ಬಾಲಿವುಡ್ ಜೋಡಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಲ್ಲಿದ್ದ ಬ್ಯಾಗ್ ಒಂದು ಶಾಕ್ ನೀಡಿದೆ. ಆಗಿದ್ದೇನು?
ಸದಾ ಹಾಟ್, ಬೋಲ್ಡ್ ಲುಕ್ನಿಂದಲೇ ಫೇಮಸ್ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ತಮ್ಮ ಬೋಲ್ಡ್ ಫೋಟೋಶೂಟ್ಗಳನ್ನು ಶೇರ್ ಮಾಡಿ ಹಲವು ಬಾರಿ ಟ್ರೋಲ್ಗೆ ಒಳಗಾಗುವುದೂ ಇದೆ. ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು. ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ. ಕರಣ್ ಜೋಹರ್ ಸೇರಿದಂತೆ ಹಲವು ಗಾಡ್ಫಾದರ್ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ.
ಕೆಲ ದಿನಗಳ ಹಿಂದೆ ಫ್ಯಾನ್ಸ್ ಶಾಕ್ ಆಗುವಂಥ ಫೋಟೋ ಶೇರ್ ಮಾಡಿಕೊಂಡಿದ್ದರು. ಹೆಬ್ಬಾವಿನ ಜೊತೆ ಫೋಟೋಗೆ ನಗು ನಗುತ್ತಾ ಪೋಸ್ ಕೊಟ್ಟಿದ್ದು ಪೇಚಿಗೆ ಸಿಲುಕಿದ್ದರು. ಮುಖೇಶ್ ಅಂಬಾನಿಯವರ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಶಾ ಹಾವಿನ ಜೊತೆ ಪೋಸ್ ಕೊಟ್ಟಿದ್ದರು. ಇದರಿಂದ ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ನಂತರ ಫೋಟೋ ಡಿಲೀಟ್ ಮಾಡಿದ್ದರು. ಕೆಲ ವರ್ಷಗಳಿಂದ ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಸಂಬಂಧದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಾರೆ ಎನ್ನುವುದು ಈಗ ಹಳೆಯ ಸುದ್ದಿಯಾಗಿದೆ. ಕಳೆದ ವರ್ಷ ಇವರು ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯ ಅದೃಷ್ಟ ಪರೀಕ್ಷೆಯಲ್ಲೂ ಅನನ್ಯಾ ಪಾಂಡೆ ಫೇಲ್ ಆಗಿದ್ದು, ಬೋಲ್ಡ್ ಫೋಟೋಶೂಟ್ ಮಾಡಿಸುತ್ತಾ, ಫೇಮಸ್ ಆಗುತ್ತಿದ್ದಾರೆ.
ಇದೀಗ ಬಾಯ್ಫ್ರೆಂಡ್ ಆದಿತ್ಯ ಅವರ ಜೊತೆ ಎಲ್ಲಿಯೋ ಹಾರಿ ಹೋಗಿದ್ದ ಅನನ್ಯಾ ಪಾಂಡೆ ಏರ್ಪೋರ್ಟ್ನಲ್ಲಿ ಹೊರಗೆ ಬರುತ್ತಿಂದೆಯೇ ಶಾಕಿಂಗ್ ಘಟನೆ ನಡೆದಿದೆ. ಈ ಜೋಡಿ ಬರುತ್ತಿದ್ದಂತೆಯೇ ಎದುರಿಗೆ ಇದ್ದ ಅನುಮಾನಾಸ್ಪದ ಬ್ಯಾಗ್ ಕಂಡು ಅನನ್ಯಾ, ಆದಿತ್ಯ ಮಾತ್ರವಲ್ಲದೇ ಅಲ್ಲಿದ್ದವರೆಲ್ಲಾ ಕಂಗಾಲಾಗಿದ್ದಾರೆ. ಕೆಳಗೆ ನೋಡಿ ಕೆಳಗೆ ನೋಡಿ ಎನ್ನುತ್ತಿದ್ದಂತೆಯೇ ಯುವಕನೊಬ್ಬ ಆ ಬ್ಯಾಗ್ ಒಳಗೆ ಕೈಹಾಕಿದ. ಇದನ್ನು ಕಂಡು ಎಲ್ಲರೂ ಮತ್ತೆ ಬೆಚ್ಚಿಬಿದ್ದರು. ಆ ಬ್ಯಾಗ್ನಿಂದ ತನ್ನ ಮೊಬೈಲ್ ಫೋನ್ ತೆಗೆದ ಯುವಕ, ಬ್ಯಾಗ್ ಅನ್ನು ತೆಗೆದುಕೊಂಡು ಹೋದಾಗ, ಎಲ್ಲರೂ ಒಹ್. ಇಷ್ಟೇನಾ ಎನ್ನುವಂತೆ ನಿರಾಳವಾದರು. ಒಟ್ಟಿನಲ್ಲಿ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಈ ಅನುಮಾನಾಸ್ಪದ ಬ್ಯಾಗ್ ಸಾಕಷ್ಟು ಹಂಗಾಮ ಸೃಷ್ಟಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಅಂದಹಾಗೆ ಈ ಜೋಡಿಯ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರು ಕಳೆದ ವರ್ಷ ಕಾಫಿ ವಿತ್ ಕರಣ್ ಷೋನಲ್ಲಿ ತಮ್ಮ ರಿಲೇಶನ್ ಶಿಪ್ ಬಗ್ಗೆ ಹಿಂಟ್ ಕೂಡ ನೀಡಿದ್ದರು. ಇನ್ನಾದರೂ ಜೊತೆಯಾಗಿ ಕಾಲ ಕಳೆದದ್ದು, ಓಡಾಡಿದ್ದು ಸಾಕು, ಈಗಲಾದ್ರೂ ಮದುವೆಯಾಗಿ ಸಂಸಾರ ಮಾಡಿ ಅಂತಿದ್ದಾರೆ ಅಭಿಮಾನಿಗಳು. ಆದಿತ್ಯ ಕಪೂರ್ಗೂ ಮೊದಲದು ನಟಿ ಅನನ್ಯಾ ಪಾಂಡೆ (Ananya Panday) ಅವರು ಇಶಾನ್ ಕಟ್ಟರ್ ಜೊತೆ ಸಂಬಂಧದಲ್ಲಿದ್ದರು. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅನನ್ಯಾ ಪಾಂಡೆ. ‘ಖಾಲಿ ಪೀಲಿ’ ಮೊದಲಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ‘ಲೈಗರ್’ ಸಿನಿಮಾ ಕೂಡ ಅಷ್ಟು ಸದ್ದು ಮಾಡಲಿಲ್ಲ. ಇನ್ನು ಆದಿತ್ಯ ರಾಯ್ ಕಪೂರ್ ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಲಂಡನ್ ಡ್ರೀಮ್ಸ್’ ಅವರ ಮೊದಲ ಸಿನಿಮಾ. ಅನನ್ಯಾ ಪಾಂಡೆಗಿಂತ ಆದಿತ್ಯ ರಾಯ್ ಕಪೂರ್ ಶ್ರೀಮಂತ. ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್ ಖಾನ್ ಪುತ್ರಿಯ ಹೊಸ ವಿಷ್ಯ?