ನಟಿ ಸನ್ನಿ ಲಿಯೋನ್ ಮೇಲೆ ಹಾವೊಂದು ಎರಗಿ ನಟಿ ಬೆಚ್ಚಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆಗಿದ್ದೇನು?
ಏಪ್ರಿಲ್ 1 ಎಂದರೆ, ಎಲ್ಲರೂ ಹುಬ್ಬೇರಿಸುತ್ತಾರೆ. ಇದಕ್ಕೆ ಕಾರಣ, ಇದು ಮೂರ್ಖರ ದಿನ. ಈ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಯಾಕೆ ಹುಟ್ಟಿದ್ದು ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳುತ್ತಾರೆ. ಇದರಲ್ಲಿ ಸ್ಪಷ್ಟತೆ ಏನೂ ಇಲ್ಲ. ಏಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂಬುದಾಗಿ ಇತಿಹಾಸಕಾರರು ಹೇಳುತ್ತಾರೆ. ಬಳಿಕ ಇದು ಯುರೋಪ್ ದೇಶಗಳಲ್ಲೂ ಆಚರಿಸಲು ಆರಂಭಿಸಿದರು ಎನ್ನಲಾಗುತ್ತದೆ. ಇತಿಹಾಸಕಾರರು ಇದು 1582ರ ಹಿಂದೆಯೇ ಶುರುವಾಗಿದ್ದು ಎನ್ನುತ್ತಾರೆ. ಮೊದಲು ಫ್ರಾನ್ಸ್‌ನಲ್ಲಿ ಆರಂಭವಾಗಿ ಬಳಿಕ ಯುರೋಪ್ ದೇಶಗಳಲ್ಲಿ ಆರಂಭವಾಯಿತು ಎನ್ನುತ್ತಾರೆ. ಫ್ರಾನ್ಸ್‌ನಲ್ಲಿ ಮೊದಲು ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವನ್ನು ಏಪ್ರಿಲ್ 1 ರಂದು ಆಚರಿಸಲಾಗುತ್ತದೆ. ವರ್ಷದ ಆರಂಭದ ದಿನ ಮೂರ್ಖರ ದಿನ ಮಾಡಲಾಗಿದೆ ಎನ್ನುತ್ತಾರೆ.
ಈ ದಿನ ಯಾಕೆ, ಹೇಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ದಿನ ಹಲವರು ಮೂರ್ಖರಾಗುವುದು ಗ್ಯಾರೆಂಟಿ. ಇನ್ನು ಕೆಲವರು ಮೂರ್ಖರನ್ನಾಗಿ ಮಾಡಲು ಹೋಗಿ ತಾವೇ ಮೂರ್ಖರಾಗುವುದೂ ಇದೆ. ಸೆಲೆಬ್ರಿಟಿಗಳೂ ಈ ದಿನವನ್ನು ವಿಶೇಷವಾಗಿಯೇ ಆಚರಿಸುತ್ತಾರೆ. ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಮೂರ್ಖರಾಗಿದ್ದಾರೆ. ಅವರು ಸುಮ್ಮನೇ ಕುಳಿತ ಸಂದರ್ಭದಲ್ಲಿ ರಬ್ಬರ್ ಹಾವೊಂದನ್ನು ಅವರ ಮೇಲೆ ಬಿಡಲಾಗಿದೆ. ಇದನ್ನು ನೋಡಿದ ನಟಿ, ಗಾಬರಿ ಬಿದ್ದು ಅಲ್ಲಿಂದ ಎದ್ದೆನೋ, ಬಿದ್ದೆನೋ ಎಂದು ಕಾಲ್ಕಿತ್ತಿದ್ದಾರೆ. ಇದರ ವಿಡಿಯೋ ಸಕತ್ ವೈರಲ್ ಆಗಿದೆ..
ಸೀತಾರಾಮ ಸೀರಿಯಲ್ ಸೀತೆಯ ನಿಜ ಜೀವನದ ಮೊದಲ ಕ್ರಶ್ ಯಾರು? ಪ್ರಿಯಾ ಎದುರು ಬಾಯ್ಬಿಟ್ಟ ಸತ್ಯವೇನು?
