15 ವರ್ಷ ಚಿಕ್ಕವ, 12 ವರ್ಷ ದೊಡ್ಡವ ಸಾಕಾಯ್ತು... ಹೊಸ ಎಂಟ್ರಿಗೆ ಸುಷ್ಮಿತಾ ಸೇನ್​ ರೆಡಿ- ನಟಿ ಹೇಳಿದ್ದೇನು?

Published : Feb 27, 2025, 02:59 PM ISTUpdated : Feb 27, 2025, 03:22 PM IST
15 ವರ್ಷ ಚಿಕ್ಕವ, 12 ವರ್ಷ ದೊಡ್ಡವ ಸಾಕಾಯ್ತು... ಹೊಸ ಎಂಟ್ರಿಗೆ ಸುಷ್ಮಿತಾ ಸೇನ್​ ರೆಡಿ- ನಟಿ ಹೇಳಿದ್ದೇನು?

ಸಾರಾಂಶ

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತವೆ. ರೋಹ್ಮನ್ ಶಾಲ್ ಜೊತೆಗಿನ ಬ್ರೇಕಪ್ ನಂತರ, ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿದ್ದವು. ಸದ್ಯಕ್ಕೆ, ಸುಷ್ಮಿತಾ ತಾನು ಮದುವೆಗೆ ಸೂಕ್ತ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. 2021 ರಿಂದ ತಾನು ಸಿಂಗಲ್ ಆಗಿದ್ದು, ಪ್ರಸ್ತುತ ಯಾವುದೇ ಸಂಬಂಧದಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮಿಸ್ ಯೂನಿವರ್ಸ್‌, ಬಾಲಿವುಡ್ ನಟಿ ಸುಷ್ಮಿತಾ ಸೇನ್‌ (Sushmita Sen) ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ.  ನಟಿ ಸುಷ್ಮಿತಾ ಸೇನ್ 49 ವರ್ಷಕ್ಕೆ ಕಾಲಿಟ್ಟರೂ, ಅವರು ಇನ್ನೂ ಒಂಟಿಯಾಗಿದ್ದಾರೆ.  ಕೆಲ ದಿನಗಳ ಹಿಂದೆ ನಟಿ ಸಕತ್​  ಸದ್ದು ಮಾಡಿದ್ದರು. ಅವರ ಮತ್ತು ಅವರ ಮಾಜಿ ಪ್ರೇಮಿ  ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್‌ ಆಗಿತ್ತು. (ರೋಹ್ಮನ್​ ಶಾಲ್​ಗೆ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್​ 15 ವರ್ಷ ಕಿರಿಯರು) ಮತ್ತೆ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.  ಸುದೀರ್ಘ ಸಂಬಂಧದ ನಂತರ,  ಡಿಸೆಂಬರ್ 2021 ರಲ್ಲಿ ಸುಷ್ಮಿತಾ ಸೇನ್‌ ರೋಹ್ಮನ್ ಶಾಲ್‌ ಅವರೊಂದಿಗೆ ಬ್ರೇಕಪ್‌ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್‌ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ನಂತರ ಮತ್ತೆ  ಇಬ್ಬರು ಮತ್ತೆ ಒಂದಾಗಿರುವಂತೆ ವಿಡಿಯೋ ವೈರಲ್​ ಆಗಿತ್ತು.   

ಆದರೆ ಇದರ ನಡುವೆಯೇ, ಐಪಿಎಲ್ ಸಂಸ್ಥಾಪಕ,  ಉದ್ಯಮಿ ಲಲಿತ್ ಮೋದಿ   59 ವಯಸ್ಸಿನಲ್ಲಿ ಮತ್ತೆ ಸುಷ್ಮಿತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸದ್ದು ಮಾಡಿತ್ತು.  ಲಲಿತ್ ಮೋದಿ ಕಳೆದ ವರ್ಷ  ಸುಷ್ಮಿತಾ ಸೇನ್ ಅವರೊಂದಿಗಿನ ಕೆಲವು ಸಕತ್​ ಕ್ಲೋಸ್​ ಎನಿಸುವ  ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ  ಸುಷ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ನಟಿ ಮೌನ ವಹಿಸಿದ್ದರೂ, ಲಲಿತ್ ಮೋದಿ ಆ ಪೋಸ್ಟ್​ ಅನ್ನು ಕೆಲ ದಿನ ಡಿಲೀಟ್​ ಮಾಡದೇ ಇಟ್ಟುಕೊಂಡಿದ್ದರು. ಇದಾದ ಬಳಿಕ ನಟಿ ಸುಷ್ಮಿತಾ ಸೇನ್​ ನಾನು ಸಿಂಗಲ್‌, ಒಂಟಿಯಾಗಿದ್ದೇನೆ ಎನ್ನುವ ಹೇಳಿಕೆ ಕೊಟ್ಟು ಸಕತ್​ ಟ್ರೋಲ್​ಗೂ ಒಳಗಾಗಿದ್ದರು. 

ಪೆಪ್ಸಿ ಕಂಪೆನಿ ಸುಷ್ಮಿತಾರನ್ನು ರಿಜೆಕ್ಟ್​ ಮಾಡಿದಾಗ ನಡೆಯಿತು ಪವಾಡ: ನಟಿಯ ಇಂಟರೆಸ್ಟಿಂಗ್​ ಸ್ಟೋರಿ ಕೇಳಿ!

