ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ

Published : May 21, 2024, 04:52 PM IST
ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ  ಮುನ್ನೆಲೆಗೆ ಬಂತು ಹಳೆಯ ಸಂಬಂಧ

ಸಾರಾಂಶ

ಶಾರುಖ್​  ಖಾನ್​ ಮತ್ತು ಪ್ರಿಯಾಂಕಾ ಚೋಪ್ರಾ ಸಂಬಂಧದಲ್ಲಿದ್ದರು ಎನ್ನುವ ವಿಷಯದ ನಡುವೆಯೇ ಮದುವೆಗೂ ನಟ ಪ್ರಪೋಸ್​ ಮಾಡಿರುವ ಹಳೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.   

ಬಾಲಿವುಡ್​ ನಟರಾದ ಶಾರುಖ್​ ಖಾನ್​ ಮತ್ತು ಪ್ರಿಯಾಂಕಾ ಚೋಪ್ರಾ ತಂತಮ್ಮ ಸಾಂಸಾರಿಕ ಜೀವನದಲ್ಲಿ ಖುಷಿಯಾಗಿಯೇ ಇದ್ದಾರೆ. ಸದ್ಯ ಬಾಲಿವುಡ್​ನಿಂದ ವಿಮುಖರಾಗಿ ಹಾಲಿವುಡ್​ಗೆ ಪ್ರಿಯಾಂಕಾ ಜಿಗಿದಿದ್ದರೆ, ವಯಸ್ಸು 58 ದಾಟಿದರೂ ಶಾರುಖ್​ ಯುವತಿಯರ ಜೊತೆ ರೊಮ್ಯಾನ್ಸ್​ ಮಾಡುತ್ತಲೇ ಮುಂದುವರೆದಿದ್ದಾರೆ. ಶಾರುಖ್​ ಮತ್ತು ಗೌರಿ ಅವರು ಮದುವೆಯಾಗಿ 32 ವರ್ಷಗಳು ಕಳೆದಿವೆ. ಅದೇ ವೇಳೆ, ಇನ್ನೊಂದೆಡೆ, ಪ್ರಿಯಾಂಕಾ ಚೋಪ್ರಾ ಅವರು ಮದುವೆಯಾಗಿ ಐದು ವರ್ಷಗಳು ಕಳೆದಿವೆ. ಈ ಎರಡೂ ಜೋಡಿ ತಂತಮ್ಮ ಸಂಸಾರವನ್ನು ಸುಖದಿಂದ ಕಳೆಯುತ್ತಿವೆ. ಆದರೆ ಇದೀಗ ಶಾರುಖ್​  ಖಾನ್​ ಮತ್ತು ಪ್ರಿಯಾಂಕಾ ಚೋಪ್ರಾ ಕುರಿತಾದ ಇಂಟರೆಸ್ಟಿಂಗ್​ ವಿಷಯವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಅದೇನೆಂದರೆ, ಹಿಂದೊಮ್ಮೆ ಶಾರುಖ್​ ಖಾನ್​ ಅವರು ನಟಿ ಪ್ರಿಯಾಂಕಾ  ಚೋಪ್ರಾ ಅವರಿಗೆ ನೀವು ನನ್ನನ್ನು ಮದುವೆಯಾಗುತ್ತಿರಾ ಎಂದು ಪ್ರಶ್ನಿಸಿದ್ದರು ಎನ್ನುವುದು!

ಇದ್ಯಾವಾಗಿನ ಘಟನೆ ಎನ್ನುವುದಕ್ಕೂ ಮುನ್ನ ಶಾರುಖ್​ ಮತ್ತು ಪ್ರಿಯಾಂಕಾ ಕುರಿತು ರಿಲೇಷನ್​ಷಿಪ್​ ಕುರಿತು ಹೇಳಬೇಕು. 2011ರಲ್ಲಿ ಡಾನ್ 2 ಚಿತ್ರದ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ಸಂಬಂಧ ತುಂಬಾ ಚರ್ಚೆಯಾಗುತ್ತಿತ್ತು. ಇವರಿಬ್ಬರು ಮದುವೆಯಾಗಿದ್ದರು ಎಂಬ ಬಗ್ಗೆ ಕೂಡ ಸುದ್ದಿಯಾಗಿತ್ತು. ಇವರಿಬ್ಬರ ಸಂಬಂಧ  ಅದೆಷ್ಟರ ಮಟ್ಟಿಗೆ ಚರ್ಚೆಯಾಗಿತ್ತೆಂದು, ಪ್ರಿಯಾಂಕಾ ಚೋಪ್ರಾ ಅವರಿಂದಾಗಿ, ಒಂದು ಘಟ್ಟದಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಖಾನ್​ ವಿಚ್ಛೇದನ ಪಡೆಯುವವರೆಗೂ ಹೋಗಿದ್ದರಂತೆ.   ಡಾನ್​ ಚಿತ್ರ ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿತ್ತು. ಚಿತ್ರ ಯಶಸ್ವಿಯಾದ ನಂತರ, ಇದೇ ಜೋಡಿಯ  'ಡಾನ್ -2' ಮತ್ತೆ ತೆರೆ ಮೇಲೆ ಬಂದಿತ್ತು. ಇದಾದ ಬಳಿಕ ಇವರಿಬ್ಬರೂ ಮದುವೆಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.  ಅಷ್ಟೇ ಅಲ್ಲದೇ, ಗೌರಿ ಅವರನ್ನು ಮದುವೆಯಾದ ಮೇಲೂ ಪ್ರಿಯಾಂಕಾ ಜೊತೆ, ಡೇಟಿಂಗ್​ ಮುಂದುವರೆಸಿದ್ದರು. ಇದರಿಂದ ಶಾರುಖ್​ ಮತ್ತು ಗೌರಿ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದೂ ಹೇಳಲಾಗುತ್ತದೆ.  

