Darshan: ಜೈಲಲ್ಲಿರೊ ದರ್ಶನ್‌ಗೆ ಹಣ್ಣು ಕೊಟ್ಟ ಸುದೀಪ್, ಶಿವಣ್ಣ, ಯಶ್!

Published : Nov 28, 2025, 09:09 AM IST
darshan sudeep

ಸಾರಾಂಶ

ಇದು ಅಭಿಮಾನಿಗಳ ಆಸೆಯೋ? ಹಂಬಲವೋ? ಕನ್ನಡ ಚಿತ್ರರಂಗದ ಸ್ಟಾರ್‌ಗಳು ಒಂದಾಗಬೇಕೆಂಬ ಅಭಿಮಾನಿಗಳ ಇಚ್ಛೆಯೋ? ಅಂತೂ ಜೈಲಿಗೆ ಹೋಗಿ ದರ್ಶನ್‌ (Darshan) ಅನ್ನು ಭೇಟಿಯಾಗುವ ಶಿವಣ್ಣ, ಸುದೀಪ್ ಮತ್ತು ಯಶ್ ವಿಡಿಯೋ ವೈರಲ್ ಆಗಿದೆ. 

ಪರಪ್ಪನ ಅಗ್ರಹಾರ ಜೈಲಿನ ಮುಂದೆ ದೊಡ್ಡದೊಂದು ಕಪ್ಪು ಕಾರು ಬಂದು ನಿಲ್ಲುತ್ತೆ. ಜೈಲಿನ ಸಿಬ್ಬಂದಿ ಕಣ್ಣು ಕಣ್ಣು ಬಿಟ್ಕೊಂಡು ನೋಡ್ತಾ ಇರಬೇಕಾದ್ರೆ, ಅದರಿಂದ ಕನ್ನಡದ ಮೂವರು ಸೂಪರ್‌ ಸ್ಟಾರ್‌ಗಳು ಇಳೀತಾರೆ- ಶಿವ‌ ರಾಜ್‌ಕುಮಾರ್, ಕಿಚ್ಚ ಸುದೀಪ್‌, ಯಶ್. ಮೂವರೂ ನಡ್ಕೊಂಡು ಜೈಲೊಳಗೆ ಹೋಗ್ತಾರೆ. ಅಲ್ಲಿ ಕೊಲೆ ಕೇಸಿನಲ್ಲಿ ಸೆಲ್‌ನೊಳಗೆ ಇರುವ ದರ್ಶನ್‌ಗೆ ಹಾಯ್‌ ಅಂತಾರೆ. ದರ್ಶನ್‌ ಅನ್ನು ಹೊರಗೆ ಕರೆಸಿಕೊಂಡು ದಚ್ಚುಗೆ ಮೂವರು ತಾವು ತಂದ ಹಣ್ಣುಗಳನ್ನು ಕೊಡ್ತಾರೆ. ನಾಕೂ ಜನ ಕೂತ್ಕೊಂಡು ಮಾತಾಡ್ತಾರೆ. ಕೇರಂ ಆಡ್ತಾರೆ. ಒಟ್ಟಿಗೇ ತಿಂಡಿ- ಕಾಫಿ ಸವೀತಾರೆ. ನಂತರ ಟಾಟಾ ಮಾಡಿ ಹೊರಡ್ತಾರೆ.

