ದಿವ್ಯಾ ಭಾರತಿಯಂತೆ ಆಡಿದ್ದೇಕೆ ಶ್ರೀದೇವಿ..? ಗಾಯತ್ರಿ ಮಂತ್ರ ಪಠಿಸಿದ ಬಳಿಕ ಏನಾಯ್ತು?

ಶ್ರೀದೇವಿ ಜೊತೆ ಸಾಕಷ್ಟು ನಟರು, ನಿರ್ದೇಶಕರು ಕೆಲಸ ಮಾಡಿದ್ದಾರೆ. ಆದರೆ ಯಾವತ್ತೂ ಕೂಡ ಶ್ರೀದೇವಿ ಅವರು ಹಾಗೆ ತಪ್ಪಾಗಿ ಡೈಲಾಗ್ ಹೇಳಿದವರೇ ಅಲ್ಲ. ಅಷ್ಟೇ ಅಲ್ಲ.. ಅಂದು, ನಟಿ ಶ್ರೀದೇವಿ ನಟನೆ ಅದು ಅಲ್ಲವೇ ಅಲ್ಲ ಎನ್ನುವಂತಿತ್ತು.. 'ಲಾಡ್ಲಾ' ಸಿನಿಮಾದ ಇಡೀ ಶೂಟಿಂಗ್ ತಂಡ ಅಕ್ಷರಶಃ ನಡುಗತೊಡಗಿತು..

Sridevi Ladla movie Shooting Incident: why that happend

ಬಾಲಿವುಡ್ ಚಿತ್ರರಂಗದಲ್ಲಿ ನಟಿ ಶ್ರೀದೇವಿ (Sridevi) ಎಂಬ ಹೆಸರು ಅಜರಾಮರ. ನಟಿ ಶ್ರೀದೇವಿ ಬಾಲಿವುಡ್‌ ಚಿತ್ರರಂಗದ ಮೊಟ್ಟಮೊದಲ ಲೇಡಿ ಸೂಪರ್ ಸ್ಟಾರ್‌. ಅಂದಿನ ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ನಾಯಕರಷ್ಟೇ ಪ್ರಬಲ ಸ್ಥಾನ ಪಡೆದು ಸ್ಟಾರ್ ಆಗಿ ಮೆರೆದು ಇತಿಹಾಸ ಸೇರಿದ್ದಾರೆ ಸೌತ್ ಇಂಡಿಯಾ ಮೂಲದ ನಟಿ ಶ್ರೀದೇವಿ. ಅಂಥ ನಟಿ ಶ್ರೀದೇವಿಗೆ ಸಂಬಂಧಿಸಿದ ಸ್ಟೋರಿ ಇಲ್ಲಿದೆ, ಗಮನವಿಟ್ಟು ನೋಡಿ, ಆದರೆ, ದಯವಿಟ್ಟು ಹೆದರಿಕೊಳ್ಳಬೇಡಿ..!

ಹೌದು, ನಟಿ ಶ್ರೀದೇವಿ ಅವರು ಅದೊಂದು ದಿನ ಲಾಡ್ಲಾ ಶೂಟಿಂಗ್‌ನಲ್ಲಿ ಇದ್ದರು. ನಟಿ ಶ್ರೀದೇವಿ ತುಂಬಾ ಅನುಭವ ಇರುವ ಕಲಾವಿದೆ. ಅವರು ಯಾವುದೇ ದೃಶ್ಯದ ಡೈಲಾಗ್‌ಅನ್ನು ಒಂದು ಅಥವಾ ಎರಡು ಟೇಕ್ ತೆಗೆದುಕೊಂಡು ಮುಗಿಸುತ್ತಿದ್ದರು. ಆದರೆ, ಅಂದು ಅನಿಲ್‌ ಕಪೂರ್ ಜೋಡಿಯಾಗಿ ನಟಿಸುತ್ತಿದ್ದ ಶ್ರೀದೇವಿ ಅವರು ಒಂದು ಡೈಲಾಗ್‌ ಅನ್ನು ಪದೇಪದೇ ತಪ್ಪುತಪ್ಪಾಗಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಹೇಳುತ್ತಾ ಥೇಟ್ ದಿವ್ಯಾ ಭಾರತಿಯಂತೆ (Divya Bharathi) ಆಡತೊಡಗಿದ್ದರು. ಅದನ್ನು ನೋಡಿ ಸ್ವತಃ ನಿರ್ದೇಶಕರೂ ಸೇರಿದಂತೆ ಸೆಟ್‌ನಲ್ಲಿದ್ದ ಎಲ್ಲರೂ ಭಯಭೀತರಾಗಿದ್ದರು

Latest Videos

ಮದುವೆಯಾದ ಮೇಲೂ ಶ್ರೀದೇವಿ, ಹೇಮಾ ಮಾಲಿನಿ ಜೊತೆ ಅಫೇರ್ ಇಟ್ಟುಕೊಂಡಿದ್ದ ಈ ಹೀರೋ!

