ವ್ಯಾಲೆಂಟೈನ್ಸ್ ಡೇಗಾಗಿ ಸನ್ನಿ ಲಿಯೋನ್‌ಗೆ ಪತಿ ಡೇನಿಯಲ್ ವೆಬರ್ ವಿಶೇಷ ಸರ್ಪ್ರೈಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಪತಿಗಾಗಿ ಮಂಚದಡಿ, ವಾಶ್ ರೂಂ ಎಲ್ಲೆಡೆ ಸನ್ನಿ ಹುಡುಕಾಡಿದ್ದಾಳೆ.
ಪೂರ್ತಿ ಕೆಂಪು ಬಣ್ಣದ ಬಲೂನ್ ಹಾಗೂ ಕೆಂಪು ಗುಲಾಬಿಯಿಂದ ತುಂಬಿದ ಕೋಣೆ, ಗೋಡೆ ಮೇಲೆ ಲವ್ ಎಂಬ ಬರಹ, ನೆಲದ ಮೇಲೆ ಗುಲಾಬಿ ದಳಗಳು, ಹಾಸಿಗೆ ಮೇಲೆ ಕೇಕ್ ಮತ್ತು ಪಾನೀಯ.. ವ್ಯಾಲೆಂಟೈನ್ಸ್ ಡೇಗೆ ಸನ್ನಿ ಲಿಯೋನ್‌ಗೆ ಆಕೆಯ ಪತಿ ಡೇನಿಯಲ್ ವೆಬರ್ ಸರ್ಪ್ರೈಸ್ ನೀಡಿದ್ದು ಹೀಗೆ..
ಗುಲಾಬಿ ದಳದ ಮೇಲೆ ಕಾಲಿಡುತ್ತಾ ತನಗಾಗಿ ಸಿದ್ಧವಾದ ಈ ವಿಶೇಷ ಕೋಣೆಯನ್ನು ನೋಡಿ ಸಂತಸ ಪಡುತ್ತಾ ಸನ್ನಿ ಲಿಯೋನ್ ಕೋಣೆಯೊಳಗೆ ಹೋಗುತ್ತಾಳೆ. ಈ ವಿಶೇಷ ಸಿದ್ಧತೆಗಾಗಿ ಥ್ಯಾಂಕ್ಸ್ ಹೇಳುತ್ತಲೇ ನಾನಿಲ್ಲಿ ಒಬ್ಬಳೇ ರಾತ್ರಿ ಕಳೆಯಬೇಕೇ ಎಂದು ಜೋಕ್ ಮಾಡಿ ನಗುತ್ತಾಳೆ ಸನ್ನಿ ಲಿಯೋನ್. ಮಿರಿ ಮಿರಿ ಮಿಂಚುವ ಪೀಚ್ ಬಣ್ಣದ ಮಿಡಿ ಹಾಗೂ ಕ್ರಾಪ್ ಟಾಪ್ ಧರಿಸಿ, ಹೈ ಹೀಲ್ಸ್ ಹಾಕಿದ ಸನ್ನಿ ಲಿಯೋನ್‌ಗೆ ಇದ್ದಕ್ಕಿದ್ದಂತೆ ಪತಿ ಅದೇ ಕೋಣೆಯಲ್ಲಿ ಎಲ್ಲಾದರೂ ಅಡಗಿಕೊಂಡಿರಬಹುದೇ ಎಂಬ ಅನುಮಾನ ಕಾಡುತ್ತದೆ. ಕೂಡಲೇ ಮಂಚದ ಕೆಳಗೆ, ವಾಶ್‌ರೂಂನಲ್ಲಿ ಎಲ್ಲೆಡೆ ಪತಿಗಾಗಿ ಹುಡುಕುತ್ತಾಳೆ. ಅವನಿಲ್ಲಿ ಇಲ್ಲವೆಂದರೆ ನನಗೆ ಬೇಜಾರಾಗುತ್ತದೆ ಎಂದು ವಿಡಿಯೋ ತೆಗೆಯುತ್ತಿದ್ದವನತ್ತ ತಿರುಗಿ ಹೇಳುತ್ತಾಳೆ.
ಇದನ್ನು ನೋಡಿದ ನೆಟ್ಟಿಗರು 'ಹೌ ಕ್ಯೂಟ್ ಸನ್ನಿ' ಎನ್ನುತ್ತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸನ್ನಿ ಲಿಯೋನ್, 'ಎಷ್ಟೊಂದು ಅದ್ಬುತವಾದ, ಸುಂದರವಾದ ಸರ್ಪ್ರೈಸ್ ಇದು? ನೀನು ಮಾತ್ರ ನನಗಾಗಿ ಇಂಥ ಸುಂದರ ವಿಷಯಗಳನ್ನು ಆರೇಂಜ್ ಮಾಡಬಲ್ಲೆ. ಐ ಲವ್ ಯೂ ಬೇಬಿ. ಹ್ಯಾಪಿ ವ್ಯಾಲೆಂಟೈನ್ಸ್ ಡೇ' ಎಂದಿದ್ದಾಳೆ.
ಜೊತೆಗೆ, ಈ ಸರ್ಪ್ರೈಸ್ ಆರೇಂಜ್ ಮಾಡಲು ನೆರವಾದ ರಾಜ್, ಜಿನ್ಸಿ ಹಾಗೂ ಎಲ್ಲರಿಗೂ ಧನ್ಯವಾದಗಳು ಎಂದು ನಟಿ ಹೇಳಿದ್ದಾಳೆ. \
ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ; ಇವರ ವಾರ್ಷಿಕ ಸಂಬಳವೇ 9.6 ಕೋಟಿ ರೂ.!
ಈ ಅಲಂಕಾರ ಆಕೆಗೆ ಕೊಟ್ಟಷ್ಟೇ ಖುಷಿ, ಸನ್ನಿಯ ವಿಡಿಯೋ ನೋಡಿದವರೂ ವ್ಯಕ್ತಪಡಿಸುತ್ತಿದ್ದಾರೆ. ಈ ಜೋಡಿ ಸದಾ ಹೀಗೆ ಸಂತೋಷವಾಗಿರಲಿ ಎಂದು ಹಾರೈಸುತ್ತಿದ್ದಾರೆ.