್ಲಿಯೇ ಫೇಮಸ್​ ಆಗುತ್ತಿರುವವರು. ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶೆಹನಾಜ್ ಗಿಲ್, ಶೀಘ್ರದಲ್ಲೇ 'ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರದಲ್ಲಿ ಶೆಹನಾಜ್​ ಜೊತೆ ಭೂಮಿ ಪೆಡ್ನೇಕರ್, ಕುಶಾ ಕಪಿಲಾ, ಡಾಲಿ ಸಿಂಗ್ ಮತ್ತು ಶಿಬಾನಿ ಬೇಡಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದರ ಟ್ರೇಲರ್​ ಬಿಡುಗಡೆಯಾಗಿದ್ದು, ಅದರ ಖುಷಿಯಲ್ಲಿದೆ ಚಿತ್ರತಂಡ. ಶೆಹನಾಜ್​ ಫೇಮಸ್​ ಆಗಲು ಕಾರಣ ಬಿಗ್​ಬಾಸ್​. ಸದಾ ಹಾಟ್​, ಬೋಲ್ಡ್​ ಡ್ರೆಸ್​ನಿಂದಲೇ ಫೇಮಸ್​ ಆಗ್ತಿರೋ ನಟಿಗೆ ಸಹಜವಾಗಿ ಬಿಗ್​ಬಾಸ್​ ಮನೆಯಲ್ಲಿ ಎಂಟ್ರಿ ಸಿಕ್ಕಿತ್ತು. ಅಲ್ಲಿ, ನಟ ಸಿದ್ಧಾರ್ಥ್ ಶುಕ್ಲಾ ಅವರ ಜೊತೆ ಲವ್​ನಲ್ಲಿ ಬಿದ್ದಿದ್ದರು.  ಬಿಗ್​ಬಾಸ್ ಸೀಸನ್​ನಲ್ಲಿ ಅವರು ನಟನೊಂದಿಗೆ ಪ್ರೀತಿಯಲ್ಲಿ ಬಿದ್ದರು. ಇವರ ರಿಲೇಷನ್​ಶಿಪ್ ಕ್ಯೂಟ್ ಆಗಿತ್ತು. ಸಿದ್ಧಾರ್ಥ್ ಶುಲ್ಕಾ ಮತ್ತು ಶೆಹನಾಜ್ ಗಿಲ್ ಸಾಟಿಯಿಲ್ಲದ ಒಡನಾಟವನ್ನು ಹೊಂದಿದ್ದರು, ಅವರ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರು ಮದುವೆಯಾಗಬೇಕು ಎಂದು ಅಂದುಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಮರಣವನ್ನಪ್ಪಿದರು. ಇದರಿಂದ ಕೆಲ ದಿನಗಳು ಖಿನ್ನತೆಗೆ ಜಾರಿದ್ದ ನಟಿ ಈಗ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಥ್ಯಾಂಕ್ ಯು ಫಾರ್ ಕಮಿಂಗ್ ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ನಡೆದ ಘಟನೆಯೊಂದು ಸಕತ್​ ವೈರಲ್​ ಆಗುತ್ತಿದೆ. ಇದರ ವಿಡಿಯೋ ನೋಡಿ ನೆಟ್ಟಿಗರು ಬಗೆಬಗೆ ಕಮೆಂಟ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಥ್ಯಾಂಕ್ ಯು ಫಾರ್ ಕಮಿಂಗ್ ಚಿತ್ರದ ನಟಿಯರು ಸಕತ್​ ಎಂಜಾಯ್​ ಮೂಡಿನಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶೆಹನಾಜ್​ ಹಾಗೂ ಇತರ ಕಲಾವಿದೆಯರಾದ ಭೂಮಿ ಪೆಡ್ನೇಕರ್, ಕುಶಾ ಕಪಿಲಾ, ಡಾಲಿ ಸಿಂಗ್ ಮತ್ತು ಶಿಬಾನಿ ಬೇಡಿ ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಶೆಹನಾಜ್​ ಅವರು, ನಟಿ ಭೂಮಿ ಪೆಡ್ನೇಕರ್​ ಅವರನ್ನು ತಬ್ಬಿಕೊಂಡು ಕಿಸ್​ ಮಾಡಲು ಬಂದಿದ್ದಾರೆ. ಆ ಸಮಯದಲ್ಲಿ ಸ್ವಲ್ಪ ಗಲಿಬಿಲಿಗೊಂಡ ಭೂಮಿ, ಆಕೆಯನ್ನು ನಯವಾಗಿ ತಳ್ಳಿದ್ದಾರೆ. ಕಿಸ್​ ಕೊಡಲು ಬಿಡಲಿಲ್ಲ. ಆಕೆ ಹತ್ತಿರ ಬರುತ್ತಿದ್ದಂತೆಯೇ ಭೂಮಿ, ನಾನು ಶೆಹನಾಜ್‌ ಇಷ್ಟು ಸಂತೋಷವಾಗಿರುವುದನ್ನು  ಹಿಂದೆಂದೂ ನೋಡಿಲ್ಲ ಎಂದು ಹೇಳುವ ಮೂಲಕ ನಯವಾಗಿ ಆಕೆಯನ್ನು ದೂರಕ್ಕೆ ತಳ್ಳಿರುವುದು ವಿಡಿಯೋದಲ್ಲಿ ನೋಡಬಹುದು. 