ಇದೇನು ಕನಸಾ ಅಂತ ಕಣ್ಣುಜ್ಜಿಕೊಂಡು ನೋಡ್ತೀರಾ. ನಿಜಾನಾ ಇದು! ಅಂತ ಕಣ್ಣು ಕಣ್ಣು ಬಿಟ್ಟುಕೊಂಡು ನೋಡುವ ಹಾಗಾಗುತ್ತೆ. ಕೆಲವು ಫೋಟೋ- ವಿಡಿಯೋಗಳನ್ನು ನೋಡ್ತಾ ಇದ್ರೆ ಇದು ನಿಜಾನಾ ಅನ್ನಿಸುತ್ತೆ- ನಿಜವಾಗಲಿ ಅಂತನೂ ಅನಿಸುತ್ತೆ. ಇಂಥದೊಂದು ಫೋಟೋ- ವಿಡಿಯೋಗಳು ಕಳೆದ ಕೆಲವು ದಿನಗಳಿಂದ ಕೆಲವರು ಕ್ರಿಯೇಟ್‌ ಮಾಡಿ ಇನ್‌ಸ್ಟಾದಲ್ಲಿ ಮತ್ತಿತರ ಸೋಶಿಯಲ್‌ ಮೀಡಿಯಾದಲ್ಲಿ ಹಾಕ್ತಾ ಇದಾರೆ. ಇದು ನಿಜವಾಗಲಿ ಎಂಬ ಆಸೆಯೂ ಅವರಿಗೆ ಇದ್ದಂತಿದೆ. ನಿಜವಾಗದೇ ಹೋದ ಇಂಥ ಕನಸನ್ನು ಹೀಗಾದರೂ ಚಿತ್ರದಲ್ಲಾದರೂ ನಿಜ ಮಾಡಿಕೊಳ್ಳೋಣ ಅನ್ನುವ ಆಸೆ ಇರಬಹುದು. ಹಿಂದೆಲ್ಲಾ ಇಂಥ ಆಸೆಗಳು ಮನಸ್ಸಲ್ಲಿಯೇ ಉಳಿದುಬಿಡುತ್ತಿದ್ದವು. ಈಗ ಅದನ್ನು ನನಸಿನ ಥರಾ ಕಾಣೋಕೆ ಎಐ ಸಹಾಯ ಮಾಡ್ತಿದೆ. ಯಾರನ್ನೂ ಬೇಕಾದರೂ, ಎಂಥ ಸನ್ನಿವೇಶವನ್ನು ಬೇಕಿದ್ದರೂ ಎಐ ಫೋಟೋ ಅಥವಾ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಬಹುದು.

ಹಿಂದೊಮ್ಮೆ ಹಾಟ್‌ ಹಾಟ್‌ ಡ್ರೆಸ್‌ ಧರಿಸಿ ಲಿಫ್ಟ್‌ನಲ್ಲಿ ಹೋಗುವ ರಶ್ಮಿಕಾ ಮಂದಣ್ಣ ಅವರ ಒಂದು ವಿಡಿಯೋ ವೈರಲ್‌ ಆಗಿತ್ತು. ನಂತರ ಅದು ಡೀಪ್‌ಫೇಕ್‌ ವಿಡಿಯೋ ಅಂತ ಗೊತ್ತಾಗಿತ್ತು. ಅಂದ್ರೆ ಯಾರದೋ ಬಾಡಿಗೆ ರಶ್ಮಿಕಾ ತಲೆ ಕೂರಿಸಿ ಮಾಡಿದ ವಿಡಿಯೋ. ಆಗ ಕೋಲಾಹಲವೇ ಆಗಿತ್ತು. ಇದೀಗ ಅದಕ್ಕೂ ಮುಂದುವರಿದ ಭಾಗವನೂ ಎಐ ಸೃಷ್ಟಿ ಮಾಡ್ತಾ ಇದೆ. ಕಾಲ್ಪನಿಕ ದೃಶ್ಯಗಳನ್ನೆಲ್ಲಾ ನಿಜ ಮಾಡಿಕೊಂಡು ಸವಿಯುವ ಸಾಧ್ಯತೆ ಬಂದೊದಗಿದೆ. ಇಲ್ಲವಾದರೆ, ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಸುದೀಪ್‌, ಯಶ್‌, ಶಿವಣ್ಣ ಹೋಗುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಸುದೀಪ್‌, ಶಿವಣ್ಣ ಹಾಗೂ ಯಶ್‌ ಮೂವರಿಗೂ ದರ್ಶನ್‌ ಜತೆಗೆ ಈಗ ಬಾಂಧವ್ಯ ಅಷ್ಟೇನೂ ಚೆನ್ನಾಗಿಲ್ಲ. ಜೊತೆಗೆ ಜೈಲಿಗೆ ಹೋಗಿ ದರ್ಶನ್‌ ಕಂಡು ತಮ್ಮ ಇಮೇಜ್‌ ಕೆಡಿಸಿಕೊಳ್ಳಲೂ ಅವರು ಮುಂದಾಗಲ್ಲ. ಆದರೆ ದರ್ಶನ್‌ ಅಭಿಮಾನಿಗಳಿಗೆ ಮಾತ್ರ ಅದೆಲ್ಲಾ ಒಂದು ಇಶ್ಯೂನೇ ಅಲ್ಲ.