ಮುಕ್ಕಾಲು ಭಾರಿ ಹರಿದ ಜೀನ್ಸ್ ಬಟ್ಟೆ ಧರಿಸಿ ನಟಿ ಖುರ್ಚಿಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ಹಾವನ್ನು ನಿಧಾನಕ್ಕೆ ಅವರ ಬಳಿ ತರಲಾಗಿದೆ. ಇದರ ಸ್ಪರ್ಶ ಆಗುತ್ತಿದ್ದಂತೆಯೇ ನಟಿ ಏನು ಎಂದು ನೋಡಿದ್ದಾರೆ. ಹಾವು ಎಂದು ತಿಳಿದ ತಕ್ಷಣ ಗಾಬರಿಯಿಂದ ಎದ್ದು ಓಡಿ ಹೋಗಿದ್ದಾರೆ. ಇದು ನೋಡುಗರಿಗೆ ತಮಾಷೆಯಾಗಿ ಕಂಡಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಆದರೆ ಕೆಲವರು ಇದೇ ವೇಳೆ ಸಜೆಷನ್ ಕೂಡ ಮಾಡಿದ್ದಾರೆ. ಈ ರೀತಿಯ ಯಾವುದೇ ಜೋಕ್ ಮಾಡಲು ಹೋಗಬೇಡಿ. ಹೆಚ್ಚಿನ ಸಮಯದಲ್ಲಿ ಹೃದಯ ವೀಕ್ ಇದ್ದವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ. ಮೂರ್ಖರನ್ನಾಗಿ ಮಾಡಲು ಹೋಗಿ, ಪ್ರಾಣಕ್ಕೆ ಕುತ್ತು ತರಬೇಡಿ ಎನ್ನುತ್ತಿದ್ದಾರೆ.
ಇನ್ನು ಸನ್ನಿ ಅವರ ಕುರಿತು ಹೇಳುವುದಾದರೆ, ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಐಟಂ ಸಾಂಗ್‌ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಮಾಜಿ ನೀಲಿ ತಾರೆ ಈಕೆ. ಈಚೆಗಷ್ಟೇ, ಐಷಾರಾಮಿ ಹೋಟೆಲ್ ತೆರೆಯುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ನಟಿ ರೆಸ್ಟೋರೆಂಟ್ ತೆರೆದಿರುವುದು ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 129 ರಲ್ಲಿ. ಉತ್ತರ ಪ್ರದೇಶದ ಅಯೋಧ್ಯೆಗೆ ಭಾರಿ ಡಿಮಾಂಡ್ ಬರುತ್ತಲೇ ನಟಿ ಸನ್ನಿ ಲಿಯೋನ್ ಉತ್ತರ ಪ್ರದೇಶದಲ್ಲಿಯೇ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಅಯೋಧ್ಯೆಯಿಂದ ಇದು ಸುಮಾರು 700 ಕಿಲೋ ಮೀಟರ್ ದೂರವಿದೆ. ಇದರ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಚಿಕಲೋಕ ನೋಯ್ಡಾ ಎಂದು ರೆಸ್ಟೋರೆಂಟ್ಗೆ ನಾಮಕರಣ ಮಾಡಿರುವ ನಟಿ ಶೇರ್ ಮಾಡಿರುವ ಫೋಟೋಗಳಲ್ಲಿ ಭರ್ಜರಿ ಅಡುಗೆಗಳನ್ನು ಕಾಣಬಹುದು. ತಮ್ಮ ವೈಯಕ್ತಿಯ ಖಾತೆ ಮಾತ್ರವಲ್ಲದೇ ರೆಸ್ಟೋರೆಂಟ್ ಹೆಸರಿನಲ್ಲಿಯೇ Instagram ಖಾತೆಯನ್ನೂ ನಟಿ ಓಪನ್ ಮಾಡಿದ್ದಾರೆ. ಇದರಲ್ಲಿ ಭರ್ಜರಿ ಓಪನಿಂಗ್ ಸೆರಮನಿಯೂ ನಡೆದಿದ್ದು, ಇದರಲ್ಲಿ ಹಲವಾರು ತಾರೆಯರು ಭಾಗಿಯಾಗಿದ್ದರು. ಈ ರೆಸ್ಟೋರೆಂಟ್ನಲ್ಲಿ ಐಷಾರಾಮಿ ವಸ್ತುಗಳಿಗೇನೂ ಕೊರತೆ ಇಲ್ಲ. ಅಬ್ಬಬ್ಬಾ ಎನ್ನುವಷ್ಟರ ಮಟ್ಟಿಗೆ ಈ ರೆಸ್ಟೋರೆಂಟ್ ಇದೆ. ಭಾರತೀಯ, ಏಷ್ಯನ್, ಯುರೋಪಿಯನ್ ಮತ್ತು ಇಟಾಲಿಯನ್ ಪಾಕಪದ್ಧತಿಯನ್ನು ಸವಿಯಬಹುದು.
ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು... ಎಂದೋರು ಇವ್ರೇ ನೋಡಿ: ಮಹಾನಟಿಯಲ್ಲಿ ಡಬ್ಬಿಂಗ್ ಆರ್ಟಿಸ್ಟ್