ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ಸತ್ಯವನ್ನು ಬೇಗನೇ ಹೇಳಬಾರದಿತ್ತೇ ಅಂತಿದಾರಲ್ಲ!

By Shriram BhatFirst Published Mar 31, 2024, 11:17 PM IST
Highlights

ಅಂದು ಶ್ರೀದೇವಿಯ ಸಾವಿನ ಸುತ್ತ ಅನುಮಾನದ ಹುತ್ತ ಕಂಡಿದ್ದು ಸುಳ್ಳಲ್ಲ. ಆದರೆ, ಪೊಲೀಸ್ ಇನ್ವೆಸ್ಟಿಗೇಶನ್‌ನಲ್ಲಿ ಅದೊಂದು ಮರ್ಡರ್‌ ಅಥವಾ ಸೂಸೈಡ್ ಅಲ್ಲ ಅಂದಮೇಲೂ ಇನ್ನೇನು ಹೇಳಲು ಸಾಧ್ಯ ಎಂದು ಗಂಡ ಬೋನಿ ಕಪೂರ್ ಸುಮ್ಮನಿದ್ದರೇನೋ!

ಭಾರತೀಯ ಚಿತ್ರರಂಗದ ದಂತಕಥೆ, ಸುರಸುಂದರಿ ಶ್ರೀದೇವಿ (Sridevi) ಇಂದು ನಮ್ಮೊಂದಿಗಿಲ್ಲ. 24 ಫೆಬ್ರವರಿ 20218ರಂದು ಇಹಲೋಕ ತ್ಯಜಿಸಿದ ನಟಿ ಶ್ರೀದೇವಿಯನ್ನು ಜಗತ್ತು ಇಂದಿಗೂ ಮರೆತಿಲ್ಲ. ಇಂದಿಗೆ ಯಾಕೆ, ಎಂದೂ ಕೂಡ ಇಡೀ ವಿಶ್ವ ಅತಿಲೋಕ ಸುಂದರಿ, ಅಭಿಜಾತ ಕಲಾವಿದೆ ಶ್ರೀದೇವಿ ಅವರನ್ನು ಮರೆಯಲು ಸಾಧ್ಯವೇ ಇಲ್ಲ. 13 ಆಗಸ್ಟ್ 1963ರಲ್ಲಿ ತಮಿಳುನಾಡಿನ ಮೀನಪಟ್ಟಿಯಲ್ಲಿ ಜನಿಸಿದ್ದ ಶ್ರೀದೇವಿ, ತಮ್ಮ 5ನೇ ವಯಸ್ಸಿನಲ್ಲೇ ಬಾಲಕಲಾವಿದೆಯಾಗಿ ಸಿನಿಮಾಗಳಲ್ಲಿ ನಟನೆ ಪ್ರಾರಂಭಿಸಿದವರು. ಬಳಿಕ ತಾರುಣ್ಯಕ್ಕೆ ಕಾಲಿಟ್ಟು ಹೀರೋಯನ್‌ ಆಗಿ ಅಕ್ಷರಶಃ ಬಾಲಿವುಡ್ ಚಿತ್ರರಂಗವನ್ನು ಆಳಿದವರು.

ಅಂಥ ಮನಮೋಹಕ ನಟಿ ಶ್ರೀದೇವಿ ತಮ್ಮ 54ನೇ ವಯಸ್ಸಿನಲ್ಲೇ ನಿಧನರಾಗಲು ಕಾರಣವೇನು? ಅದೂ ಕೂಡ ದುರಂತ ಸಾವು ಯಾಕಾಯ್ತು ಮತ್ತು ಹೇಗಾಯ್ತು ಎಂಬುದಕ್ಕೆ ಸರಿಯಾದ ಉತ್ತರ ಸಿಗದೇ ಶ್ರೀದೇವಿ ಅಭಿಮಾನಿಗಳು ಇಂದಿಗೂ ಕಂಗಾಲಾಗಿ ಕೂತಿದ್ದರು. ಪೊಲೀಸ್ ತನಿಖೆಯಲ್ಲಿ ನಟಿ ಶ್ರೀದೇವಿ ಅವರದು ಸಹಜ ಸಾವು, ಅಂದರೆ ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ರಿಪೋರ್ಟ್ ಬಂದಿತ್ತು. ಆದರೆ, ದುಬೈನಲ್ಲಿ ಬಾತ್‌ ಟಬ್‌ನಲ್ಲಿ ಬಿದ್ದ ಸ್ಥಿತಿಯಲ್ಲಿ ಶ್ರೀದೇವಿ ಶವ ಪತ್ತೆಯಾಗಿದ್ದು ಕೆಲವರ ಹಲವು ಸಂಶಯಗಳಿಗೆ ಕಾರಣವಾಗಿತ್ತು. 

ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?

