ಸನ್ನಿ ಲಿಯೋನ್ ದುಬೈ ವೆಕೇಶನ್ ವಿಡಿಯೋ ಒಂದು ವೈರಲ್ ಆಗಿದೆ. ಡ್ರೆಸ್ ಕಳಚಿಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ ಸನ್ನಿ, ಕೆಲ ಹೊತ್ತು ಈಜಾಟವಾಡಿದ್ದಾರೆ.
ದುಬೈ(ಮೇ.19) ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಸದ್ಯ ದುಬೈನಲ್ಲಿದ್ದಾರೆ. ದುಬೈ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿಸಲ ಬೇಗೆಗೆ ತಂಪರೆಯುತ್ತಿದ್ದಾರೆ. ದುಬೈನಲ್ಲಿ ಕಾಲ ಕಳೆಯುತ್ತಿರುವ ಸನ್ನಿ ಲಿಯೋನ್, ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರಮುಖವಾಗಿ ದುಬೈ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಿರುವ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಡ್ರೆಸ್ ಕಳಚಿಟ್ಟು ಈಜುಕೊಳಕ್ಕೆ ಹಾರಿದ ಸನ್ನಿ ಲಿಯೋನ್, ನೀರಾಟ ಆಡಿದ್ದಾರೆ.
ದುಬೈ ಬೀಚ್ ಹಾಗೂ ಸ್ವಿಮ್ಮಿಂಗ್ ಪೂಲ್ ಕುರಿತ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೊದಲ ವಿಡಿಯೋದಲ್ಲಿ ಸನ್ನಿ ಲಿಯೋನ್,ಡ್ರೆಸ್ ಕಳಚಿಟ್ಟು, ಬೀಚ್ ವಿಶ್ರಾಂತಿ ಸ್ಥಳದಿಂದ ಈಜುಕೊಳದತ್ತ ನಡೆದುಕೊಂಡು ಬಂದರೆ, ಮತ್ತೊಂದು ವಿಡಿಯೋದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಿರುವ ದೃಶ್ಯವಿದೆ.
ಸಹೋದರ ನಗ್ನ ಫೋಟೋ ಮಾರಾಟ ವಿಚಾರ ಹೇಳಿದರೂ ಕುಗ್ಗದೆ, ರೆಡ್‌ಗೌನ್‌ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್
ಇತ್ತೀಚೆಗೆಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಸನ್ನಿ ಲಿಯೋನ್, ಪತಿ ಡೇನಿಯಲ್ ಕುರಿತು ಮನಬಿಚ್ಚಿ ಮಾತನಾಡಿದ್ದರು. ಪತಿಯಾಗಿ ಡೇನಿಯಲ್ ಅತ್ಯಂತ ಆಪ್ತವಾಗಿ, ಹಿತವಾಗಿ, ಪ್ರೀತಿಯಾಗಿ ನೋಡಿಕೊಂಡಿದ್ದಾರೆ ಎಂದಿದ್ದರು. ಇದೇ ವೇಳೆ ಪ್ರತಿ ಹುಟ್ಟು ಹಬ್ಬಕ್ಕೂ ಡೇನಿಯಲ್ ವಿಶೇಷ ಗಿಫ್ಟ್ ನೀಡುತ್ತಿದ್ದರು. ಈ ಬಾರಿ ಇನ್ನೂ ಕೊಟ್ಟಿಲ್ಲ ಎಂದು ದೂರು ಹೇಳಿಕೊಂಡಿದ್ದರು. ಮಕ್ಕಳು, ಮನೆ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ಡೇನಿಯಲ್ ನಿರ್ವಹಿಸುತ್ತಿದ್ದಾರೆ ಎಂದಿದ್ದರು.
ಇದೇ ವೇಳೆ ಸನ್ನಿ ಲಿಯೋನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆರಂಭಿಕ ದಿನದಲ್ಲಿ ಆರ್ಥಿಕ ಸಂಕಷ್ಟದಿಂದ ಪರದಾಡಿ ಬದುಕು ಕಟ್ಟಿಕೊಂಡ ರೀತಿಯನ್ನೂ ವವಿರಿಸಿದ್ದರು. ಸನ್ನಿ ಲಿಯೋನ್ ತಮ್ಮ ನನ್ನ ನಗ್ನ ಫೋಟೋಗಳನ್ನು ಮಾರಾಟ ಮಾಡುತ್ತಿದ್ದ. ಹಣಕ್ಕಾಗಿ ಆತ ಮಾರಾಟ ಮಾಡುತ್ತಿದ್ದ ಎಂದು ಸನ್ನಿ ಕರಾಳ ದಿನಗಳನ್ನು ನೆನೆಪಿಸಿಕೊಂಡಿದ್ದರು.
2016ರಲ್ಲಿ ಸನ್ನಿ ಲಿಯೋನ್ ಕೆನಾಡದ ಸಾಕ್ಷ್ಯ ಚಿತ್ರಕ್ಕಾಗಿ ನಗ್ನರಾಗಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಪೋಸ್ಟ್ ಮಾಡಿಸಿದ್ದ ಸನ್ನಿ ಸಹೋದರ ಸಂದೀಪ್ ವೋಹ್ರಾ ಹಣಕ್ಕಾಗಿ ಕಾಲೇಜು ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ. ಈ ಪೋಸ್ಟ್‌ನಲ್ಲಿ ಸಹಿ ಹಾಕಿ ಮಾರಾಟ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ, ಆತ ನನ್ನ ನಗ್ನ ಫೋಟೋ ಮಾರಾಟ ಮಾಡುತ್ತಿದ್ದಾನೆ ಎಂದು ಗೊತ್ತಿತ್ತು ಎಂದು ಸನ್ನಿ ಹೇಳಿದ್ದರು.
ಬಾಲಿವುಡ್‌ನ ಈ ಟಾಪ್ ನಟಿಗೆ ಭಾರತದ ಚುನಾವಣೆಯಲ್ಲಿ ಮತದಾನ ಮಾಡೋ ಹಕ್ಕಿಲ್ಲ!
ಮದುವೆ ಇನ್ನೇನು 2 ತಿಂಗಳಿದೆ ಅನ್ನುವಷ್ಟರಲ್ಲೇ ಬಾಯ್‌ಫ್ರೆಂಡ್ ಕೈಕೊಟ್ಟಿದ್ದ. ಮಾನಸಿಕ ಆಘಾತ, ಆರ್ಥಿಕ ಸಂಕಷ್ಟ ಸೇರಿದಂತೆ ಎಲ್ಲಾ ಕಷ್ಟಗಳನ್ನು ಎದುರಿಸಿರುವುದಾಗಿ ಸನ್ನಿ ಲಿಯೋನ್ ಹೇಳಿದ್ದಾರೆ. ಇದೀಗ ದುಬೈ ವೆಕೇಶನ್ನಲ್ಲಿ ಸನ್ನಿ ಲಿಯೋನ್ ಮತ್ತಷ್ಟು ವಿಡಿಯೋ ಪೋಸ್ಟ್ ಮಾಡಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.