ಬೆತ್ತಲಾಗಿದ್ದ ರಣವೀರ್​ ಸಿಂಗ್​ ಪರ ನಿಂತಿದ್ದ ವಿವೇಕ್​ ಅಗ್ನಿಹೋತ್ರಿ: ಗುಟ್ಟು ಈಗ ರಟ್ಟಾಯ್ತು

By Suvarna NewsFirst Published Aug 15, 2023, 2:34 PM IST
Highlights

ನಗ್ನ ಚಿತ್ರದ ಸಂದರ್ಭದಲ್ಲಿ ನಟ ರಣವೀರ್​ ಸಿಂಗ್​ ಅವರನ್ನು ಸಪೋರ್ಟ್ ಮಾಡಿದ ಏಕೈಕ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಯವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದ್ದ ನಟ
 

ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಆಗಾಗ ಸುದ್ದಿಯಲ್ಲಿರುತ್ತಾರೆ. ಅವರ ಸಿನಿಮಾಗಳ ಹೊರತಾಗಿ, ಅವರು ತಮ್ಮ ಹೇಳಿಕೆಗಳಿಗೆ ಸಾಕಷ್ಟು ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ನಟ ರಣವೀರ್ ಸಿಂಗ್ ಬಗ್ಗೆ ಪ್ರಸ್ತಾಪಿಸಿದರು. ರಣವೀರ್ ಸಿಂಗ್​ ಅವರು ತಮ್ಮ ಬೋಲ್ಡ್ ಫೋಟೋಶೂಟ್‌ಗೆ ಸಂಬಂಧಿಸಿದಂತೆ ವಿವಾದಗಳಿಂದ ಸುತ್ತುವರಿದ ಸಮಯವನ್ನು ಅವರು ಉಲ್ಲೇಖಿಸಿದರು ಮತ್ತು ಇದೇ ವಿಷಯವಾಗಿ ನಟ ರಣವೀರ್​ ಅವರನ್ನು ಬೆಂಬಲಿಸಿದ್ದರು ಕೂಡ. ಅಷ್ಟಕ್ಕೂ ನಟ ರಣವೀರ್​ ಸಿಂಗ್​ ಅವರ ನಗ್ನ ಚಿತ್ರದ ವಿವಾದದ ಬಗ್ಗೆ ಸಿನಿ ಪ್ರಿಯರಿಗೆ ತಿಳಿದೇ ಇದೆ. ಕಳೆದ ವರ್ಷದ ಜುಲೈನಲ್ಲಿ ನಟನ ಈ ಫೋಟೋ ಸಾಕಷ್ಟು ಟ್ರೋಲ್​ಗೆ ಒಳಗಾಗಿತ್ತು. ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ಟ್ರೋಲ್ ಆಗಿದ್ದರು ರಣವೀರ್​. ಮ್ಯಾಗಜೀನ್​ ಒಂದರ ಮುಖಪುಟಕ್ಕೆ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ನಟ. ರಣವೀರ್ ಸಿಂಗ್ ಬೆತ್ತಲೆ ಫೋಟೋಗಳು ವೈರಲ್ ಆದ ಬೆನ್ನಲ್ಲೇ  ಅವರ ವಿರುದ್ಧ ಮಹಿಳೆಯರು ಪ್ರಕರಣ ಕೂಡ ದಾಖಲಿಸಿದ್ದರು. ರಣವೀರ್​ ಬೆತ್ತಲಾಗುವ ಮೂಲಕ  'ಮಹಿಳೆಯರ ಭಾವನೆಗಳನ್ನು ನೋಯಿಸಿದ್ದಾರೆ' ಎಂದು ರಣವೀರ್ ವಿರುದ್ಧ ದೂರಲಾಗಿತ್ತು.
 
ಆ ಸಮಯದಲ್ಲಿ ಇವರನ್ನು ಟ್ರೋಲ್​ ಮಾಡಿದವರೇ ಹೆಚ್ಚು. ಆದರೆ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮಾತ್ರ ರಣವೀರ್​ (Ranveer Singh) ಪರವಾಗಿ ನಿಂತಿದ್ದರು. ಈ ಕುರಿತು ಈಗ ಪ್ರಸ್ತಾಪಿಸಿರುವ ವಿವೇಕ್​ ಅಗ್ನಿಹೋತ್ರಿಯವರು, ನಾವಿಬ್ಬರೂ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆವು. ಆ ಸಂದರ್ಭದಲ್ಲಿ  ರಣವೀರ್ ಮತ್ತು ನನ್ನ ನಡುವೆ ಜಗಳ ಆಗುತ್ತೆ ಅಂತ ಅಲ್ಲಿದ್ದವರೆಲ್ಲಾ ಅಂದುಕೊಂಡಿದ್ದರು, ಆದರೆ ರಣವೀರ್ ಬಂದು ಅಪ್ಪಿಕೊಂಡರು ಎಂದು ವಿವೇಕ್​ ಹೇಳಿದ್ದಾರೆ. ರಣವೀರ್​ ನೇರವಾಗಿ ಬಂದು ನನ್ನ  ಪಾದವನ್ನು ಎಲ್ಲರ ಮುಂದೆ ಮುಟ್ಟಿ, 'ಸರ್, ನನ್ನ ನಗ್ನ ಚಿತ್ರಗಳು ಬಂದಾಗ ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ನನ್ನನ್ನು ಬೆಂಬಲಿಸಿದ ಏಕೈಕ ವ್ಯಕ್ತಿ ನೀವು ಎಂದು ಹೇಳಿದರು. ಅವರಿಗೆ ಅಂಥ ಸಮಯದಲ್ಲಿ ಬೆಂಬಲಿಸಿದ್ದ ಏಕೈಕ ವ್ಯಕ್ತಿ ನಾನಾಗಿದ್ದುದು ಆಗ ತಿಳಿದಿತ್ತು. ಆದರೆ ರಣವೀರ್ ಈ ವಿಷಯದಲ್ಲಿ ಭಾವುಕರಾಗಿದ್ದರು ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದರು. 

