ಪತ್ನಿ ಬಿಟ್ಟು ಒಂದು ದಿನವೂ ಇರಲ್ವಾ ? ಪ್ರಿಯಾಂಕಾ ಬಂದ ಮಾರನೇ ದಿನವೇ ಮುಂಬೈಗೆ ಬಂದಿಳಿದ ನಿಕ್ ಜೋನಾಸ್

Published : Mar 18, 2024, 08:26 PM ISTUpdated : Mar 18, 2024, 08:27 PM IST
ಪತ್ನಿ ಬಿಟ್ಟು ಒಂದು ದಿನವೂ ಇರಲ್ವಾ ? ಪ್ರಿಯಾಂಕಾ ಬಂದ ಮಾರನೇ ದಿನವೇ ಮುಂಬೈಗೆ ಬಂದಿಳಿದ ನಿಕ್ ಜೋನಾಸ್

ಸಾರಾಂಶ

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ, ಅವರ ಜೊತೆಗೆ ದಿನಗಳ ಹಿಂದೆಯೇ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿಳಿದಿದ್ದು, ಇದಾಗಿ ಒಂದು ದಿನದ ನಂತರ ಪತಿ ನಿಕ್ ಜೋನಾಸ್ ಕೂಡ ಮುಂಬೈಗೆ ಆಗಮಿಸಿದ್ದಾರೆ.

ನವದೆಹಲಿ: ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಮೇರಿ ಚೋಪ್ರಾ, ಅವರ ಜೊತೆಗೆ ದಿನಗಳ ಹಿಂದೆಯೇ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿಳಿದಿದ್ದು, ಇದಾಗಿ ಒಂದು ದಿನದ ನಂತರ ಪತಿ ನಿಕ್ ಜೋನಾಸ್ ಕೂಡ ಮುಂಬೈಗೆ ಆಗಮಿಸಿದ್ದಾರೆ. ಇಂದು ಮುಂಜಾನೆ ಅವರು ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದಿರುವ ವೀಡಿಯೋ ಪಾಪರಾಜಿ ಸೈಟ್‌ಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಾವ ಬಂದ ಜೀಜು ಬಂದ ಎಂದೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. 

ಅಮೆರಿಕನ್ ಗಾಯಕನಾಗಿರುವ ನಿಕ್ ಜೋನಾಸ್ ಅವರು 2018ರಲ್ಲಿ ನಿಕ್ ಜೋನಾಸ್ ಅವರನ್ನು ಮದ್ವೆಯಾಗಿದ್ದು ಈ ಜೋಡಿಗೆ ಮಾಲ್ತಿ ಮೇರಿ ಚೋಪ್ರಾ ಎಂಬ ಮಗಳಿದ್ದಾಳೆ. ಪ್ರಿಯಾಂಕಾ ಚೋಪ್ರಾ ಲಕ್ಸುರಿ ಬಲ್ಗರಿ ಬ್ರಾಂಡ್‌ನ  ಅಂಬಾಸಿಡರ್ ಆಗಿದ್ದು, ಮುಂಬೈನಲ್ಲಿ ಬಲ್ಗರಿ ಬ್ರಾಂಡ್‌ನ ಕಾರ್ಯಕ್ರಮವೊಂದಕ್ಕೆ ಅವರು, ಮಗಳು ಮಾಲ್ತಿ ಮೇರಿಯೊಂದಿಗೆ ಕೆಲ ದಿನಗಳ ಹಿಂದೆ ಆಗಮಿಸಿದ್ದರು. ಈ ವೇಳೆ ನೆಟ್ಟಿಗರು ಪ್ರಿಯಾಂಕಾ ಅವರನ್ನು ಸಖತ್ ಟ್ರೋಲ್ ಮಾಡಿದ್ದರು. ಏಕೆಂದರೆ ಕೆಲ ತಿಂಗಳ ಹಿಂದಷ್ಟೇ ನಟಿ ಹಾಗೂ ಪ್ರಿಯಾಂಕಾ ಸೋದರ ಸಂಬಂಧಿ ಆಗಿರುವ ಪರಿಣಿತಿ ಚೋಪ್ರಾ ಅವರು ಎಎಪಿ ಸಂಸದ ಹಾಗೂ ತಮ್ಮ ಬಹುಕಾಲದ ಗೆಳೆಯ ರಾಘವ್ ಚಡ್ಡಾ ಅವರನ್ನು ಅದ್ದೂರಿಯಾಗಿ ಗೋವಾದಲ್ಲಿ ಮದ್ವೆಯಾಗಿದ್ದರು.  ಈ ಸಮಯದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮದ್ವೆಗೆ ಬಂದಿರಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿ ಸುಮ್ಮನಾಗಿದ್ದರು. ಈ ಹಿನ್ನೆಲೆಯಲ್ಲಿ ನೆಟ್ಟಿಗರು ಪ್ರಿಯಾಂಕಾರನ್ನ ಟ್ರೋಲ್ ಮಾಡಿದ್ದರು.

