Happy Birthday Rajamouli; 12 ಕೋಟಿಯಿಂದ 2000 ಕೋಟಿವರೆಗೆ, ಬಾಕ್ಸ್ ಆಫೀಸ್ 'ಬಾಹುಬಲಿ'ಯಾದ ಜಕ್ಕಣನ ರೋಚಕ ಪಯಣ

Published : Oct 10, 2022, 02:38 PM IST
Happy Birthday Rajamouli; 12 ಕೋಟಿಯಿಂದ 2000 ಕೋಟಿವರೆಗೆ, ಬಾಕ್ಸ್ ಆಫೀಸ್ 'ಬಾಹುಬಲಿ'ಯಾದ ಜಕ್ಕಣನ ರೋಚಕ ಪಯಣ

ಸಾರಾಂಶ

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಇಂದು (ಅಕ್ಟೋಬರ್ 10) ಹುಟ್ಟುಹಬ್ಬದ ಸಂಭ್ರಮ. 

ಎಸ್ ಎಸ್ ರಾಜಮೌಳಿ ಸಿನಿ ಮಂದಿಗೆ ಈ ಹೆಸರನ್ನು ಕೇಳೋದೇ ಒಂದು ಸಂಭ್ರಮ. ಇನ್ನು ಅವರ ಜೊತೆ ಕೆಲಸ ಮಾಡೋದು ಅಂದರೆ ಕೇಳಬೇಕಾ ಅದೆಷ್ಟೋ ಜನ್ಮದ ಪುಣ್ಯ ಎಂದುಕೊಳ್ಳುತ್ತಾರೆ. ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ, ಅದ್ಭುತ ವ್ಯಕ್ತಿ ಎಸ್ ಎಸ್ ರಾಜಮೌಳಿ ಅವರಿಗೆ ಇಂದು (ಅಕ್ಟೋಬರ್ 10) ಹುಟ್ಟುಹಬ್ಬದ ಸಂಭ್ರಮ. ಸೋಲಿಲ್ಲದ ಸರದಾರ, ಜಕ್ಕಣ್ಣ ಎಂದೇ ಖ್ಯಾತಿಗಳಿಸಿರುವ ರಾಜಮೌಳಿ ಅವರಿಗೆ ಅಭಿಮಾನಿಗಳಿಂದ, ಸಿನಿಮಾರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಭಾರತದ ಬಹುಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಮೌಳಿ ಅವರನ್ನು ಮಾಸ್ಟರ್ ಕಥೆಗಾರ, ಬಾಕ್ಸ್ ಆಫೀಸ್ ಕಿಂಗ್ ಅಂತೆಲ್ಲ ಬಣ್ಣಿಸಲಾಗುತ್ತೆ. 

2 ದಶಕಗಳ ತನ್ನ ವೃತ್ತಿ ಜೀವನದಲ್ಲಿ ಸೋಲನ್ನೇ ಕಾಣದ ನಿರ್ದೇಶಕ ಅಂದರೆ ಅದೂ ರಾಜಮೌಳಿ ಮಾತ್ರ. ಸಾಮಾನ್ಯ ನಿರ್ದೇಶಕರಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ರಾಜಮೌಳಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ರಾರಾಜಿಸುತ್ತಿದೆ. ಹುಟ್ಟುಹಬ್ಬದ ಈ ಸಮಯದಲ್ಲಿ ರಾಜಮೌಳಿ ಸ್ಟಾರ್ ಮೇಕರ್ ಆಗಿ ಹೊರಹೊಮ್ಮಿದ ರೋಚಕ ಪಯಣದ ಬಗ್ಗೆ ವಿವರಿಸಲಾಗಿದೆ. 

