ಪ್ರೀತಿಯ ನೆಪದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ 4 ಮಕ್ಕಳ ತಾಯಿ ಸೀಮಾ ಹೈದರ್ 'ರಾ' ಏಜೆಂಟ್? ಏನಿದು ಟ್ವಿಸ್ಟ್?
ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಯಾರಿಗೆ ತಾನೆ ಗೊತ್ತಿಲ್ಲ. ಭಾರತದ ಯುವಕ ಸಚಿನ್ ಮೀನಾ ಜತೆ ಪಬ್‌ಜಿ ಆಡಿ ಲವ್ ಆಯಿತೆಂದು ತನ್ನ 4 ಮಕ್ಕಳ ಸಮೇತ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಮೇಲೆ ಒಂದೆಡೆ ಅನುಮಾನಗಳ ಹುತ್ತವೇ ಹರಡಿದೆ. ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದೂ ಆಗಿದೆ. ಈ ವೇಳೆ, ಆಕೆ ಬಳಿ ಇದ್ದ ಐದು ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್‌ಗಳು, ಬಳಕೆಯಾಗದ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿಯನ್ನು (Identity card) ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸೀಮಾ ಹೈದರ್ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎರಡು ವಿಡಿಯೋ ಕ್ಯಾಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ಈ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈಕೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಷ್ಟೂ ಅನುಮಾನದ ಹುತ್ತ ಸುಳಿದಾಡುತ್ತಲೇ ಇದೆ.
ಇದರ ನಡುವೆಯೇ ಈಕೆ ಪಾಕಿಸ್ತಾನದ ಏಜೆಂಟ್ ಎಂಬ ಬಗ್ಗೆ ಸಾಕ್ಷ್ಯಾಧಾರ ಕಲೆ ಹಾಕುತ್ತಿರುವಾಗಲೇ ಈಕೆ ಪಾಕ್ನ ಏಜೆಂಟ್ ಅಲ್ಲ, ಬದಲಿಗೆ ರಾ (RAW) ಏಜೆಂಟ್ ಎಂಬ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಈ ಟ್ವಿಸ್ಟ್ ಸಿಕ್ಕಿರೋದು ನಿಜವಾದ ಸ್ಟೋರಿಯಲ್ಲಿ ಅಲ್ಲ, ಬದಲಿಗೆ ಇವರಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಲಿರುವ ಸಿನಿಮಾದಲ್ಲಿನ ಕಥೆಯಿದು! ಈ ಇಬ್ಬರ ಲವ್ಸ್ಟೋರಿಗೆ ಸಂಬಂಧಿಸಿದಂತೆ ಸಿನಿಮಾ ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು. ಇದೀಗ ಅದರ ಟ್ರೇಲರ್ ಬಿಡುಗಡೆಯಾಗಿದೆ. ಸೀಮಾ ಹೈದರ್ ಮತ್ತು ಅವರ ಪತಿ ಸಚಿನ್ ಅವರ ಪ್ರೇಮಕಥೆಯ ಮೇಲೆ ತಯಾರಾಗುತ್ತಿರುವ ಚಿತ್ರಕ್ಕೆ ‘ಕರಾಚಿ ಟು ನೋಯ್ಡಾ’ ಎಂದು ಹೆಸರು ಇಡಲಾಗಿದ್ದು, ಚಿತ್ರದ ಥೀಮ್ ಸಾಂಗ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. 'ಚಲ್ ಪಡೆ ಹೈ ಹಮ್' 500 ಕ್ಕೂ ಹೆಚ್ಚು ಸಂಗೀತ ವೇದಿಕೆಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿ ಸೀಮಾ ಅವರನ್ನು ಪಾಕಿಸ್ತಾನದ ಬೇಹುಗಾರಿಕೆ ಮತ್ತು RAW ಏಜೆಂಟ್ ಎಂದು ಹೇಳಲಾಗಿದ್ದು, ಲಪ್ಪುವಿನ ಜೊತೆ ಫೇಮಸ್ ಡೈಲಾಗ್ಗಳೂ ಇವೆ.
ಅಂದು ಬಾಲಿವುಡ್ ಕ್ಯೂಟ್ ನಟಿ, ಇಂದು ಭಿಕ್ಷುಕಿ: ತುತ್ತು ಅನ್ನಕ್ಕೂ ಪರದಾಡಿದ ಸುಂದರಿಯ ಕರಾಳ ಸ್ಟೋರಿ ಇದು!
ಕರಾಚಿ ಟು ನೋಯ್ಡಾ ಟ್ರೇಲರ್ ಮೂರು ನಿಮಿಷಗಳನ್ನು ಹೊಂದಿದೆ. ಅದರ ಪ್ರಾರಂಭದಲ್ಲಿ ಕರಾಚಿಯಲ್ಲಿ ವಾಸಿಸುವ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತೋರಿಸಲಾಗಿದೆ. ಮುಮ್ತಾಜ್ (ಅವನ ಹೆಂಡತಿ) ಎಂದು ಅವನು ಭಾವಿಸುತ್ತಾನೆ. ನಂತರ ಆಕೆ ಭಾರತದ ಗೂಢಚಾರಿಕೆ ಎಂದು ಅವನಿಗೆ ಹೇಳಲಾಗುತ್ತದೆ. ಅಂದಹಾಗೆ ‘ಕರಾಚಿ ಟು ನೋಯ್ಡಾ’ ಚಿತ್ರವು 2024 ರಲ್ಲಿ ಬಿಡುಗಡೆಯಾಗಲಿದೆ. ತಯಾರಕರು ಇನ್ನೂ ದಿನಾಂಕವನ್ನು ಘೋಷಿಸಿಲ್ಲ. ಅಮಿತ್ ಜಾನಿ ಕಥೆ ಬರೆದಿದ್ದು, ಜಯಂತ್ ಸಿನ್ಹಾ ನಿರ್ದೇಶನ ಮತ್ತು ಚಿತ್ರಕಥೆ ಇದೆ. ಸಂಭಾಷಣೆಯನ್ನೂ ಅಮಿತ್ ಜಾನಿ ಬರೆದಿದ್ದಾರೆ.
ಇನ್ನು ಅಸಲಿ ಸೀಮಾ ಹೈದರ್ ಕುರಿತು ಹೇಳುವುದಾದರೆ, ಇವರು ಚಂದ್ರಯಾನ-3 ಸಮಯದಲ್ಲಿ ಭಾರತ ಯಶಸ್ವಿಯಾಗಲಿ ಎಂದು ಉಪವಾಸ ಮಾಡಿರುವುದಾಗಿ ಹೇಳಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದರು. ಸದ್ಯ ಇವರ ವಿಚಾರಣೆ ನಡೆಯುತ್ತಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರೆಸಲಾಗಿದೆ.
ಅಪ್ಪ-ಅಮ್ಮನಿಂದಾಗಿ ಕುಡಿತದ ದಾಸಳಾದೆ, ಹುಚ್ಚಿಯೂ ಆಗಿದ್ದೆ: ಶ್ರುತಿ ಹಾಸನ್ ಶಾಕಿಂಗ್ ಹೇಳಿಕೆ!