ಸೋದರಿಯ ಮದ್ವೆಗೆ ಬರುವುದಕ್ಕೆ ಪ್ರಿಯಾಂಕಾ ಸಿದ್ಧರಿರಲಿಲ್ಲ, ಆದರೆ ಬ್ರಾಂಡ್ ಪ್ರಮೋಷನ್‌ಗೆ ಬರಲು ಇವರಿಗೆ ಸಮಯವಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಮತ್ತೆ ಕೆಲವರು ದುಡ್ಡಿಗಿರುವ ಬೆಲೆ ಸಂಬಂಧಕ್ಕೆ ಇಲ್ಲ ಎಂದೆಲ್ಲಾ ಟೀಕೆ ಮಾಡಿದ್ದರು. ಈಗ ನಿಕ್ ಜೋನಾಸ್ ಕೂಡ ಹೆಂಡ್ತಿ ಮಗುವಿನ ಜೊತೆ ಒಳ್ಳೆಯ ಸಮಯ ಕಳೆಯಲು ಭಾರತಕ್ಕೆ ಆಗಮಿಸಿದ್ದು, ಪಾಪರಾಜಿಗಳು ಶೇರ್ ಮಾಡಿರುವ ವೀಡಿಯೋಗೆ ನೆಟ್ಟಿಗರು ಸಖತ್ ಕಾಮೆಂಟ್ ಮಾಡ್ತಿದ್ದಾರೆ. 

ಪೋಷಕರಿಗೆ ಥ್ಯಾಂಕ್ಸ್ ಹೇಳಿದ ಪ್ರಿಯಾಂಕಾ ಚೋಪ್ರಾ ಭಾರತದ ಬಗ್ಗೆ ಹಾಗ್ಯಾಕೆ ಹೇಳಿದ್ರೋ ಏನೋ!

ಪ್ರಿಯಾಂಕಾ ಇನ್ಸ್ಟಾಗ್ರಾಮ್‌ಗೆ ಹಾಕಿರುವ ಫೋಟೋ ನೋಡಿದ ಬಾವ ನೆಕ್ಸ್ಟ್‌ ಪ್ಲೈಟ್‌ಗೆ ಭಾರತಕ್ಕೆ ಆಗಮಿಸಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ನಿಜವಾದ ವ್ಯಕ್ತಿ ಪ್ರಿಯಾಂಕಾ ಇಂತಹವನನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಪ್ರಿಯಾಂಕಾ ಇಂತಹ ಗಂಡನ ಪಡೆಯಲು ಪುಣ್ಯ ಮಾಡಿರಬೇಕು ಎಂದೆಲ್ಲಾ ಕೆಲವರು ಕಾಮೆಂಟ್ ಮಾಡಿದ್ದಾರೆ. 

ಇನ್ನು ಪ್ರಿಯಾಂಕಾ ಕೆಲಸದ ವಿಚಾರದ ಬಗ್ಗೆ ಹೇಳುವುದಾದರೆ ಡಿಸ್ನಿನೇಚರ್‌ಗಾಗಿ  ಡಾಕ್ಯುಮೆಂಟರಿ ಸಿನಿಮಾ ಟೈಗರ್‌ನಲ್ಲಿ ವಿವರಣೆಕಾರರ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಇದು ಭೂಮಿ ಮೇಲಿನ ಅತ್ಯಂತ ಗೌರವಾನ್ವಿತ ಮತ್ತು ವರ್ಚಸ್ಸಿನ ಪ್ರಾಣಿ ಮೇಲಿರುವ ಮುಸುಕನ್ನು ಸರಿಸುವ ಬಲವಾದ ಕಥೆ ಎಂದು ವಿವರಿಸಲಾಗಿದೆ ಮತ್ತು ಏಪ್ರಿಲ್ 22 ರ ವಿಶ್ವ ಭೂಮಿ ದಿನದಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ  ಇದರ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ. ಈ  ಸಾಕ್ಷ್ಯಚಿತ್ರವನ್ನು ಮಾರ್ಕ್ ಲಿನ್‌ಫೀಲ್ಡ್ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಿಂತಿರುವುದೇ ನಟಿಯ ಹಿಂದು-ಮುಂದಿನ ಸೈಜ್ ಮೇಲೆ ಎಂದ ಪ್ರಿಯಾಂಕಾ! ನೆಟ್ಟಿಗರು ಏನೆಂದ್ರು?

ಇದರ ಜೊತೆಗೆ ಪ್ರಿಯಾಂಕಾ ಅವರು ಹೆಡ್ಸ್‌ ಆಫ್ ಸ್ಟೇಟ್ಸ್‌ನಲ್ಲಿ ಜಾನ್ ಸೀನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ದಿ ಬ್ಲಫ್‌ನಲ್ಲಿ ನಟಿಸಲು ಸಿದ್ಧರಾಗಿದ್ದು, ಈ ಸಿನಿಮಾವನ್ನು ಪ್ರಾಂಕ್ ಇ ಫ್ಲವರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಕಾರ್ಲ್ ಅರ್ಬನ್ ಕೂಡ ನಟಿಸಲಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?