ಶಾರುಖ್​ ಖಾನ್​ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್​ ವಿಡಿಯೋ ವೈರಲ್​

ಆದರೆ ಇವರಿಬ್ಬರ ನಡುವಿನ ವಿಷಯ ಈಗ ಮುನ್ನೆಲೆಗೆ ಬಂದಿರುವುದು, 2000ರಲ್ಲಿ ನಡೆದ 'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ, ಪ್ರಿಯಾಂಕಾ ಚೋಪ್ರಾ ಆಗ ಸ್ಪರ್ಧಿಯಾಗಿದ್ದರು. ಮಿಸ್​ ಇಂಡಿಯಾ ಕಿರೀಟ ಕೂಡ ಪಡೆದುಕೊಂಡಿದ್ದರು. ಈ ಸಮಯದಲ್ಲಿ ಶಾರುಖ್ ಖಾನ್​ ಅವರು, ಪ್ರಿಯಾಂಕಾ ಅವರನ್ನು ಮದುವೆಯಾಗಲು ಪ್ರಪೋಸ್‌ ಮಾಡಿದ್ದರು. ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ.  ಅಷ್ಟಕ್ಕೂ ಆಗಿದ್ದೇನೆಂದರೆ,   ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್‌ -10 ತಲುಪಿದ್ದಾಗ ತೀರ್ಪುಗಾರರಲ್ಲಿ  ಒಬ್ಬರಾಗಿದ್ದರು ಶಾರುಖ್ ಖಾನ್. ಆಗ ಮಲೈಕಾ ಅರೋರಾ ಹೋಸ್ಟ್‌ ಆಗಿದ್ದರು. ಅದಾಗಲೇ ಅವರಿಬ್ಬರ ನಡುವೆ ಏನೋ ಶುರುವಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ತೀರ್ಪುಗಾರರಾಗಿದ್ದ ಶಾರುಖ್​ ಖಾನ್​ ಅವರು, ಆಗ  17 ವರ್ಷದವರಾಗಿದ್ದ ಪ್ರಿಯಾಂಕಾ ಚೋಪ್ರಾರಿಗೆ ಒಂದು ಪ್ರಶ್ನೆ ಕೇಳಿದ್ದರು. ಅದೇನೆಂದರೆ,   ಅನೇಕ ದಾಖಲೆಗಳನ್ನು ಪಡೆದಿರುವ,  ದೇಶದ  ಹೆಮ್ಮೆ ಅಜರುದ್ದೀನ್ ಅವರಂತಹ ಶ್ರೇಷ್ಠ ಕ್ರಿಕೆಟಿಗನನ್ನು ಮದುವೆಯಾಗಬಯಸುವಿರೋ ಅಥವಾ ನನ್ನಂಥ ಹಿಂದಿ ಚಲನಚಿತ್ರ ತಾರೆಯನ್ನೋ ಎಂದು ಕೇಳಿದ್ದರು.  ಅದಾಗಲೇ ಪ್ರಿಯಾಂಕಾ ಉತ್ತರಕ್ಕೆ ಬಿ-ಟೌನ್​ ಕಾತರದಿಂದ ಕಾದಿತ್ತು.

ಆದರೆ ಬಹಳ ಜಾಣ್ಮೆಯ ಉತ್ತರ ಕೊಟ್ಟಿದ್ದ  ಪ್ರಿಯಾಂಕಾ, ಭಾರತದ ಶ್ರೇಷ್ಠ ಆಟಗಾರನನ್ನು ನಾನು ಮದುವೆಯಾಗುತ್ತೇನೆ. ಏಕೆಂದರೆ ನಾನು ಮನೆಗೆ ಹಿಂದಿರುಗಿದಾಗ ಅಥವಾ ಅವನು ಮನೆಗೆ ಹಿಂದಿರುಗಿದಾಗ, ನಾವು ಪರಸ್ಪರ ಬೆಂಬಲಿಸುತ್ತೇವೆ. ನೀವು ನಿಮ್ಮ ಕೈಲಾದಷ್ಟು ಮಾಡಿದ್ದೀರಿ ಎಂದು ನಾನು ಅವನಿಗೆ ಹೇಳುತ್ತೇನೆ. ಗಂಡನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಆಟಗಾರರು ಬಲವಾದ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದಿದ್ದರು. ಆದರೆ ಇದು ಸುಳ್ಳು ಎಂದೇ ಹೇಳಲಾಗಿತ್ತು. ಇದಾದ ಬಳಿಕ ಶಾರುಖ್​ ಮತ್ತು ಪ್ರಿಯಾಂಕಾ, 'ಡಾನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಶಾರುಖ್​, ಕರಣ್​ ಜೋಹರ್​ ಸಲಿಂಗಕಾಮಿಯೆ? ವಿದೇಶಗಳ ಸಭೆಯ ಶಾಕಿಂಗ್​ ಹೇಳಿಕೆ ನೀಡಿದ ಗಾಯಕಿ ಸುಚಿತ್ರಾ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?