ಈ ಬಾಲಿವುಡ್‌ ನಟಿಯರ ಬೋಲ್ಡ್‌ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!

By Suvarna News  |  First Published Feb 16, 2023, 2:32 PM IST

ಅಂಗಾಂಗ ಪ್ರದರ್ಶನಗಳು ಮಿತಿ ಮೀರಿದಾಗ ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗೆ ಒಳಗಾಗುವುದು ಹೊಸ ವಿಷಯವೇನಲ್ಲ. ಇಂಥ ಕೆಲವು ಖ್ಯಾತನಾಮ ನಟಿಯರ ಬಗ್ಗೆ ಇಲ್ಲಿ ಪರಿಚಯಿಸಲಾಗಿದೆ. 
 


ಬಾಲಿವುಡ್ ನಟಿಯರು ಇಂದು ಬಹುತೇಕ ಬೆತ್ತಲಾಗುವುದು ಹೊಸ ವಿಷಯವೇನಲ್ಲ. ಅಂಗಾಂಗ ಪ್ರದರ್ಶನ ಅತಿ ಹೆಚ್ಚು ಮಾಡಿದರಷ್ಟೇ ಚಿತ್ರಗಳು ಹಿಟ್‌ ಆಗುತ್ತವೆ ಎಂಬ ಮನೋಭಾವ ಒಂದೆಡೆಯಾದರೆ, ಅತಿ ಎನಿಸುವಷ್ಟು ಬೋಲ್ಡ್‌ ಸೀನ್‌ಗಳಲ್ಲಿ ಕಾಣಿಸಿಕೊಂಡರೆ ವರ್ಚಸ್ಸು ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಹಲವು ನಟಿಯರು ಇಂಥ ಸೀನ್‌ಗಳಲ್ಲಿ ನಟಿಸಲು  ಹೇಸುವುದಿಲ್ಲ. ಆದರೆ ಒಂದು ಹಂತವನ್ನು ಮೀರಿದರೆ, ಆ ನಟಿಯರ ಅಭಿಮಾನಿಗಳು ಕಣ್ಣು-ಬಾಯಿ ಬಿಟ್ಟುಕೊಂಡು ತಮ್ಮ ಇಷ್ಟದ ನಟಿಯರ ಸೌಂದರ್‍ಯ ಸವಿಯುವುದು ಒಂದೆಡೆಯಾದರೆ, ಅಸಹ್ಯ ಎನಿಸುವ ಉಡುಗೆಯಿಂದಾಗಿ ಹಲವು ನಟಿಯರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ (Troll)ಒಳಗಾಗುತ್ತಿದ್ದಾರೆ. ಕೆಲವೊಂದು ಚಿತ್ರಕ್ಕೆ ನಿಷೇಧ ಹೇರಬೇಕು ಎನ್ನುವಷ್ಟರ ಮಟ್ಟಿಗೂ ನಟಿಯರ ವೇಷ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದದ್ದೂ ಇದೆ. ಟ್ರೋಲ್‌ ಆದಷ್ಟೂ ಫೇಮಸ್‌ ಆಗುತ್ತೇವೆ ಎನ್ನುವ ಮನಸ್ಥಿತಿಯಲ್ಲಿ ಬಹುತೇಕ ಎಲ್ಲರೂ ಇರುವ ಈ ಹೊತ್ತಿನಲ್ಲಿ ಹೀಗೆ ಅತಿ ಹೆಚ್ಚು ಟ್ರೋಲ್‌ ಆದ ನಟಿಯರು ಯಾರು? ಯಾವ ಚಿತ್ರದ ದೃಶ್ಯಕ್ಕಾಗಿ ಅವರು ಟ್ರೋಲ್‌ಗೆ ಒಳಗಾಗಿದ್ದರು ಎಂಬ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇವೆ. 

ಕರೀನಾ ಕಪೂರ್ (Kareena Kapoor), ಬಿದಿತಾ ಬಾಗ್  
ಕರೀನಾ ಕಪೂರ್ ಅಭಿನಯದ 'ಕುರ್ಬಾನ್' ಚಿತ್ರದ ಪೋಸ್ಟರ್ ಹೊರಬಂದಾಗ, ಅದರ ಬಗ್ಗೆ ವಿವಾದ ಪ್ರಾರಂಭವಾಯಿತು. ಈ ಚಿತ್ರಕ್ಕೆ ನಿಷೇಧ ಹೇರಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಚಿತ್ರದ ಈ ಪೋಸ್ಟರ್‌ನಲ್ಲಿ, ನಟಿ ಸೈಫ್ ಅಲಿ ಖಾನ್ ಅವರೊಂದಿಗೆ ಬೋಲ್ಡ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಬಿದಿತಾ ಬಾಗ್ (Biditha Bhag) ಬಗ್ಗೆ ಹೆಚ್ಚು ಮಾತನಾಡದಿರಬಹುದು, ಆದರೆ ಅವರ ಚಿತ್ರ ಬಾಬುಮೋಶಾಯ್ ಬಂದೂಕ್ಬಾಜ್ ಬಿಡುಗಡೆಯಾದಾಗ, ಅವರು ಎಲ್ಲೆಡೆ ಪ್ರಸಿದ್ಧರಾದರು. ಈ ಚಿತ್ರದಲ್ಲಿ, ನಟಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಅನೇಕ ಬೋಲ್ಡ್ ದೃಶ್ಯಗಳನ್ನು ನೀಡಿದರು, ಇದರಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. 