ಇದೀಗ, ಅಭಿಮಾನಿಯೊಬ್ಬರು ಅವರ ಮದುವೆಯ ಬಗ್ಗೆ ಕೇಳಿದಾಗ, ಅವರು ತಮಾಷೆಯ ಉತ್ತರವನ್ನು ನೀಡಿದ್ದು ಅದು ವೈರಲ್​ ಆಗಿದೆ.  ಮದುವೆಯಾಗಲು ಸರಿಯಾದ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ನಟಿ ಹೇಳಿದ್ದಾರೆ. ಅವರು ಇನ್ಸ್ಟಾಗ್ರಾಮ್ ಮೂಲಕ ಈ ವಿಷಯ ತಿಳಿಸಿದ್ದಾರೆ. ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಸೆಷನ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಿದರು. ಚಾಟ್ ಸಮಯದಲ್ಲಿ, ಒಬ್ಬ ಬಳಕೆದಾರರು ಅವರ ಮದುವೆ ಯೋಜನೆಗಳ ಬಗ್ಗೆ ಕೇಳಿದರು. ಇದಕ್ಕೆ ನಟಿ, 'ನಾನು ಮದುವೆಯಾಗಲು ಬಯಸುತ್ತೇನೆ' ಎಂದು ಹೇಳಿದರು. ನಾನು ಮದುವೆಗೆ ಯೋಗ್ಯ ವ್ಯಕ್ತಿಯನ್ನು ಹುಡುಕಬೇಕು.  ಹೃದಯದ ಸಂಬಂಧ, ಸಂದೇಶವು ಹೃದಯವನ್ನು ತಲುಪಬೇಕು, ಆಗ ಮದುವೆಯಾಗುವೆ ಎಂದಿದ್ದಾರೆ.
  
ಈ ಹಿಂದೆ ನಟಿ, ನನ್ನ ಜೀವನದಲ್ಲಿ ಯಾರೂ ಇಲ್ಲ. ನಾನು ಸ್ವಲ್ಪ ಸಮಯದಿಂದ ಒಂಟಿಯಾಗಿದ್ದೇನೆ. ನಿಖರವಾಗಿ ಹೇಳಬೇಕೆಂದರೆ, 2021 ರಿಂದ ನಾನು ಒಂಟಿಯಾಗಿ ಸುಮಾರು ಎರಡು ವರ್ಷಗಳಾಗಿವೆ. ನಾನು ಸಂಬಂಧದಲ್ಲಿಲ್ಲ. ಅದ್ಭುತ ಜನರು ನನ್ನ ಸ್ನೇಹಿತರಾಗಿದ್ದಾರೆ ಎಂದಿದ್ದರು.     ಲಲಿತ್ ಮೋದಿ ಜೊತೆ ಡೇಟ್ ಮಾಡುವಾಗ ಅನೇಕರು ಸುಷ್ಮಿತಾ ಸೇನ್ ಅವರು ಟೀಕೆ ಮಾಡಿದ್ದರು. ಹಣಕ್ಕಾಗಿಯೇ ಅವರು ಲಲಿತ್ ಮೋದಿ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಗೋಲ್ಡ್​ ಡಿಗ್ಗರ್​ (Gold Digger) ಎಂದು ಅನೇಕರು ಟೀಕಿಸಿದ್ದರು.  ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದರು. ಲಲಿತ್ ಮೋದಿಯವರನ್ನು ಮದುವೆ ಆಗುವ ಆಲೋಚನೆ ನನಗೆ ಇಲ್ಲ.  ನಾನು ಇನ್​ಸ್ಟಾಗ್ರಾಮ್​ನಲ್ಲಿ  ಇಬ್ಬರ ಫೋಟೋ  ಹಾಕಲು ಒಂದು ಕಾರಣ ಇದೆ. ಕೆಲವೊಮ್ಮೆ ಜನರು ಮೌನವಾಗಿದ್ದಾಗ ಅವರ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸುತ್ತೇನೆ. ನಾನು ನಗುತ್ತಿದ್ದೇನೆ ಎಂದು ಜನರಿಗೆ ತಿಳಿಸಲು ಒಂದು ಪೋಸ್ಟ್ ಹಾಕಿದೆ. ಅದು ಅಲ್ಲಿಗೆ ಮುಗಿದಿದೆ ಎಂದು ಅವರು ಹೇಳಿದ್ದರು.  ಅಲ್ಲಿಗೆ ತಾವು ಲಲಿತ್​ ಮೋದಿ ಜೊತೆ ರಿಲೇಷನ್​ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. 

ನಯನತಾರಾ 100 ಕೋಟಿ ಆಫರ್​ ರಿಜೆಕ್ಟ್​: 'ಟಾಕ್ಸಿಕ್'​ ಚಿತ್ರದ ಬೆನ್ನಲ್ಲೇ ನಟಿಯ ಆ ಖಡಕ್​ ತೀರ್ಮಾನ ಬಯಲಿಗೆ...!
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?