ನಟ ಸುಶಾಂತ್​ ಸಿಂಗ್​ 'ಆತ್ಮ'ಕ್ಕೆ ಹೆದರಿ ಫ್ಲ್ಯಾಟ್​ ಖಾಲಿ! ಎರಡೂವರೆ ವರ್ಷದ ಬಳಿಕ ಸಿಕ್ಕ ಟೆನೆಂಟ್!

By Contributor AsianetFirst Published Jan 4, 2023, 5:17 PM IST
Highlights

ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ಬಳಿಕ ಅವರು ವಾಸಿಸುತ್ತಿದ್ದ ಅಪಾರ್ಟ್​ಮೆಂಟ್​ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಕೊನೆಗೂ ಈಗ ಅದಕ್ಕೆ ಮುಕ್ತಿ ಸಿಕ್ಕಿದೆ. ಆಗಿದ್ದೇನು?

ನಟ ಸುಶಾಂತ್​ ಸಿಂಗ್​ ರಜಪೂತ್​ (Sushanth Singh Rajpur) ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷಗಳೇ ಕಳೆದುಹೋದವು. 2020ರ ಜೂನ್​ 14ರಂದು ಸುಶಾಂತ್ ಸಿಂಗ್  ಅವರ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿತ್ತು. ಈ ಅಪಾರ್ಟ್​ಮೆಂಟ್​ ಅನ್ನು ಸುಶಾಂತ್​ ಅವರು ಬಾಡಿಗೆಗೆ ಪಡೆದಿದ್ದರು. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದರ ಬಗ್ಗೆ ಥಹರೇವಾರಿ ಚರ್ಚೆಗಳು ನಡೆಯುತ್ತಲೇ ಇವೆ. 

ಆದರೆ ವಿಚಿತ್ರ ಎಂದರೆ, ಇವರ ಸಾವಿನ ಬಗ್ಗೆ ಭಾರಿ ಸುದ್ದಿಯಾಗುತ್ತಲೇ ಅಪಾರ್ಟ್​ಮೆಂಟ್​ (Apartment) ಬಳಿ ಬರಲು ಜನರು ಹೆದರುತ್ತಿದ್ದಾರೆ. ಸುಶಾಂತ್​ ಸಿಂಗ್​ ಅವರ ಆತ್ಮ ಅಲ್ಲಿಯೇ ಅಲೆದಾಡುತ್ತಿರಬಹುದು ಎಂದು ನಂಬಿರುವ ಜನರು, ಬಾಡಿಗೆಗೆ ಈ ಮನೆಗೆ ಬರಲು ಹಿಂದೇಟು ಹಾಕುತ್ತಿದ್ದ ಕಾರಣ ಕಳೆದ ಎರಡೂವರೆ ವರ್ಷಗಳಿಂದ ಮನೆ ಖಾಲಿಯೇ ಇದೆ. ಧೈರ್ಯ ಮಾಡಿ ಕೆಲವರು ತಾವು ಬಾಡಿಗೆಗೆ ಬರುತ್ತೇವೆ ಎಂದು ಹೇಳುತ್ತಿದ್ದರೂ ಅದ್ಯಾಕೋ ಕೊನೆ ಕ್ಷಣದಲ್ಲಿ ಬರಲು ನಿರಾಕರಿಸಿರುವ ಘಟನೆಗಳೂ ನಡೆಯುತ್ತಿವೆ.  

ಸುಶಾಂತ್ ಸಾವಿಗೆ ಮತ್ತೊಂದು ಟ್ವಿಸ್ಟ್‌; ಪ್ರಭಾವಿ ರಾಜಕಾರಣಿಯಿಂದ ಬಂದಿತ್ತು ನಟಿಗೆ 44 ಸಾಲ ಕರೆ

ಸುಮಾರು 2,500 ಚದರ ಅಡಿಯ ಈ ಅಪಾರ್ಟ್​ಮೆಂಟ್​ ನಾಲ್ಕು ಬೆಡ್​ರೂಮ್​ಗಳನ್ನು ಹೊಂದಿದ್ದು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.  ಇಂಥ ಐಷಾರಾಮಿ ಅಪಾರ್ಟ್​ಮೆಂಟ್​ಗಳಿಗೆ, ಅದರಲ್ಲಿಯೂ ಚಿತ್ರನಟನೊಬ್ಬ ನೆಲೆಸಿರುವ ಮನೆಗೆ ಅಭಿಮಾನಿಗಳು ಮುಗಿಬಿದ್ದು ಬಾಡಿಗೆಗೆ  ಬರುವುದು ಸಾಮಾನ್ಯ. ಆದರೆ ಸುಶಾಂತ್​ ಸಿಂಗ್​ ಅವರ ಸಾವಿನ ನಂತರದ ಭಯದಿಂದಾಗಿ ಇಲ್ಲಿ ಮಾತ್ರ ಬಾಡಿಗೆದಾರರು (Tenant) ಯಾರೂ ಬರುತ್ತಿಲ್ಲ. 