ರಾಗಿಣಿ ಹಾಟ್​ ಫೋಟೋಶೂಟ್​​: ಬಿಕಿನಿಯಲ್ಲೇ ನೀವ್​ ಚೆಂದ, ಚೆಡ್ಡಿ ಬಿಟ್ಬಿಡಿ ಅನ್ನೋದಾ ಫ್ಯಾನ್ಸ್​?

ಈ ವಿಡಿಯೋದಲ್ಲಿ ಶೆಹನಾಜ್​ ಅವತಾರ ನೋಡಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಕುಡಿದದ್ದು ಜಾಸ್ತಿಯಾದ್ರೆ ಇದೇ ಆಗುತ್ತದೆ ಎಂದಿದ್ದರೆ, ಸಂತೋಷಕ್ಕೂ ಸ್ವಲ್ಪ ಮಿತಿ ಇರಬೇಕು ಹುಚ್ಚರಂತೆ ವರ್ತಿಸುವುದು ಅಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ. ಈಕೆ ಯಾಕೆ ಅಜ್ಜಿಯ ರೀತಿ ಕಾಣಿಸುತ್ತಿದ್ದಾಳೆ ಎಂದು ಕೆಲವರು ಪ್ರಶ್ನಿಸಿದರೆ, ಈಕೆಯ ಫ್ಯಾನ್ಸ್​ ನಮ್ಮ ಪರಿ ಇವಳೇ ಎನ್ನುತ್ತಿದ್ದಾರೆ. ಇನ್ನು ಹಲವರು ಈ ನಾಲ್ವರನ್ನು ಒಂದೇ ಚಿತ್ರದಲ್ಲಿ ನೋಡಲು ಖುಷಿ ಎನಿಸುತ್ತದೆ ಎಂದಿದ್ದರೆ, ಮತ್ತೆ ಕೆಲವರು ಚಿತ್ರ ಬರುವುದನ್ನೇ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. 

ಅಂದಹಾಗೆ  ಶೆಹನಾಜ್ ತಮ್ಮ ಫಿಟ್​ನೆಸ್​  ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಅವರು,  12 ಕೆ.ಜಿ  ತೂಕವನ್ನು ಕಳೆದುಕೊಂಡು ಸ್ಲಿಮ್ ಟ್ರಿಮ್ ಆಗಿ ಎಲ್ಲರ ಹುಬ್ಬೇರಿಸಿದ್ದರು. ಅಂದಹಾಗೆ ಥ್ಯಾಂಕ್ಯೂ ಫಾರ್​ ಕಮಿಂಗ್​ ಚಿತ್ರವು ಇದೇ 6 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ನಿವೇದಿತಾ ಕ್ಯೂಟ್​ ವಿಡಿಯೋ ವೈರಲ್​: ಮೂರು ವರ್ಷ ಕುಣಿದದ್ದು ಸಾಕು, ಮಕ್ಳು ಮಾಡ್ಕೋಳಿ ಅನ್ನೋದಾ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!