Tap to resize

Latest Videos

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

ರಾಧಿಕಾ ಆಪ್ಟೆ (Radhika Apte), ಆಹಾನಾ ಕುಮ್ರಾ 
ನಟಿ ರಾಧಿಕಾ ಆಪ್ಟೆ ಬಾಲಿವುಡ್‌ನಿಂದ OTT ಜಗತ್ತಿಗೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಆದರೆ ನಟಿಯ 'ಪರ್ಚ್ಡ್' ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಈ ಚಿತ್ರದಲ್ಲಿ ನಟಿ ಹಲವು ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ' ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಆಹಾನಾ ಕುಮ್ರಾ (Ahana Kumra) ಕೂಡ ಬೋಲ್ಡ್ ದೃಶ್ಯಗಳನ್ನು ನೀಡಿ ಟ್ರೋಲ್ ಆಗಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.

ಸ್ವರಾ ಭಾಸ್ಕರ್ (swara Bhaskar), ಸನ್ನಿ ಲಿಯೋನ್ 
ತಮ್ಮ ಹೇಳಿಕೆಗಳ ಬಗ್ಗೆ ಚರ್ಚೆಯಲ್ಲಿರುವ ನಟಿ ಸ್ವರಾ ಭಾಸ್ಕರ್ 'ಅನಾರ್ಕಲಿ ಆಫ್ ಆರಾ' ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಇದರಿಂದಾಗಿ ಆಕೆ ಸಾಕಷ್ಟು ಟ್ರೋಲ್‌ಗೂ ಒಳಗಾಗಿದ್ದಳು. ಸನ್ನಿ ಲಿಯೋನ್‌ (Sunny Leone) ಎಂದಾಕ್ಷಣ ಕಣ್ಣುಮುಂದೆ ಬರುವುದೇ ಬೋಲ್ಡ್‌ ವೇಷಭೂಷಣ. ಬಾಲಿವುಡ್ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿರುವ ನಟಿ ಸನ್ನಿ ಲಿಯೋನ್, 'ಜಿಸ್ಮ್ 2' ಚಿತ್ರದಲ್ಲಿ ನೀಡಲಾದ ಇಂಟಿಮೇಟ್ ದೃಶ್ಯಕ್ಕಾಗಿ ಸಾಕಷ್ಟು ಟ್ರೋಲ್ ಆಗಿದ್ದರು.

ಸನಾ ಖಾನ್, ತನುಶ್ರೀ ದತ್ತಾ, ಮಲ್ಲಿಕಾ ಶೆರಾವತ್ (Sana Khan, Tanushree Datta)
'ವಜಾ ತುಮ್ ಹೋ' ಚಿತ್ರದಲ್ಲಿ ನೀಡಿದ ಚುಂಬನದ ದೃಶ್ಯಗಳಿಗಾಗಿ ಸನಾ ಖಾನ್ ಸಾಕಷ್ಟು ಟ್ರೋಲ್ ಆಗಿದ್ದರು. ಸನಾ ಖಾನ್ ಅವರ ಈ ಚಿತ್ರ 2016 ರಲ್ಲಿ ಬಿಡುಗಡೆಯಾಯಿತು. ತನುಶ್ರೀ ದತ್ತಾ ಈಗ ಚಿತ್ರರಂಗದಿಂದ ದೂರ ಹೋಗಿರಬಹುದು, ಆದರೆ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಭಾವ ಬೀರಿದ್ದರು. ಆದರೆ ಆಕೆಯ ಚೊಚ್ಚಲ ಚಿತ್ರ 'ಆಶಿಕ್ ಬನಾಯಾ ಆಪ್ನೆ'ಯಲ್ಲಿ ನೀಡಿದ ಬೋಲ್ಡ್ ದೃಶ್ಯಗಳಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಈ ಚಿತ್ರವು 2005 ರಲ್ಲಿ ಬಿಡುಗಡೆಯಾಯಿತು. ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ (Mallika Sharawath) ತಮ್ಮ 'ಮರ್ಡರ್' ಚಿತ್ರದ ಬಗ್ಗೆ ವಿವಾದಗಳಿಗೆ ಸಿಲುಕಿದ್ದಾರೆ. ಈ ಚಿತ್ರದಲ್ಲಿ ನಟಿ ಎರ್ಮಾನ್ ಹಶ್ಮಿ ಜೊತೆ ಇಂಟಿಮೇಟ್ ದೃಶ್ಯಗಳನ್ನು ನೀಡಿದ್ದಾರೆ. ಈ ಚಿತ್ರವು 2004 ರಲ್ಲಿ ಬಿಡುಗಡೆಯಾಯಿತು.

Valentines day spl: ಗಾಳಿಸುದ್ದಿಗೆ ಬ್ರೇಕ್​- ಬಾಯ್​ಫ್ರೆಂಡ್​ ಜೊತೆ ಶ್ರುತಿ ಹಾಸನ್​ ಫೋಟೋ ಕ್ಲಿಕ್​​

click me!