ಸೆಟ್ಟಲ್ಲೇ ರಣವೀರ್​ ತೊಡೆಯೇರಿ ಲವ್​ ಶುರು ಹಚ್ಕೊಂಡಿದ್ದ ದೀಪಿಕಾ- ಗುಟ್ಟು ಈಗ ಬಯಲು!

ಅಷ್ಟಕ್ಕೂ ವಿವೇಕ್ ಅಗ್ನಿಹೋತ್ರಿ ಅವರು ಎಲ್ಲಾ ಯುವ ಚಲನಚಿತ್ರ ನಿರ್ಮಾಪಕರು (Producer) ಮತ್ತು ನಟರನ್ನು ಬೆಂಬಲಿಸುವುದು ಸಿನಿ ಕ್ಷೇತ್ರದಲ್ಲಿ ಬಹುತೇಕ ಮಂದಿಗೆ ತಿಳಿದಿರುವ ವಿಷಯ. ಅವರು ಸದಾ  ಯುವಕರು ಧೈರ್ಯಶಾಲಿ, ಧೈರ್ಯಶಾಲಿ ಮತ್ತು ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ.  'ನಾನು ಯಾವಾಗಲೂ ವಾಕ್ ಸ್ವಾತಂತ್ರ್ಯದ ಪರವಾಗಿದ್ದೇನೆ, ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು ಎಂದು ನಾನು ಹೇಳುತ್ತೇನೆ' ಎನ್ನುತ್ತಾರೆ ವಿವೇಕ್​ ಅಗ್ನಿಹೋತ್ರಿ. ಇದೇ  ಕಾರಣಕ್ಕೆ ನಗ್ನ ಚಿತ್ರಕ್ಕೆ ಸಂಬಂಧಿಸಿದಂತೆ ಎಲ್ಲರೂ ರಣವೀರ್​ ಸಿಂಗ್​ ವಿರುದ್ಧ ತಿರುಗಿ ಬಿದ್ದಿದ್ದಾಗ ವಿವೇಕ್​ ಅಗ್ನಿಹೋತ್ರಿ ಅವರನ್ನು ಬೆಂಬಲಿಸಿದ್ದರು. 

 ರಣವೀರ್​ ತಮ್ಮ ಪಾದ  ಮುಟ್ಟಿ ನಮಸ್ಕರಿಸಿದ್ದ ವಿಷಯವನ್ನು ನಾನು ಇದುವರೆಗೆ ಎಲ್ಲಿಯೂ ಬಾಯಿ ಬಿಡಲಿಲ್ಲ. ಯಾರಾದರೂ ಇದರ ವಿಡಿಯೋ ಮಾಡಿದ್ದರೆ ಅದನ್ನು ಸಾರ್ವಜನಿಕಗೊಳಿಸದಂತೆ ಮನವಿ ಮಾಡಿಕೊಂಡಿದ್ದೆ. ಇಂಥ ವಿಷಯಗಳು ಬಹು ದೊಡ್ಡದಾಗಿ ಬೆಳೆಯುವ ಕಾರಣ, ಇದಕ್ಕೆಲ್ಲಾ ಅವಕಾಶ ಕೊಡಬಾರದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ವಿವೇಕ್​. 

ದಿ ಕಾಶ್ಮೀರ್​ ಫೈಲ್ಸ್​ (The Kashmir Files) ಚಿತ್ರದಿಂದ ಸಕತ್​ ಸುದ್ದಿಯಾಗಿದ್ದ ಹಾಗೂ ಅಷ್ಟೇ ವಿವಾದಕ್ಕೂ ಸಿಲುಕಿರುವ  ನಿರ್ದೇಶಕ ವಿವೇಕ್  ಅಗ್ನಿಹೋತ್ರಿ ಅವರ ಮುಂಬರುವ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ದಿನಾಂಕ ನಿಗದಿಪಡಿಸಿದೆ. ಈ ಕುರಿತು ವಿವೇಕ್ ಅಗ್ನಿಹೋತ್ರಿ ಅವರು ಮಂಗಳವಾರ ಟ್ವೀಟ್ ಮಾಡಿದ್ದು, ಚಿತ್ರವು ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಅನಿಶ್ಚಿತ ಸಮಯದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳ ಸಮರ್ಪಣೆಗೆ ಚಿತ್ರವು ಗೌರವ ಸಮರ್ಪಿಸಲಿದೆ.

ಗರ್ಭಿಣಿಯಾಗಿದ್ದ ಸುದ್ದಿಯನ್ನು ಪತಿಗಿಂತಲೂ ಮೊದ್ಲು ಆ ಸ್ಟಾರ್​ಗೆ ತಿಳಿಸಿದ್ರಂತೆ ಆಲಿಯಾ!

 

click me!