ರಾಜಮೌಳಿ, ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿ ಜೀವ ಪ್ರಾರಂಭ ಮಾಡಿದರು. ತಂದೆ ಖ್ಯಾತ ಬರಹಗಾರರಾಗಿರುವ ವಿಜಯೇಂದ್ರ ಪ್ರಸಾದ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಜೊತೆ ಕೆಲಸ ಪ್ರಾರಂಭ ಮಾಡಿದ್ದ ರಾಜಮೌಳಿಗೆ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಛಲ ಬಲವಾಗಿತ್ತು. ಸಿನಿಮಾ ನಿರ್ದೇಶನಕ್ಕೂ ಮೊದಲು ರಾಜಮೌಳಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಧಾರಾವಾಹಿ ನಿರ್ದೇಶನ ಮಾಡಿದ್ದರು. ಬಳಿಕ 2001ರಲ್ಲಿ ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಜೂ.ಎನ್ ಟಿ ಆರ್ ನಾಯಕನಾಗಿ ಕಾಣಿಸಿಕೊಂಡಿದ್ದರು. ರಾಜಮೌಳಿ ಮೊದಲ ಸಿನಿಮಾವೇ ಆ ಕಾಲದಲ್ಲಿ 12 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಅಲ್ಲದೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಮೊದಲ ಸಿನಿಮಾದಲ್ಲೇ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡರು. 

2003ರಲ್ಲಿ ಮತ್ತೆ ರಾಜಮೌಳಿ ಹಾಗೂ ಜೂ ಎನ್ ಟಿ ಆರ್ ಕಾಂಬಿನೇಷನ್ ನಲ್ಲಿ ಸಿಂಹಾದ್ರಿ ಸಿನಿಮಾ ಸೆಟ್ಟೇರಿತು. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಆ ಸಮಯದಲ್ಲಿ ಸಿಂಹಾದ್ರಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿತು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ ರಾಜಮೌಳಿ ಬಳಿಕ ಸೈ ಸಿನಿಮಾ ಘೋಷಿಸಿದರು. ನಿತಿನ್ ಮತ್ತು ಜನಿಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು.  

ಛತ್ರಪತಿ 

2005ರಲ್ಲಿ ಬಂದ ಛತ್ರಪತಿ ಸಿನಿಮಾ ರಾಜಮೌಳಿ ಸಕ್ಸಸ್‌ಗೆ ಮತ್ತೊಂದು ಗರಿ ಸಿಕ್ಕಿತು. ಪ್ರಭಾಸ್ ಮತ್ತು ಶ್ರೀಯಾ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ನಿರಾಶ್ರಿತ ಬಿಕ್ಕಟ್ಟಿನ ಕುರಿತಾದ ಸಾಹಸಮಯ ಸಿನಿಮಾ ಇದಾಗಿತ್ತು. 10 ಕೋಟಿ ಬಜೆಟ್ ನಲ್ಲಿ ತಯಾರಾದ ಛತ್ರಪತಿ ಸಿನಿಮಾ ಬರೋಬ್ಬರಿ 21 ಕೋಟಿ ರೂಪಾಯಿ ಗಳಿಕೆ ಮಾಡಿ ಗೆಲುವಿನ ನಗಾರಿ ಬಾರಿಸಿತ್ತು. ಬಳಿಕ ಬಂದ ವಿಕ್ರಮಾರ್ಕುಡು, ಯಮಗೊಂಡ ಸಿನಿಮಾಗಳು ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. 

ಹಾಲಿವುಡ್‌ ಮಾರ್ಕೆಟ್ ಮೇಲೆ ಕಣ್ಣಿಟ್ಟ ರಾಜಮೌಳಿ; ಮಹೇಶ್ ಬಾಬು ಚಿತ್ರಕ್ಕೆ 'ಆವೆಂಜರ್' ಸ್ಟಾರ್ ಕರೆತಂದ ನಿರ್ದೇಶಕ

ಮಗಧೀರ

2009ರಿಂದ ರಾಜಮೌಳಿ ಸಿನಿಮಾಗಳ ಮತ್ತೊಂದು ಯುಗ ಪ್ರಾರಂಭವಾಯಿತು ಎಂದರೇ ತಪ್ಪಾಗಲ್ಲ. ರಾಮ್ ಚರಣ್ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿದ್ದ ಮಗಧೀರಾಗೆ ಆಕ್ಷನ್ ಕಟ್ ಹೇಳಿದ್ದರು. ಕೇವಲ ತೆಲುಗು ಮಂದಿಯ ಗಮನ ಸೆಳೆಯುತ್ತಿದ್ದ ರಾಜಮೌಳಿ ಮಗಧೀರ ಬಳಿಕ ಉತ್ತರ ಭಾರತೀಯರು ತೆಲುಗು ಸಿನಿಮಾರಂಗದ ಕಡೆ ಮುಖ ಮಾಡುವಂತೆ ಮಾಡಿದರು.  44 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ಸುಮಾರು 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ವಿಶೇಷ ಎಂದರೆ ಆ ಸಿನಿಮಾಗಾಗಿ ರಾಜಮೌಳಿ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರೆಯಿತು. 

