
ಇಂಡಿಯನ್, ಬಾರ್ಡರ್, ಜೀತ್ ಹೀಗೆ ಹಲವಾರು ಚಿತ್ರಗಳನ್ನು ಮಾಡಿ ಪ್ರಸಿದ್ಧರಾಗಿರುವ ನಟ, ರಾಜಕಾರಣಿ ಸನ್ನಿ ಡಿಯೋಲ್ (Sunny Deol), ಇದೇ ಅಕ್ಟೋಬರ್ 19ರಂದು (October 19) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಬರ್ತ್‌ಡೇ ಸಂಭ್ರಮದಲ್ಲಿರುವ ಸನ್ನಿ, ಹೈದ್ರಾಬಾದ್ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ನಟ ಸನ್ನಿ ಡಿಯೋಲ್ ಅವರು ದೇಶಪ್ರೇಮಕ್ಕೆ ಕೇರ್ ಆಫ್ ಅಡ್ರೆಸ್ ಎನಿಸಿಕೊಂಡಿದ್ದಾರೆ.
'ಗದರ್-2' ಹಿಟ್ ಬಳಿಕ ಸನ್ನಿ ಡಿಯೋಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ 'ಜಟ್ (Jaat)'. ತೆಲುಗಿನಲ್ಲಿ ಕ್ರ್ಯಾಕ್, ವೀರ ಸಿಂಹ ರೆಡ್ಡಿ ಸಿನಿಮಾಗಳ ನಿರ್ದೇಶಕ ಗೋಪಿಚಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಟ್ ಸಿನಿಮಾದ ಫಸ್ಟ್ ಲುಕ್ ಬಾರ್ಡರ್ ಬಾಯ್ ಬರ್ತಡೇ ಸ್ಪೆಷಲ್ ಆಗಿ ರಿಲೀಸ್ ಮಾಡಲಾಗಿದೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ಪಡೆಯುತ್ತಿದ್ದು ಸಖತ್ ವೈರಲ್ ಆಗುತ್ತಿದೆ.
ಲೈಫಲ್ಲಿ ಮತ್ತೊಮ್ಮೆ ಅಮ್ಮನ ಮುಖ ನೋಡಲಾಗದೆಂದು ಮತ್ತೆ ಮತ್ತೆ ನೋಡುತ್ತಲೇ ಇದ್ದ ಸುದೀಪ್!
ಜಟ್ ಸಿನಿಮಾಗಾಗಿ ಸನ್ನಿ ಡಿಯೋಲ್ ಮಾಸ್ ಅವತಾರವೆತ್ತಿದ್ದಾರೆ. ಕೈಯಲ್ಲಿ ಭಾರೀ ಗಾತ್ರದ ಫ್ಯಾನ್ ಹಿಡಿದು ಗಂಭೀರವಾದ ಲುಕ್ ಕೊಟ್ಟಿರುವ ಸನ್ನಿ ಕೈ ತುಂಬಾ ಹಾಗೂ ಫ್ಯಾನ್ಸ್ ಮುಂಭಾಗ ರಕ್ತ ಹೈಲೆಟ್ ಆಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಕಂಪ್ಲೀಟ್ ಮಾಸ್ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ.
ಆಕ್ಷನ್ ಪ್ಯಾಕ್ಡ್ ಜಟ್ ಸಿನಿಮಾದಲ್ಲಿ ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್, ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮನ್ ಎಸ್ ಸಂಗೀತ, ರಿಷಿ ಪಂಜಾಬಿ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ. ಪೀಟರ್ ಹೆನ್, ಅನ್ಲ್ ಅರಸು, ರಾಮ್ ಲಕ್ಷ್ಮಣ್ ಮತ್ತು ವೆಂಕಟ್ ಸಾಹಸ ನಿರ್ದೇಶನ ಜಟ್ ಸಿನಿಮಾಗೆ ಇರಲಿದೆ.
ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯೆರ್ನೇನಿ ಹಾಗೂ ವೈ ರವಿಶಂಕರ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಡಿ ಟಿ.ಜಿ ವಿಶ್ವ ಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ, ಬಹಳ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಚಿತ್ರದ ಶೂಟಿಂಗ್ ಸದ್ಯ ಹೈದ್ರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ.
ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?
ಬಾಲಿವುಡ್ ನಟ ಸನ್ನಿ ಡಿಯೋಲ್ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ, ಅವರು ಹೆಚ್ಚೂ ಕಡಿಮೆ 35-40 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಹೀರೋ ಆಗಿ, ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಲ್ಲದೇ ಹಲವಾರು ಸಿನಿಮಾಗಳಲ್ಲಿ ಗೆಸ್ಟ್ ಅಪೀಯರೆನ್ಸ್‌ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದೀಗ ಜಟ್ ಮೂಲಕ ದೇಶವ್ಯಾಪಿಯಾಗಿ ಸಿನಿರಸಿಕರ ಮುಂದೆ ಬರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.