ಬಂಧನದ ಭೀತಿಯಿಂದ ನಟಿ ಜಯಪ್ರದಾ ಸದ್ಯ ನಿರಾಳ: ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂಕೋರ್ಟ್​

By Suvarna News  |  First Published Mar 19, 2024, 11:27 AM IST

ಹೈಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿ ಎದುರಿಸುತ್ತಿದ್ದ ನಟಿ ಜಯಪ್ರದಾ ಅವರು ಸದ್ಯ ನಿರಾಳರಾಗಿದ್ದಾರೆ. ಇವರ ಶಿಕ್ಷೆಯನ್ನು ಸುಪ್ರೀಂಕೋರ್ಟ್​ ಅಮಾನತಿನಲ್ಲಿ ಇರಿಸಿದೆ. ಏನಿದು ಕೇಸ್​? 
 


ನಟಿ ಹಾಗೂ ಸಮಾಜವಾದಿ ಪಕ್ಷದ  ಮಾಜಿ ಸಂಸದೆ ಜಯಪ್ರದಾ (Jaya Prada) ಅವರಿಗೆ  ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಧ್ಯಪ್ರದೇಶ ಹೈಕೋರ್ಟ್​ ಆರು ತಿಂಗಳ ಶಿಕ್ಷೆ ವಿಧಿಸಿತ್ತು. ಇದೀಗ ಈ ಶಿಕ್ಷೆಯನ್ನು ಸುಪ್ರೀಂಕೋರ್ಟ್​ ಅಮಾನತಿನಲ್ಲಿ ಇರಿಸಿದ್ದು,  ನಟಿಗೆ ಮಧ್ಯಂತರ ಜಾಮೀನು ಕೂಡ ನೀಡಿದೆ. ನಟಿಯ ವಿರುದ್ಧ ಸೆಷನ್​ ಕೋರ್ಟ್​ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೆ ನಟಿಗೆ ಬಂಧನದ ಭೀತಿ ಇಲ್ಲ. ಅಂದಹಾಗೆ ನಟಿ ವಿರುದ್ಧ ಈ ಹಿಂದೆ ಮಧ್ಯಪ್ರದೇಶ ಕೋರ್ಟ್  ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.  ಆದರೆ ನಟಿ ಯಾರ ಕೈಗೂ ಸಿಗದೇ ನಟಿ ತಲೆ ಮರೆಸಿಕೊಂಡಿದ್ದರು. ರಾಂಪುರ ಪೊಲೀಸರು ನಟಿಯ  ಹುಡುಕಾಟಕ್ಕೆ ತಂಡವನ್ನು ರಚಿಸಿದ್ದರು. ಆದರೆ ಅವರಿಗೆ ಜಯಪ್ರದಾ ಅವರ ಕೈಗೂ ಸಿಕ್ಕಿರಲಿಲ್ಲ. ಕೋರ್ಟ್​ ಆದೇಶದ ಅನ್ವಯ ಕಳೆದ ಜನವರಿ 10ರೊಳಗೆ  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ, ಜಯಪ್ರದಾ ಅವರು ಕಾಣೆಯಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ್ದ ಕೋರ್ಟ್​,  ಕೂಡಲೇ ಅರೆಸ್ಟ್​ ಮಾಡುವಂತೆ  ಆದೇಶಿಸಿತ್ತು.
 
ಇದರ ಮಧ್ಯೆಯೇ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಜಯಪ್ರದಾ ಅವರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅಂದಹಾಗೆ ನಟಿಯ ವಿರುದ್ಧ ಇರುವ ಆರೋಪವು  ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪ್ರಕರಣಕ್ಕೆ ಸಂಬಂಧಿಸಿದ್ದು. ಥಿಯೇಟರ್ ಕಾಂಪ್ಲೆಕ್ಸ್‌ನ ಕಾರ್ಮಿಕರಿಂದ ಹಣ ವಸೂಲಿ ಮಾಡಿದರೂ ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪಾಲನ್ನು ಪಾವತಿಸದ ಆರೋಪ ಇವರ ಮೇಲಿತ್ತು. ಇದು ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್​ ಆರು ತಿಂಗಳ ಶಿಕ್ಷೆ ವಿಧಿಸಿತ್ತು.  ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನ ಚಿತ್ರಮಂದಿರವನ್ನು ಹೊಂದಿದ್ದರು. ಇದನ್ನು ಚೆನ್ನೈಗೆ ಸೇರಿದ ರಾಮ್ ಕುಮಾರ್ ಮತ್ತು ರಾಜಾ ಬಾಬು ನಡೆಸುತ್ತಿದ್ದರು. ಆ ಚಿತ್ರಮಂದಿರ ಕಾಲಾಂತರದಲ್ಲಿ ಬಾಗಿಲು ಹಾಕಿತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್​ಐ ಅನ್ನು ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ರಂಗಭೂಮಿ ನೌಕರರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದರು.  ಅದರನ್ವಯ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರಾಗಿದ್ದ ರಾಮ್ ಕುಮಾರ್ ಹಾಗೂ ರಾಜಾ ಬಾಬು ವಿರುದ್ಧ ಪ್ರಕರಣ ಹೂಡಿತ್ತು.