ಈ ಕುರಿತು ಮಾಲೀಕರು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದ್ದರು. 'ಸುಶಾಂತ್​ ಸಿಂಗ್​ ಉಳಿದುಕೊಂಡಿರುವ ಮನೆ ಎಂದಾಕ್ಷಣ ಬರಲು ಜನರು ಭಯ ಬೀಳುತ್ತಾರೆ. ಕೆಲವರಿಗೆ ಸುಶಾಂತ್​ ಸಿಂಗ್​ ಅವರ ಬಗ್ಗೆ ತಿಳಿದಿರುವುದಿಲ್ಲ. ಮುಂದೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಅವರು ಸತ್ತಿರುವ ಕುರಿತು ವಿಷಯ ತಿಳಿಸುತ್ತೇವೆ.  ಹಲವರು ಇವೆಲ್ಲಾ ಓಕೆ ಎಂದು ಬರಲು ಮುಂದಾಗಿದ್ದೂ ಇದೆ.  ಆದರೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಬರುವುದನ್ನು ವಿರೋಧಿಸುತ್ತಿದ್ದಾರೆ.  ಕೊನೆಯಲ್ಲಿ ಒಪ್ಪಂದ ಮುರಿದುಬೀಳುತ್ತದೆ' ಎಂದು ತಿಳಿಸಿದ್ದರು.

ಮನೆಗೆ ಯಾರೂ ಬಾಡಿಗೆದಾರರು ಬರದಿದ್ದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ (Real estate Broaker) ರಫೀಕ್ ಮರ್ಚೆಂಟ್ ಅವರು,  ಮನೆ ಬಾಡಿಗೆ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.  ತಿಂಗಳಿಗೆ  5 ಲಕ್ಷ ರೂಪಾಯಿ ಬಾಡಿಗೆ ಹಾಗೂ 30 ಲಕ್ಷ ರೂಪಾಯಿ ಡಿಪಾಸಿಟ್​ಗೆ ಈ ಅಪಾರ್ಟ್​ಮೆಂಟ್​ ಲಭ್ಯವಿದೆ ಎಂದಿದ್ದರು. ಆದರೆ ಯಾವುದೇ ಕಾರಣಕ್ಕೂ ಈ ಅಪಾರ್ಟ್​ಮೆಂಟ್​ ಅನ್ನು ಇನ್ನು ಮುಂದೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ನೀಡುವುದಿಲ್ಲ ಎಂದು ಮಾಲೀಕರು ಹೇಳಿದ್ದು, ಅದನ್ನು  ಬ್ರೋಕರ್ ಬಹಿರಂಗಪಡಿಸಿದ್ದರು.

ಸುಶಾಂತ್​ ಸಿಂಗ್​ ಸಾವಿನ ಬಳಿಕ ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಸೆಲೆಬ್ರಿಟಿಗಳಿಗೆ ನೀಡುವುದಿಲ್ಲ.  ಕಾರ್ಪೊರೇಟ್ (Corporate) ಸಂಬಂಧ ಕೆಲಸ ಮಾಡುವವರಿಗೆ ಮಾತ್ರ ನೀಡುತ್ತೇವೆ ಎಂದಿದ್ದರು. ಆದ್ದರಿಂದ ಫ್ಲ್ಯಾಟ್​ ಇಲ್ಲಿಯವರೆಗೂ ಖಾಲಿಯಾಗಿಯೇ ಇದೆ. 

ಆದರೆ ಈಗ ಅಂತೂ ಈ ಅಪಾರ್ಟ್​ಮೆಂಟ್​ನ ಭಾಗ್ಯ ಖುಲಾಯಿಸಿದೆ. ಒಬ್ಬ ಬಾಡಿಗೆದಾರ ಬರಲು ಒಪ್ಪಿದ್ದಾರೆ ಎನ್ನಲಾಗಿದೆ.    ಬ್ರೋಕರ್ ರಫೀಕ್ ಮರ್ಚೆಂಟ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಾಡಿಗೆದಾರ ಯಾರು ಎಂದು ಹೇಳಲು ಇಚ್ಛಿಸದ ಅವರು, “ಕೊನೆಗೂ ನಾವು ಬಾಡಿಗೆದಾರರನ್ನು ಕಂಡುಕೊಂಡಿದ್ದೇವೆ. ನಾವು ಅವರ ಕುಟುಂಬದೊಂದಿಗೆ ಅಂತಿಮ ಹಂತದ ಮಾತುಕತೆಯಲ್ಲಿದ್ದೇವೆ“ ಎಂದಿದ್ದಾರೆ. ಶೀಘ್ರದಲ್ಲೇ ಒಪ್ಪಂದವು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ. 

Sushant Singh case; ನಿಮ್ಮ ಮೇಲೆ ನಂಬಿಕೆ ಇದೆ; ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ನಂತರ ಸುಶಾಂತ್ ಸಹೋದರಿ ಮಾತು

ವರದಿಯ ಪ್ರಕಾರ, ಸುಶಾಂತ್ ಅವರು ಡಿಸೆಂಬರ್ 2019 ರಿಂದ ತಿಂಗಳಿಗೆ  4.5 ಲಕ್ಷ ರೂಪಾಯಿ ಬಾಡಿಗೆಗೆ ಅಪಾರ್ಟ್​ಮೆಂಟ್​ ಬಾಡಿಗೆಗೆ ಪಡೆದಿದ್ದರು. ಅವರು ತಮ್ಮ ಫ್ಲ್ಯಾಟ್ (Flat) ಅನ್ನು ಇತರ ಸ್ನೇಹಿತರೊಂದಿಗೆ ಮೊದಲು ಶೇರ್​ ಮಾಡಿಕೊಂಡಿದ್ದರು. ನಂತರ ಕೋವಿಡ್​ ವೇಳೆ ಗೆಳತಿ-ನಟಿ ರಿಯಾ ಚಕ್ರವರ್ತಿ ಅವರೊಂದಿಗೆ ಇಲ್ಲಿ ವಾಸವಿದ್ದರು.
 

click me!