ನನ್ನ ಅನಾರೋಗ್ಯದ ಕಾರಣಕ್ಕೆ ನಾನು ಶೂಟಿಂಗ್‌ನಲ್ಲಿ ಕೆಲಸ ಮಾಡಲು ಅಸಾಧ್ಯವಾದರೂ ನಾನು ಸುಮ್ಮನೇ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಅನಾರೋಗ್ಯದ ನೋವಿನ ನಡುವೆಯೂ ನಾನು ಎಲ್ಲಿಗಾದರೂ ಟೂರ್‌ಗೆ ಹೋಗುತ್ತೇನೆ.
ಖ್ಯಾತ ನಟಿ ಸಮಂತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ನಾನು ಪ್ರತಿದಿನವೂ ನನಗೆ ನಾನೇ ಸರ್ಪ್ರೈಸ್ ಕೊಟ್ಟುಕೊಳ್ಳಲು ಬಯಸುತ್ತೇನೆ. ಪ್ರತಿದಿನ ಒಂದೇ ರೀತಿ ಇದ್ದರೆ ಬೋರ್ ಆಗುತ್ತದೆ. ದಿನವೂ ನಾನು ಏನಾದರೂ ಹೊಸದೊಂದನ್ನು ಮಾಡಲು ಇಷ್ಟಪಡುತ್ತೇನೆ. ಆ ಮೂಲಕ ನನಗೆ ನಾನೇ ಹೊಸತನ ಕೊಟ್ಟುಕೊಳ್ಳುತ್ತೇನೆ. ನನಗೆ ಹೊಸತೇನಾದರೂ ಮಾಡದ ದಿನ ನಿಜವಾಗಿಯೂ ಲಾಸ್ ಎನಿಸುತ್ತದೆ.
ನಾನು ಯಾವತ್ತೂ ಕೆಲಸ ಮಾಡದೇ ಇರುವವಳಲ್ಲ. ನನಗೆ ಪ್ರತಿದಿನ ಏನಾದರೊಂದು ಕೆಲಸ ಬೇಕು. ನನ್ನ ಕೆಲಸ ಏನೆಂದು ಎಲ್ಲರಿಗೂ ಗೊತ್ತು. ನಟನೆಯನ್ನೇ ಜೀವನವೆಂದು ನಂಬಿರುವ ನಾನು ಶೂಟಿಂಗ್ ಇಲ್ಲದೇ ಒಂದು ದಿನ ಕೂಡ ಇರಲಾರೆ. ಆದರೆ, ಇತ್ತೀಚೆಗೆ ನನ್ನ ಆರೋಗ್ಯ ಏರುಪೇರಾಗಿರುವುದು ಗೊತ್ತೇ ಇದೆ. ಮೆಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿರುವ ನಾನು ಆ ಕಾರಣಕ್ಕೆ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ತುಂಬಾ ನೋವು, ಅಸೌಖ್ಯ ಅನುಭವಿಸುತ್ತಿರುವ ನಾನು, ಅದರಿಂದ ಸಿನಿಮಾ ನಟನೆ ಮಾಡಲು ಸಾಧ್ಯವಾಗದೇ ಬಳಲುತ್ತಿದ್ದೇನೆ.
ಎಲೆಕ್ಷನ್ ರಿಸಲ್ಟ್‌ಗೂ ಮೊದ್ಲೇ ರಿಷಿ ಸಿನಿಮಾ ಫಲಿತಾಂಶ; 'ರಾಮನ ಅವತಾರ' ಎಂಟ್ರಿಗೆ ಡೇಟ್ ಫಿಕ್ಸ್!
ನನ್ನ ಅನಾರೋಗ್ಯದ ಕಾರಣಕ್ಕೆ ನಾನು ಶೂಟಿಂಗ್‌ನಲ್ಲಿ ಕೆಲಸ ಮಾಡಲು ಅಸಾಧ್ಯವಾದರೂ ನಾನು ಸುಮ್ಮನೇ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಅನಾರೋಗ್ಯದ ನೋವಿನ ನಡುವೆಯೂ ನಾನು ಎಲ್ಲಿಗಾದರೂ ಟೂರ್‌ಗೆ ಹೋಗುತ್ತೇನೆ. ಹೊಸ ಹೊಸ ಜಾಗಗಳನ್ನು ನೋಡುತ್ತೇನೆ, ಹೊಸ ಹೊಸ ಜನರನ್ನು ಭೇಟಿಯಾಗಿ ಅವರೊಂದಿಗೆ ಬೆರೆತು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತೇನೆ. ನನಗೆ ಯಾರೇ ಆದರೂ ಒಳ್ಳೆಯದನ್ನು ಬಯಸಿದರೆ ನಾನು ಅವರಿಗೆ ಕ್ರತಜ್ಞತೆ ಅರ್ಪಿಸುತ್ತೇನೆ. ನನ್ನಿಂದಾದ ಸಹಾಯವನ್ನೂ ಮಾಡುತ್ತೇನೆ.
ನಟ ದರ್ಶನ್ ಪುತ್ರ ವಿನೀಶ್ ಕುದುರೆ ಸವಾರಿ ವೀಡಿಯೋ ವೈರಲ್; ಸಿನಿಮಾ ಎಂಟ್ರಿಗೆ ಸಜ್ಜಾದ್ರಾ ಸ್ಟಾರ್ ಕಿಡ್?
ನಮ್ಮ ಜೀವನ ತುಂಬಾ ಚಿಕ್ಕದು. ನಮಗೆ ನಮ್ಮ ಕೆಲಸ, ಅನಾರೋಗ್ಯದ ಮಧ್ಯೆ ಸಾಕಷ್ಟು ಬಿಡುವಿನ ವೇಳೆ ದೊರಕುವುದಿಲ್ಲ. ಆದರೆ ಈಗ ನನಗೆ ಅನಾರೋಗ್ಯದ ಕಾರಣಕ್ಕೆ ಬಹಳಷ್ಟು ಬಿಡುವು ದೊರಕಿದೆ. ಈಗ ನನಗೆ ಕೆಲಸ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಜೀವನ ಕೆಲವೊಮ್ಮೆ ಎಂಥ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ ಎಂದರೆ, ನಾವೇನನ್ನು ಇಷ್ಟಪಡುತ್ತೇವೆಯೋ ಅದನ್ನೆ ನಮಗೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಜೀವನದಲ್ಲಿ ನಾನು ಕೆಲಸ ಮಾಡಲಿಕ್ಕೇ ಸಾಧ್ಯವಾಗದ ದಿನಗಳು ಬರುತ್ತವೆ ಎಂದು ನಾನು ಎಂದೂ ಅಂದುಕೊಂಡಿರಲಿಲ್ಲ' ಎಂದು ತುಂಬಾ ನೋವಿನಿಂದ ನುಡಿದಿದ್ದಾರೆ ನಟಿ ಸಮಂತಾ.
ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ದುಬೈ ಬಾತ್‌ಟಬ್‌ನಲ್ಲೇ ಬೋರಲಾಗಿ ಬಿದ್ದಿದ್ದು ಯಾಕೆ?