ವೈರಲ್‌ ಆಗು‌ತ್ತಿರುವ ಕಂಟೆಂಟ್

ಕೆಲವರು ಇದರಲ್ಲಿ ಕನ್ನಡ ಫಿಲಂ ಇಂಡಸ್ಟ್ರಿಯ ಒಳಿತನ್ನು ಕಂಡಿದ್ದಾರೆ. ʼtrue kannada media' ಎಂಬ ಪೇಜ್‌ನಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. ʼಇದು ನಿಜ ಆದ್ರೆ ಇನ್ನೂ ತುಂಬಾ ಖುಷಿಯಾಗುತ್ತೆ ಬ್ರದರ್ʼ ʼಸೂಪರ್ ಜೈ ಡಿ ಬಾಸ್ ಬೇಗ ಚಾಮುಂಡೇಶ್ವರಿ ತಾಯಿ ಒಳ್ಳೆದು ಮಾಡ್ಲಿ ನಮ್ ಬಾಸ್‌ಗೆʼ ʼವಾವ್ ಸ್ಟಾರ್ ವಾರ್ ಬಿಟ್ಟು ಎಲ್ರೂ ಈ ರೀತಿ ಯೋಚ್ನೆ ಮಾಡಿʼ ʼಹೀಗೆ ಇದ್ರೆ ನಮ್ ಕನ್ನಡ ಇಂಡಸ್ಟ್ರಿ ಯಾವ ಇಂಡಸ್ಟ್ರಿಗೂ ಕಮ್ಮಿ ಆಗಲ್ಲʼ ಎಂದೆಲ್ಲ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.

 

 

ಇದೇ ಪೇಜ್‌ನಲ್ಲಿ ಇಂಥದೇ ಇನ್ನೂ ಕೆಲವು ಫೋಟೋ- ವಿಡಿಯೋಸ್‌ ಕೂಡ ಇವೆ. ಅದೂ ಒಂದು ಸುಂದರ ಕನಸಿನಂತಿದೆ. ಅದರಲ್ಲಿ ದರ್ಶನ್‌, ಸುದೀಪ್‌, ಶಿವಣ್ಣ, ಯಶ್‌ ಜೊತೆಗೆ ಉಪೇಂದ್ರ ಮತ್ತು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಹ ಇದ್ದಾರೆ. ಎಲ್ರೂ ಜೊತೆಗೇ ಕೇರಂ ಆಡ್ತಿದಾರೆ, ಬೈಕ್‌ ಸವಾರಿ ಹೋಗ್ತಿದಾರೆ, ಬೀದಿ ಬದಿಯಲ್ಲಿ ಟೀ ಕುಡೀತಿದಾರೆ, ಕ್ರಿಕೆಟ್‌ ಆಡ್ತಿದಾರೆ, ಬಾರ್ಬೆಕ್ಯೂ ಮಾಡ್ತಿದಾರೆ. ಕನ್ನಡ ಫಿಲಂ ಇಂಡಸ್ಟ್ರಿ ಈ ಥರ ಇದ್ರೆ ಎಷ್ಟು ಚಂದ ಅಂತ ಅದಕ್ಕೆ ಎಲ್ರೂ ಕಾಮೆಂಟ್‌ ಮಾಡಿದ್ದಾರೆ. "ಯಾರು ಗುರು ಎಡಿಟಿಂಗ್ ಮಾಡಿದ್ದು. ತುಂಬಾ ಸಂತೋಷ. ಎಷ್ಟೋ ಸಲ ಇವರ ಬಗ್ಗೆ ಕೆಟ್ಟ ಕಮೆಂಟ್ ಮಾಡಿದಾಗ ನನಗೆ ತುಂಬಾ ಬೇಸರವಾಗಿದ್ದು ಇದೆ. ಆದ್ರೆ ಈ ವಿಡಿಯೋ ನೋಡಿದಾಗ ತುಂಬಾ ಖುಷಿಪಟ್ಟೆ. ಎಲ್ಲರೂ ಚೆನ್ನಾಗಿರಲಿ ಅಂತಾನೆ ಬಯಸುವ. ಕೆಟ್ಟದಾಗಿ ವಿಡಿಯೋ ಮಾಡಿ ಇನ್ನೊಬ್ಬರ ಮದ್ಯೆ ತಂದು ಇಡುವುದಕ್ಕಿಂತ ಇಂಥ ವಿಡಿಯೋ ನೋಡಿಯಾದರೂ ಖುಷಿ ಪಡೋಣ.. ಎಲ್ಲರಿಗೂ ಒಳ್ಳೆಯದಾಗಲಿ.. ನಮ್ಮ ಮರೆಯದ ಮಾಣಿಕ್ಯ ನಮ್ಮ ಅಪ್ಪು ಕಂದ..." ಎಂದು ಒಬ್ಬರು ಭಾವುಕವಾಗಿ ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?