ದೀಪಿಕಾರಿಂದ ಶ್ರದ್ಧಾವರೆಗೆ: ಸುಶಾಂತ್ ಸಿಂಗ್​ ಸಾವಿನ ಸ್ಕ್ಯಾನರ್ ಅಡಿ ಸಿಲುಕಿದ ಬಾಲಿವುಡ್​ ಸ್ಟಾರ್ಸ್​!

Published : Jun 14, 2023, 02:39 PM ISTUpdated : Jun 14, 2023, 02:40 PM IST
ದೀಪಿಕಾರಿಂದ ಶ್ರದ್ಧಾವರೆಗೆ: ಸುಶಾಂತ್ ಸಿಂಗ್​ ಸಾವಿನ ಸ್ಕ್ಯಾನರ್ ಅಡಿ ಸಿಲುಕಿದ ಬಾಲಿವುಡ್​ ಸ್ಟಾರ್ಸ್​!

ಸಾರಾಂಶ

ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಿಗೂಢವಾಗಿ ಸಾವನ್ನಪ್ಪಿ ಮೂರು ವರ್ಷ ಕಳೆದಿದ್ದು, ಇದರ ವಿಚಾರಣೆ ಅಡಿ ಇದಾಗಲೇ ಹಲಾವರು ಬಾಲಿವುಡ್​​ ತಾರೆಯರು ಸಿಲುಕಿದ್ದಾರೆ. ಯಾರವರು?   

ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ಇಂದಿಗೆ ಮೂರು ವರ್ಷ. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ರಹಸ್ಯ ಅವರ ಜೊತೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಆದರೆ  ಸುಶಾಂತ್ ಸಾವಿನ  ನಂತರ ಕೇಳಿಬಂದ ಹೆಸರು  ನಟಿ ರಿಯಾ ಚಕ್ರವರ್ತಿ(Rhea Chakraborty) ಅವರದ್ದು. ಸುಶಾಂತ್​ ಸಿಂಗ್​ ಅವರ ಪ್ರೇಯಸಿ ಎಂದು ಅನ್ನಿಸಿಕೊಂಡಿದ್ದ ರಿಯಾ ಚಕ್ರವರ್ತಿ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಸುಶಾಂತ್​ ಸಾವಿನ ಹಿಂದೆ ಇವರದ್ದೇ ಕೈವಾಡ ಇದೆ ಎನ್ನುವ ಸುದ್ದಿ ಬಹಳ ಸದ್ದು ಮಾಡಿತ್ತು. ಸಮಯ ಕಳೆದಂತೆ ಸುಶಾಂತ್​ ಸಿಂಗ್​ ಸಾವಿನ ರಹಸ್ಯ ಹಾಗೆಯೇ  ಮರೆಯಾಗುತ್ತಿದೆ. ಇದರ ಬಗ್ಗೆ ಎಲ್ಲಾ ದಿಕ್ಕುಗಳಿಂದಲೂ ತನಿಖೆ ನಡೆಯುತ್ತಲೇ ಇದ್ದು, ಇದಾಗಲೇ ಹಲವಾರು ಬಾಲಿವುಡ್​​ ಸೆಲೆಬ್ರಿಟಿಗಳು ಆರೋಪಿಗಳಾಗಿದ್ದಾರೆ. ಸುಶಾಂತ್ ಸಾವಿನ ನಂತರ ಬಾಲಿವುಡ್ ಕೂಡ ಎರಡು ಬಣಗಳಾಗಿ ವಿಭಜನೆಯಾಯಿತು. ಕಂಗನಾ ರಣಾವತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸ್ವಜನಪಕ್ಷಪಾತದ ವಿರುದ್ಧ ಬಹಿರಂಗವಾಗಿ ತಮ್ಮ ರಂಗವನ್ನು ತೆರೆದಿದ್ದರು. ಮುಂಬೈ ಪೊಲೀಸರು ಇದನ್ನು ನೇರ ಆತ್ಮಹತ್ಯೆ ಪ್ರಕರಣ ಎಂದು ಕರೆದಿದ್ದರು. ಆದರೆ ರಾಜಕೀಯ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ತನಿಖೆಯಲ್ಲಿ ಡ್ರಗ್ಸ್ ಕೋನ ಬಯಲಿಗೆ ಬಂದಾಗ ಅದರಲ್ಲಿ ಎನ್‌ಸಿಬಿ ಎಂಟ್ರಿಯಾಗಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಹಾರದ ನಿತೀಶ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರ ಬಿಜೆಪಿ ನಾಯಕ ಮತ್ತು ವಕೀಲ ಅಜಯ್ ಕುಮಾರ್ ಅಗರ್ವಾಲ್, ಮುಂಬೈನ ಕಾನೂನು ವಿದ್ಯಾರ್ಥಿಗಳ ಜೊತೆಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದರು. ಅದೇ ಸಮಯದಲ್ಲಿ, ಸುಪ್ರೀಂ ಕೋರ್ಟ್, ವಿವಿಧ ಅರ್ಜಿಗಳನ್ನು ಸಂಗ್ರಹಿಸುವಾಗ, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ನಿರ್ಧಾರವನ್ನು ನೀಡಿತು. ಕೇಂದ್ರದ ಮೋದಿ ಸರ್ಕಾರವು 05 ಆಗಸ್ಟ್ 2020 ರಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