ಶ್ರೀದೇವಿ ಜೊತೆ ಸಾಕಷ್ಟು ನಟರು, ನಿರ್ದೇಶಕರು ಕೆಲಸ ಮಾಡಿದ್ದಾರೆ. ಆದರೆ ಯಾವತ್ತೂ ಕೂಡ ಶ್ರೀದೇವಿ ಅವರು ಹಾಗೆ ತಪ್ಪಾಗಿ ಡೈಲಾಗ್ ಹೇಳಿದವರೇ ಅಲ್ಲ. ಅಷ್ಟೇ ಅಲ್ಲ, ನಟನೆಯಲ್ಲಿ ಇನ್ನೂ ಅಷ್ಟಾಗಿ ಪ್ರಬುದ್ಧತೆ ಪಡೆಯದೇ ಇದ್ದ ಇನ್ನೂ ಹದಿಹರೆಯದ ವಯಸ್ಸಿನ ದಿವ್ಯಾ ಭಾರತಿ ತರಹವೇ ಆಡುತ್ತಿದ್ದರು. ನಟಿ ಶ್ರೀದೇವಿ ನಟನೆ ಅದು ಅಲ್ಲವೇ ಅಲ್ಲ ಎನ್ನುವಂತಿತ್ತು. ಅದನ್ನು ನೋಡಿ 'ಲಾಡ್ಲಾ' ಸಿನಿಮಾದ ಇಡೀ ಶೂಟಿಂಗ್ ತಂಡ ಅಕ್ಷರಶಃ ನಡುಗತೊಡಗಿತು. ಅದನ್ನು ನಟಿ ಶ್ರೀದೇವಿ ಅವರಿಗೆ ಹೇಳಿದಾಗ ಅವರೂ ಕೂಡ ಹೆದರಿಕೊಂಡರು.

ಹಾಗಿದ್ದರೆ ಆಗಿದ್ದೇನು? ಏನಾಯ್ತು ಅನ್ನೋದು ನಿಜವಾಗಿ ಅಲ್ಲಿ ಯಾರಿಗೂ ಅರ್ಥವಾಗಲಿಲ್ಲ. ಆದರೆ, ನಟಿ ಶ್ರೀದೇವಿ ಅವರಿಗಿಂತ ಮೊದಲು ಆ ಪಾತ್ರಕ್ಕೆ ಆಯ್ಕೆಯಾಗಿ ಅರ್ಧಕ್ಕಿಂತ ಹೆಚ್ಚು ಶೂಟಿಂಗ್ ಮುಗಿಸಿದ್ದರು ನಟಿ ದಿವ್ಯಾ ಭಾರತಿ. ಆದರೆ, ಶೂಟಿಂಗ್ ಮುಗಿಯುವುದಕ್ಕೂ ಮೊದಲೇ ನಟಿ ದಿವ್ಯಾ ಭಾರತಿ ನಿಧನರಾದರು. ಸಿನಿಮಾ ಮತ್ತೆ ಶೂಟಿಂಗ್ ಮಾಡಲು ನಿರ್ಧರಿಸಿದ ನಿರ್ಮಾಪಕರು, ದಿವ್ಯಾ ಭಾರತಿ ಜಾಗಕ್ಕೆ ಅವರಂತೆ ಇರುವ ನಟಿ ಶ್ರೀದೇವಿ ಅವರನ್ನು ಆಯ್ಕೆ ಮಾಡಿದರು. ಶೂಟಿಂಗ್ ಸಹಾ ಸಾಗಿತ್ತು. ಆದರೆ, ಆವತ್ತು ಹೀಗಾಯ್ತು.. ನಟಿ ಶ್ರೀದೇವಿ ಅವರು ದಿವ್ಯಾ ಭಾರತಿ ಅವರಂತೆ ಆಡತೊಡಗಿದ್ದರು.

