ಸನ್ನಿ ಲಿಯೋನ್ ಮನೆಗೆ ಬಂತು ಲಕ್ಷುರಿ Maserati ಕಾರ್..!

Suvarna News   | Asianet News
Published : Sep 10, 2020, 11:13 AM ISTUpdated : Sep 10, 2020, 11:35 AM IST
ಸನ್ನಿ ಲಿಯೋನ್ ಮನೆಗೆ ಬಂತು ಲಕ್ಷುರಿ Maserati ಕಾರ್..!

ಸಾರಾಂಶ

ಬ್ಯೂಟಿಫುಲ್ ಸನ್ನಿ ಲಿಯೋನ್ ಮನೆಗೆ ಹೊಸ ಅತಿಥಿ ಬಂದಿದೆ. ಲಕ್ಷುರಿ ಕಾರ್ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ ನಟಿ.

ನಟಿ ಸನ್ನಿ ಲಿಯೋನ್ ಪತಿ ಡಾನಿಯಲ್ ವೇಬರ್ ಲಕ್ಷುರಿ ಬ್ರ್ಯಾಂಡ್‌ನ ಕಾರ್ ಖರೀದಿಸಿದ್ದಾರೆ. ಅದೂ ವೈಟ್ ಕಲರ್. ವೈಟ್‌ ಕಲರ್ ಕಾರ್ ಮುಂದೆ ವೈಟ್ ಕಲರ್ ಡ್ರೆಸ್ ಹಾಕಿ ಪೋಸ್ ಕೊಟ್ಟಿದ್ದಾರೆ ಸನ್ನಿ.

ಮಂಗಳವಾರ ಸನ್ನಿಲಿಯೋನ್ ಲಕ್ಷುರಿ ಕಾರ್ ಮನೆಗೆ ತಂದಿದ್ದಾರೆ. ಬುಧವಾರ ಹೊಸ ಕಾರಿನಲ್ಲಿ ಡ್ರೈವ್ ಹೋದ ನಟಿ ಅದರ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಿಕಿನಿ ಬದಲು ಸಾಂಪ್ರದಾಯಿಕ ಉಡುಗೇಲಿ ಸನ್ನಿ #StunningLook

ಕಾರ್ ಶೋರೂಂನಲ್ಲಿಯೇ ಇದ್ದ ತಮ್ಮ ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದರು.  ನಂತರ ಪತಿ ಜೊತೆ ಕಾರಿನೊಳಗೆ ಕುಳಿತು ಫೋಟೋ ಪೋಸ್ಟ್ ಮಾಡಿದ್ದರು. ಹೊಸ Maserati ಕಾರ್‌ಗೆ ಸನ್ನಿ ಒಡತಿಯಾಗಿದ್ದಾರೆ.

ಕೊನೆಗೆ ಕಾರಿನ ಜೊತೆಗಿನ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ Maserati Ghibli ಮುಂದೆ ನಿಂತು ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ ನಟಿ. ನಿನ್ನೆಯಷ್ಟೇ ಇದನ್ನು ಮನೆಗೆ ತಂದೆವು. ಇದನ್ನು ಡ್ರೈವ್ ಮಾಡೋವಾಗೆಲ್ಲ ಖುಷಿಯಾಗುತ್ತೆ ಎಂದು ಬರೆದಿದ್ದಾರೆ.

ಸನ್ನಿಯ ಸ್ನೇಹಿತರು ಫ್ಯಾನ್ಸ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಸನ್ನಿ ಲಿಯೋನ್ ಪತಿ ಹಾಗೂ ಮೂವರು ಮಕ್ಕಳ ಜೊತೆ ಅಮೆರಿಕದಲ್ಲಿದ್ದಾರೆ. ಭಾರತದಲ್ಲಿ ಲಾಕ್‌ಡೌನ್ ಮುಗಿದ ನಂತರ ಫ್ಯಾಮಿಲಿ ಜೊತೆ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾಗೆ ಹೋಗಿದ್ದರು.

Maserati Ghibli ಕಾರ್ ಬಗ್ಗೆ:

Maserati ಲಕ್ಷುರಿ ವಾಹನಗಳ ಕಂಪನಿ. Maserati Ghibli 5 ಜನ ಕೂರಬಲ್ಲ ಲಕ್ಷುರಿ ಕಾರ್ ಆಗಿದ್ದು, ಭಾರತದಲ್ಲಿ ಇದರ ಬೆಲೆ 1.35 ಕೋಟಿಯಿಂದ 1.52 ಕೋಟಿ ರೂಪಾಯಿ ತನಕ ಇದೆ.

ಇದು 6 ವಿಧ ಮತ್ತು 6 ಬಣ್ಣದಲ್ಲಿ ಲಭ್ಯವಿದೆ. ಇದರಲ್ಲಿ BS6 ಪೆಟ್ರೋಲ್ ಮತ್ತು ಡಿಸೇಲ್ ಆಪ್ಶನ್ ಇದೆ. ಈ ಕಾರಿಗೆ 16.94 - 16.94  ಮೈಲೇಜ್ ಇದೆ. ಗಂಟೆಗೆ  ಗರಿಷ್ಠ 267 ಕಿಲೋ ಮೀಟರ್ ವೇಗದಲ್ಲಿ ಸಾಗಬಲ್ಲದು.

ನಿರ್ದೇಶಕ ವೆಂಕಿ ಬರ್ತ್‌ಡೇಗೆ ಲಕ್ಷುರಿ ರೇಂಜ್ ರೋವರ್ ಗಿಫ್ಟ್ ಮಾಡಿದ ನಟ ನಿತಿನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!