ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ಸಾರಾ ಅಲಿ ಖಾನ್? ಸೈಫ್ ಪುತ್ರಿಯ ಕೈಹಿಡೀತೀರೋದ್ಯಾರು?
ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಪುತ್ರಿಯಾಗಿರುವ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸದ್ಯ ಸಕತ್ ಸುದ್ದಿ ಮಾಡುತ್ತಿರುವುದು ಹಿಂದೂ ಧರ್ಮದ ಪಾಲನೆ ಮಾಡುತ್ತಿರುವ ಕಾರಣದಿಂದ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ಕೊಟ್ಟು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವುದೂ ಇದೆ. ಕೇದಾರನಾಥ, ಅಮರನಾಥ ಯಾತ್ರೆ ಮಾಡಿ ಬಂದಿದ್ದಾರೆ. ಶಿವಧ್ಯಾನದಲ್ಲಿಯೂ ತೊಡಗಿಸಿಕೊಂಡು ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾಗ ಕೆಲವರು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ಇದೀಗ ನಟಿ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ.
ಸಾರಾ ಅಲಿ ಖ್ಯಾತ ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಇವರ ಬಗ್ಗೆ ಹೆಚ್ಚು ಮಾಹಿತಿ ಹೊರಬಂದಿಲ್ಲ. ಆದರೆ ಸಾರಾ ಅವರು, ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ವೀರ್ ಪಹಾರಿಯಾ ಜೊತೆ ಡೇಟಿಂಗ್ನಲ್ಲಿ ಇದ್ದಾರೆ ಎಂದೇ ಹೇಳಲಾಗುತ್ತಿದೆ. ಕರಣ್ ಜೋಹರ್ ಅವರ ಷೋನಲ್ಲಿ ಕೂಡ ಈ ವಿಷಯವನ್ನು ಕರಣ್ ಪ್ರಸ್ತಾಪಿಸಿದ್ದರು. ಇನ್ನೋರ್ವ ಪುತ್ರ ಶಿಖರ್ ಜೊತೆ ಜಾಹ್ನವಿ ಕಪೂರ್ ಡೇಟಿಂಗ್ನಲ್ಲಿ ಇರುವ ವಿಷಯವೇನೂ ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಸಾರಾ ವಿಷಯ ಮಾತ್ರ ಅಷ್ಟು ಪ್ರಚಲಿತವಾಗಲಿಲ್ಲ. ಆದ್ದರಿಂದ ಇವರನ್ನೇ ನಟಿ ವರಿಸಿದ್ದಾರಾ ಎನ್ನುವ ಸಂದೇಹ ಕಾಡತೊಡಗಿದೆ. ಅದಕ್ಕೂ ಮುನ್ನ ಸಾರಾ ಅಲಿ ಖಾನ್, ಕ್ರಿಕೆಟಿಗ ಶುಭ್ಮನ್ ಗಿಲ್ ಜೊತೆ ನಟಿ ಸಾರಾ ಅಲಿ ಖಾನ್ ಸಂಬಂಧದಲ್ಲಿದ್ದರು. ನಂತರ ಅದು ಬ್ರೇಕಪ್ ಆಗಿತ್ತು. ಅಸಲಿ ವಿಷಯ ಇನ್ನಷ್ಟೇ ಹೊರಬಯಬೇಕಿದೆ.
ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್ ನಟ ಹೇಳಿದ್ದೇನು?
ಅಂದಹಾಗೆ ಸಾರಾ ಅವರು ಸಿಂಪಲ್ ಎಂದೇ ಖ್ಯಾತಿ ಪಡೆದವರು. ಸೋಲಿನ ಹಾದಿಯಲ್ಲಿದ್ದ ಸಾರಾ ಅಲಿ, ಇತ್ತೀಚೆಗೆ ಬಿಡುಗಡೆಗೊಂಡ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಸುಧಾರಿಸಿಕೊಂಡಿದ್ದಾರೆ. ಹೀಗಿದ್ದರೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಈಕೆ ಫೋಟೋ ಮತ್ತು ಒಂದಿಷ್ಟು ಗಾಸಿಪ್ಗಳಿಂದ ಎಷ್ಟೇ ಟ್ರೋಲ್ ಆಗುತ್ತಿದ್ದರೂ ಈಕೆಯನ್ನು ಪ್ರೀತಿಸುವ ಒಂದು ವರ್ಗವೂ ಇದೆ. ಹೆಚ್ಚಿನವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಳೆದ ವಾರ ಈಕೆ ಬೀಚ್ (Beach) ಒಂದರಿಂದ ಆಟೋದಲ್ಲಿ ಹೋದ ಸಂದರ್ಭದಲ್ಲಿಯೂ ಹಲವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೆ. ಅದಾದ ಬಳಿಕ ವೈರಲ್ ಆಗಿದ್ದ ವಿಡಿಯೋದಲ್ಲಿ ನಟಿ, ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿತ್ತು. ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದರು. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದರು. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದರು.
ಇನ್ನು ಸಾರಾ ಅಲಿ ಖಾನ್ ಅವರನ್ನು ಹಿಂದೂ ಧರ್ಮಕ್ಕೆ ಬಂದುಬಿಡಿ ಎನ್ನುವ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹಿಂದೂ ಧರ್ಮ ಪಾಲನೆ ಮಾಡುತ್ತಿರುವ ನಟಿಯ ವಿರುದ್ಧ ಕಿಡಿ ಕಾರುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದ ಸಾರಾ ಫ್ಯಾನ್ಸ್, ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ.
ವಿರಾಟ್-ಅನುಷ್ಕಾ ತಮ್ ಫೋನ್ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್ ಮಾಡಿಕೊಂಡಿದ್ದಾರಂತೆ!