ಸುದೀಪ್ ಈ ಮಾತು ಹೇಳಿದ್ದು ಯಾರಿಗೆ ? ನಿಮ್ಗೆ ಯಾರ ಹೆಸ್ರು ನೆನಪಾಗುತ್ತೆ?

ಇಡೀ ಚಿತ್ರತಂಡ ಒಟ್ಟಾಗಿ ಚರ್ಚೆ ಮಾಡಿ, ಕೊನೆಗೆ ಶೂಟಿಂಗ್ ಸ್ಥಳದಲ್ಲಿ ಗಾಯತ್ರಿ ಮಂತ್ರ ಪಠಿಸಿ, ಅಲ್ಲಿ ಹೋಮ-ಹವನ ಮಾಡಿಸಿ ಬಳಿಕ ಶೂಟಿಂಗ್ ಮುಂದುವರಿಸಲಾಯ್ತು. ಆ ಬಳಿಕ ನಟಿ ಶ್ರೀದೇವಿ ಎಂದಿನಂತೆ ಒಂದೇ ಟೇಕ್‌ನಲ್ಲಿ ಸೀನ್ ಓಕೆ ಮಾಡಿಬಿಟ್ಟರು. ಅಷ್ಟೇ ಅಲ್ಲ, ಅವರು ಅವರಾಗಿಯೇ ಇದ್ದರು, ದಿವ್ಯಾ ಭಾರತಿ ಅವರಂತೆ ಆಡಲಿಲ್ಲ. ಬಳಿಕ, ಎಲ್ಲವೂ ಸುಸೂತ್ರವಾಗಿ ನಡೆದು, 'ಲಾಡ್ಲಾ' ಸಿನಿಮಾ ಬಿಡುಗಡೆಯೂ ಆಗಿ ಸೂಪರ್ ಹಿಟ್ ಕೂಡ ಆಯ್ತು. ಆದರೆ, ಅಂದು ನಟಿ ಶ್ರೀದೇವಿಗೆ ಏನಾಗಿತ್ತು? ಯಾಕೆ ಅವರು ಮೊದಲಿದ್ದ ನಟಿ ದಿವ್ಯಾ ಭಾರತಿ ಅವರಂತೆ ಆಡಿದ್ದು?

ಈ ಪ್ರಶ್ನೆಗೆ ಇಂದಿಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೆ, ನಟಿ ದಿವ್ಯಾ ಭಾರತಿಗೂ ಶ್ರೀದೇವಿಗೂ ಲುಕ್‌ನಲ್ಲಿ ಬಹಳಷ್ಟು ಸಾಮ್ಯತೆ ಇತ್ತು. ಅಷ್ಟೇ ಅಲ್ಲ, ದಿವ್ಯಾ ಭಾರತಿ ಚಿತ್ರರಂಗಕ್ಕೆ ಬಂದಾಗ ಹಲವರು ಅವರನ್ನು ಶ್ರೀದೇವಿಯ 'ಕಾರ್ಬನ್ ಕಾಪಿ' ಎಂದೇ ಹೇಳುತ್ತಿದ್ದರಂತೆ. ಜೊತೆಗೆ, ಸಾವಿನಲ್ಲೂ ಕೂಡ ಇಬ್ಬರದೂ ಸಂಶಯಾಸ್ಪದ ಹಾಗೂ ಮಿರಾಕಲ್ ಎನ್ನುವಂತಹ ಸಾವೇ ಆಗಿದೆ. ದಿವ್ಯಾ ಭಾರತಿ ಬದಲು ಶ್ರೀದೇವಿ ಆ ಸಿನಿಮಾ ಮಾಡಿದ್ದು, ದಿವ್ಯಾ ಭಾರತಿಯಂತೆ ಒಂದು ಡೈಲಾಗ್ ಹೇಳುವಾಗ ಅವರಿಗಿಂತ ಸಾವಿರಪಟ್ಟು ಅನುಭವಸ್ಥೆ ನಟಿ ಶ್ರೀದೇವಿ, ಪದೇಪದೇ ತಪ್ಪು ಮಾಡಿದ್ದು ಎಲ್ಲವೂ ಕಾಕತಾಳೀಯವೇ? ಅಥವಾ, ಅದಕ್ಕೊಂದು ನಿರ್ಧಿಷ್ಟ ಕಾರಣವಿದೆಯೇ? ಬಲ್ಲವರಾರು..?

 

vuukle one pixel image
click me!