ನಟಿ ಸಾಯಿ ಪಲ್ಲವಿ 'ಪ್ರೇಮ' ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರವು ಸೂಪರ್ ಹಿಟ್ ಆಯ್ತು. ಬಳಿಕ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಸಾಯಿ ಪಲ್ಲವಿ ನಟಿಸಿದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್...
ನಟಿ ಸಾಯಿ ಪಲ್ಲವಿ ಎಕ್ಸೈಟ್ ಆಗಿ ಮಾತನಾಡಿದ್ದಾರೆ. ವೇದಿಕೆಯೊಂದರಲ್ಲಿ ಮಾತನಾಡುತ್ತಿದ್ದ ಸಾಯಿ ಪಲ್ಲವಿ 'ಅಮೀರ್ ಸರ್, ನಾನು ಇದನ್ನು ಖಂಡಿತವಾಗಿಯೂ ನನ್ನ ಕನಸು ನನಸಾಯ್ತು ಎನ್ನುವುದಿಲ್ಲ. ಏಕೆಂದರೆ ನಾನು ನಿಮ್ಮನ್ನು ಭೇಟಿಯಾಗುವ ಯಾವುದೇ ಕನಸನ್ನು ಕಂಡಿರಲಿಲ್ಲ. ಕನಸು ಕಾಣುವುದಿರಲಿ, ನಾನು ಇಮ್ಯಾಜಿನ್ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ನೀವು ಜಗತ್ತಿನ ಯಾವುದೋ ಭಾಗದಲ್ಲಿ ಇರುವವರು, ನಮಗೆಲ್ಲ ನಾಟ್ ರೀಚೆಬಲ್ ಆಗಿರುವವರು. ಆದರೆ ಇವತ್ತು ನಾನು ನಿಮ್ಮಿಂದ ಕೇವಲ ಎರಡು ಅಡಿ ಮಾತ್ರ ದೂರದಲ್ಲಿ ನಿಂತಿದ್ದೇನೆ. ನನ್ನಿಂದ ಇದನ್ನು ನಂಬುವುದಕ್ಕೂ ಸಾಧ್ಯವಾಗುವುದಿಲ್ಲ' ಎಂದಿದ್ದಾರೆ.
ನಟಿ ಸಾಯಿ ಪಲ್ಲವಿ ಮಲಯಾಳಂ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಬಳಿಕ ಅವರು ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ ಸಿನಿಮಾ ಆಯ್ಕೆಯ ವಿಷಯದಲ್ಲಿ ತುಂಬಾ ಚೂಸಿಯಾಗಿರುವ ನಟಿ ಸಾಯಿ ಪಲ್ಲವಿ, ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾಕ್ಕೆ ನಟಿ ಸಾಯಿ ಪಲ್ಲವಿ ನಾಯಕಿ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದನ್ನು ಟಾಕ್ಸಿಕ್ ಚಿತ್ರತಂಡ ಇನ್ನೂ ದೃಢೀಕರಿಸಿಲ್ಲ.
ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!
ನಟಿ ಸಾಯಿ ಪಲ್ಲವಿ 'ಪ್ರೇಮ' ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪ್ರೇಮಂ ಚಿತ್ರವು ಸೂಪರ್ ಹಿಟ್ ಆಯ್ತು. ಬಳಿಕ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಸಾಯಿ ಪಲ್ಲವಿ ನಟಿಸಿದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಅವರು ಸೌತ್ ಇಂಡಿಯಾದ ಸ್ಟಾರ್ ನಟಿಯಾಗಿ ಬೆಳೆದರು. ಬಳಿಕ ಕನ್ನಡ ಸಿನಿಮಾ 'ಗಾರ್ಗಿ'ಯಲ್ಲಿ ಸಹ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ನಟಿ ಮಾತ್ರವಲ್ಲ, ಒಳ್ಳೆಯ ಡಾನ್ಸರ್ ಕೂಡ.
ಒಬ್ಬರೇ ಶಾಪಿಂಗ್ ಹೋದಾಗ ನಟಿ ಪೂಜಾ ಹೆಗಡೆ ಅದೆಂಥ ತಪ್ಪು ಮಾಡ್ಬಿಟ್ರು ನೋಡ್ರಿ!
ಒಟ್ಟಿನಲ್ಲಿ, ನಟಿ ಸಾಯಿ ಪಲ್ಲವಿ ಕಾಣದ ಕನಸು, ಮನಸ್ಸಿನಲ್ಲಿ ಊಹಿಸಿಯೂ ಇಲ್ಲದ ಘಟನೆ ನನಸಾಗಿದೆ. ಅಂದರೆ, ನಟ ಅಮೀರ್ ಖಾನ್ ಅವರನ್ನು ತಾವು ಭೇಟಿಯಾಗಲು ಸಾಧ್ಯವೇ ಇಲ್ಲ ಅಂದುಕೊಂಡಿದ್ದ ನಟಿ ಸಾಯಿ ಪಲ್ಲವಿ ಭೇಟಿಯಾಗಿದ್ದಾರೆ. ಅಮೀರ್ ಅವರನ್ನು ಕೇವಲ ಎರಡೇ ಫೀಟ್ ಅಂತರದಲ್ಲಿ ನೋಡಿದ ಸಾಯಿ ಪಲ್ಲವಿ ಫುಲ್ ಎಕ್ಸೈಟ್ ಆಗಿದ್ದಾರೆ. ಅದನ್ನೇ ವೇದಿಕೆಯಲ್ಲಿ ಅಮೀರ್ ಮುಂದೆ ಹಂಚಿಕೊಂಡಾಗ ಸ್ವತಃ ಅಮೀರ್ ಖಾನ್ ಅಚ್ಚರಿಗೊಂಡಿದ್ದಾರೆ. ಸಾಯಿ ಪಲ್ಲವಿಯಂತೂ ಆಕಾಶದಲ್ಲಿ ತೇಲಾಡುತ್ತಿದ್ದರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಉತ್ತರದ ಅಂಗಳದಲ್ಲಿ ಕುಳಿತು 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಕೇಳಿ ಹೌಹಾರಿದೆ ಜಗತ್ತು!