ಮರ್ಯಾದ ರಾಮಣ್ಣ, ಈಗ ಸಕ್ಸಸ್ 

2010ರಲ್ಲಿ ಬಂದ ಮರ್ಯಾದ ರಾಮಣ್ಣ ಸಿನಿಮಾ ಕೂಡ ರಾಜಮೌಳಿ ಸಕ್ಸಸ್ ಲಿಸ್ಟ್‌ಗೆ ಸೇರಿಕೊಂಡಿತ್ತು. ನಂತರ ಬಂದ ಈಗ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್. ಕಿಚ್ಚ ಸುದೀಪ್, ನಾನಿ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸೇಡು ತೀರಿಸಿಕೊಳ್ಳುವ ನೊಣದ ಕಥೆಯಾಗಿತ್ತು. ರಾಜಮೌಳಿ ಅವರ ನಿರ್ದೇಶನ, ವಿಷನ್ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದಲ್ಲದೇ ಕಾನ್ಸ್ ಮತ್ತು ಟೊರೊಂಟೊ ಆಫ್ಟರ್ ಡಾರ್ಕ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಪಡೆದಿತ್ತು.

ಬಾಹುಬಲಿ ಪಾರ್ಟ್ 1 ಮತ್ತು 2

ಈಗಾ ನಂತರ, ರಾಜಮೌಳಿ ಬಾಹುಬಲಿ ಫ್ರ್ಯಾಂಚೈಸ್‌ನಲ್ಲಿ ಕೆಲಸ ಮಾಡಿದರು. ಭಾಗ I 2015 ರಲ್ಲಿ ಬಿಡುಗಡೆಯಾಯಿತು. ಬಾಹುಬಲಿ ಸಿನಿಮಾ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಇಡೀ ವಿಶ್ವ ದಕ್ಷಿಣ ಭಾರತೀಯ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಭಾರತೀಯ ಸಿನಿಮಾರಂಗ ಎಂದರೆ ಕೇವಲ ಬಾಲಿವುಡ್ ಎಂದೇ ಬಿಂಬಿಸಲಾಯಿತು. ಎಲ್ಲಾ ಅಡೆತಡೆಗಳನ್ನು ಮೀರಿ ಬಾಹುಬಲಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ನಂತರ ಬಂದ ಪಾರ್ಟ್ -2 ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. 

ರಿವೀಲ್ ಆಯ್ತು ರಾಜಮೌಳಿ-ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಸೀಕ್ರೆಟ್!

ಆರ್ ಆರ್ ಆರ್ 

2022ರಲ್ಲಿ ರಿಲೀಸ್ ಆದ ಆರ್ ಆರ್ ಸಿನಿಮಾ ಮತ್ತೆ ದಾಖಲೆ ಬರೆಯಿತು. ಜೂ ಎನ್ ಟಿ ಅರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಆರ್ ಆರ್ ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಭಾರತೀಯ ಸಿನಿಮಾರಂಗದಲ್ಲಿ ಈ ಸಿನಿಮಾ ಬರೋಬ್ಬರಿ 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ರಾಜಮೌಳಿ ಮುಟ್ಟಿದೆಲ್ಲಾ ಚಿನ್ನ. ಸೋಲೇ ಇಲ್ಲದ ಜಕ್ಕಣ್ಣನ ಜೊತೆ ಕೆಲಸ ಮಾಡಲು ಯಾವ ಸ್ಟಾರ್ ತಾನೆ ಆಸೆ ಪಡಲ್ಲ. ಆದರೆ ಅಂತ ಅವಕಾಶ ಕೆಲವೇ ಸ್ಟಾರ್ ಗಳಿಗೆ ಮಾತ್ರ ಸಿಗುತ್ತಿದೆ. ಸದ್ಯ ರಾಜಮೌಳಿ ತೆಲುಗಿನ ಮತ್ತೋರ್ವ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ. ಸದ್ಯದಲ್ಲೇ ರಾಜಮೌಳಿ ಹೊಸ ಸಿನಿಮಾ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