Sushant Singh Rajput Death Anniversary: 3 ವರ್ಷ ಕಳೆದ್ರೂ ಬಹಿರಂಗವಾಗಿಲ್ಲ ಸುಶಾಂತ್ ಸಾವಿನ ಹಿಂದಿನ ರಹಸ್ಯ
 
 ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೌವಿಕ್ ಚಕ್ರವರ್ತಿ (Shouvik Chakravarthi) ರಿಯಾ ಅವರ ಮ್ಯಾನೇಜರ್ ಮತ್ತು ಸುಶಾಂತ್ ಅವರ ಮಾಜಿ ಹೌಸ್ ಮ್ಯಾನೇಜರ್ ಅವರನ್ನೂ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿವೆ. ನಟಿಯರಾದ ರಿಯಾ, ಶೌವಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಬಂಧಿಸುವ ಮೂಲಕ ಎನ್‌ಸಿಬಿ  ವಿಚಾರಣೆಯನ್ನೂ  ಪ್ರಾರಂಭಿಸಿತ್ತು.  ಅದೇ ಸಮಯದಲ್ಲಿ, ಡ್ರಗ್ಸ್ ದಂಧೆಯಲ್ಲಿ, ಎನ್‌ಸಿಬಿ ಸೆಲೆಬ್ರಿಟಿ ಮ್ಯಾನೇಜರ್ ರಹಿಲಾ ಫರ್ನಿಚರ್‌ವಾಲಾ, ಉದ್ಯಮಿ ಕರಣ್ ಸಜ್ನಿ, ಇನ್ನೊಬ್ಬ ಆರೋಪಿ ಜಗತಾಪ್ ಸಿಂಗ್ ಆನಂದ್ ಮತ್ತು ಇನ್ನೂ ಅನೇಕ ಜನರನ್ನು ಬಂಧಿಸಿತ್ತು. 

ಸುಶಾಂತ್ ಸಾವಿನ ನಂತರ ಬಾಲಿವುಡ್‌ನಲ್ಲಿ ಡ್ರಗ್ಸ್ ಅವ್ಯಾಹತವಾಗಿ ಬಳಕೆಯಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಸುದ್ದಿ ಇಡೀ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು. ಅನೇಕ ಸೆಲೆಬ್ರಿಟಿಗಳು ಸ್ಕ್ಯಾನರ್ ಅಡಿಯಲ್ಲಿ ಬಂದರು. ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್​  ಪ್ರೀತ್​ ಸಿಂಗ್ (Rakul Preeth Singh) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಪ್ರಕರಣದ ತನಿಖೆಯಲ್ಲಿ ಡ್ರಗ್ ಡೀಲರ್ ಜೊತೆಗಿನ ಸಂಬಂಧ ಬಹಿರಂಗವಾಗಿದೆ. ಇದೇ ಎನ್‌ಸಿಬಿ ಅರ್ಜುನ್ ರಾಂಪಾಲ್ ಮನೆ ಮೇಲೂ ದಾಳಿ ನಡೆಸಿತ್ತು.

ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೌವಿಕ್ ಚಕ್ರವರ್ತಿ ಅವರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ನಂತರ ವಿವಿಧ ಸಮಯಗಳಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದರು. ರಿಯಾ ಚಕ್ರವರ್ತಿ ವಿರುದ್ಧ ಮನಿ ಲಾಂಡರಿಂಗ್ (Money Laundering) ಬಗ್ಗೆ ಯಾವುದೇ ಪುರಾವೆಗಳು ಇಡಿಗೆ ಸಿಕ್ಕಿಲ್ಲ. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ನಂತರ ರಿಯಾ ಚಕ್ರವರ್ತಿ ಜಾಮೀನು ಪಡೆದರು. ಮತ್ತು ಅವರ ಸಹೋದರ ಶೌವಿಕ್ ಚಕ್ರವರ್ತಿ ಸುಮಾರು 3 ತಿಂಗಳ ನಂತರ ಜಾಮೀನು ಪಡೆದರು. ಒಟ್ಟಿನಲ್ಲಿ ಸುಶಾಂತ್​ ಸಾವಿನ ಪ್ರಕರಣ ಇನ್ನಷ್ಟು ಜಟಿಲವಾಗುತ್ತಲೇ ಸಾಗಿದೆ. 

Rhea Chakraborty: ವೇಶ್ಯೆ ಎಂದವರಿಗೆ ನಟಿ ತಿರುಗೇಟು- ಮುಂದಿನ ಬೇಟೆ ಯಾರು ಎಂದ ಟ್ರೋಲಿಗರು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!