ದೂರವಾಗಿರೋ ಪತಿ ಮೇಲೆ ರಜನೀ ಪುತ್ರಿಗೆ ಮತ್ತೆ ಶುರುವಾಯ್ತಾ ಪ್ರೀತಿ? ಮತ್ತೆ ಒಂದಾಗತ್ತಾ ಜೋಡಿ?

Tap to resize

Latest Videos

ಈಗ ನಟಿಯ ಪರ ವಕೀಲರು ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಇದಾಗಲೇ ಜಯಪ್ರದಾ ಅವರು, 9 ಲಕ್ಷದ 80 ಸಾವಿರ ರೂಪಾಯಿ ಮೊತ್ತವನ್ನು ಇಎಸ್‌ಐಸಿಯಲ್ಲಿ ಠೇವಣಿ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಯನ್ನು ರದ್ದು ಮಾಡುವಂತೆ ಕೋರಿದ್ದರು. ಈ ಮನವಿಯನ್ನು ಸುಪ್ರೀಂಕೋರ್ಟ್​ ಮಾನ್ಯ ಮಾಡಿದ್ದು, ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿದೆ. ಇಲ್ಲಿಯವರೆಗೆ, ನಟಿ  ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ಕೋರ್ಟ್​ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು. ಇದರ ನಂತರ, ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಅವರರ ನೇತೃತ್ವದಲ್ಲಿ  ಜಯಪ್ರದಾ ಅವರನ್ನು ಪತ್ತೆಹಚ್ಚಲು   ವಿಶೇಷ ತಂಡವನ್ನು ರಚಿಸಿದ್ದರು ಅವರು ಸಿಕ್ಕಿರಲಿಲ್ಲ. 

ವಿಶೇಷ ಪೊಲೀಸ್‌ ತಂಡವು ದೆಹಲಿ ಮತ್ತು ಹೈದರಾಬಾದ್‌ನಲ್ಲಿರುವ ಮನೆಯಲ್ಲಿ ಜಯಾ ಅಡಗಿರಬಹುದೆಂದು ಶೋಧಿಸಿ ಮುಂಬೈಗೆ ತೆರಳಿ ನಟಿಯ ಮನೆ ಮೇಲೆ ದಾಳಿ ನಡೆಸಿತು, ಆದರೆ ಅಲ್ಲಿಯೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಒಂದು ವಾರದ ಹುಡುಕಾಟದ ನಂತರ ತಂಡವು ಬರಿಗೈಯಲ್ಲಿ ಮರಳಿತು.  ಜನವರಿ 10ರಂದು ಜಯಪ್ರದಾ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ರಾಂಪುರ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತ್ತು. ಆದರೆ, ನಟಿ ಪತ್ತೆಯಾಗದಿದ್ದಲ್ಲಿ ಹಿನ್ನೆಲೆಯಲ್ಲಿ ಅರೆಸ್ಟ್​ ಮಾಡುವಂತೆ ಆದೇಶಿಸಲಾಗಿತ್ತು. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಚಿತ್ರರಂಗವನ್ನು ತೊರೆದ ನಟಿ 1994 ರಲ್ಲಿ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಸೇರಿದರು.  

ಛೀ... ರಣವೀರ್​ ಸಿಂಗ್​ ಹೆಸ್ರು ಹೇಳಿ 'ಶಕ್ತಿಮಾನ್'​ ಹೆಸರಿಗೆ ಧಕ್ಕೆ ತರಬೇಡಿ, ಪಾತ್ರದ ಘನತೆ ತಗ್ಗಿಸಬೇಡಿ ಪ್ಲೀಸ್​...

click me!