ಅಂದು ಶ್ರೀದೇವಿಯ ಸಾವಿನ ಸುತ್ತ ಅನುಮಾನದ ಹುತ್ತ ಕಂಡಿದ್ದು ಸುಳ್ಳಲ್ಲ. ಆದರೆ, ಪೊಲೀಸ್ ಇನ್ವೆಸ್ಟಿಗೇಶನ್‌ನಲ್ಲಿ ಅದೊಂದು ಮರ್ಡರ್‌ ಅಥವಾ ಸೂಸೈಡ್ ಅಲ್ಲ ಅಂದಮೇಲೂ ಇನ್ನೇನು ಹೇಳಲು ಸಾಧ್ಯ ಎಂದು ಗಂಡ ಬೋನಿ ಕಪೂರ್ (Boney Kapoor) ಸುಮ್ಮನಿದ್ದರೇನೋ! ಅಥವಾ, ಬಹುಶಃ ಅವರ ಪತ್ನಿ ಶ್ರೀದೇವಿ ಸಾವಿನ ಬಗೆಗಿನ ಹಲವರ ಸಂಶಯ ಬೋನಿ ಕಪೂರ್ ತನಕ ಹೋಗಿ ತಲುಪಿರಲಿಲ್ಲವೇನೋ! ಆದರೆ, ಇತ್ತಿಚೆಗೆ, ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸುತ್ತ ನಿರ್ಮಾಪಕ ಹಾಗು ದಿವಂಗತ ಶ್ರೀದೇವಿ ಪತಿ ಬೋನಿ ಕಪೂರ್ ಆ ಪ್ರಶ್ನೆಗೆ ಉತ್ತರಿಸಿದ್ದಾರೆ. ಆ ಮೂಲಕ ಹಲವರ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 

ಅಮೃತಂ ಕೊಟ್ಟ ಕಾಟಕ್ಕೆ ಬೇಸತ್ತು ಅತ್ಮಹತ್ಯೆ ಮಾಡಿಕೊಂಡರೇ ನಟಿ ಮಂಜುಳಾ; ಅಂಥ ದುರಂತ ಸಾವಿನ ರಹಸ್ಯವೇನು?

ಹಾಗಿದ್ದರೆ ಬೋನಿ ಕಪೂರ್ ಹೇಳಿದ್ದೇನು? 'ನನ್ನ ಪತ್ನಿ, ನಟಿ ಶ್ರೀದೇವಿ ಅವರಿಗೆ ತಮ್ಮ ಅನುಪಮ ಸೌಂದರ್ಯದ ಬಗ್ಗೆ ಹೆಮ್ಮೆಯಿತ್ತು ಹಾಗು ಅವರಿಗೆ ಆ ಬಗ್ಗೆ ಅರಿವೂ ಇತ್ತು. ಅಂದರೆ, ಅವರು ತುಂಬಾ ಸುಂದರವಾಗಿ ಇದ್ದಾರೆ ಹಾಗೂ ಅದನ್ನು ಕಾಪಾಡಿಕೊಳ್ಳಬೇಕು ಎಂಬ ಜ್ಞಾನವಿತ್ತು. ಹೀಗಾಗಿ ವಯಸ್ಸು ಹೆಚ್ಚುತ್ತಾ ಹೋದಂತೆ, ಸಹಜವಾಗಿ ಕುಂದುತ್ತಿರುವ ತಮ್ಮ ಸೌಂದರ್ಯದ ಬಗ್ಗೆ ಅವರು ಆತಂಕ ಹೊಂದಿದ್ದರು. ಸ್ಲಿಮ್ ಆಗಿರಲು, ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಲು ಡಾಕ್ಟರ್ ಸಲಹೆಯನ್ನೂ ಮೀರಿ ವಿಪರೀತ ಪಥ್ಯ ಮಾಡುತ್ತಿದ್ದರು, ಹಲವು ದಿನ ಉಪವಾಸ ಇರುತ್ತಿದ್ದರು.

ಸರಿತಾ ಬಿಟ್ಟರೆ ಸುಧಾರಾಣಿ ನನ್ನ ಫೇವರೆಟ್ ನಟಿ; ಹೀಗಂದಿದ್ರು ಕನ್ನಡದ ಮೋಸ್ಟ್ Top ಸ್ಟಾರ್ ನಟ! 

ಉಪವಾಸ ಹಾಗೂ ಡಯೆಟ್ ಕಾರಣಕ್ಕೆ ಅವರ ಬಿಪಿ ಅಗಾಗ ತುಂಬಾ ಲೋ ಆಗುತ್ತಿತ್ತು. ಆದರೆ, ಸ್ಲಿಮ್ ಆಗುವ ಹುಚ್ಚಿಗೆ ಬಿದ್ದಿದ್ದ ಶ್ರೀದೇವಿ ಅದನ್ನು ನಿರ್ಲಕ್ಷಿಸಿ ತಮ್ಮ ದೇಹದಂಡನೆಯನ್ನು ಮುಂದುವರೆಸಿದ್ದರು. ಅಂದು ದುಬೈನಲ್ಲಿದ್ದಾಗಲೂ (Dubai) ಅಷ್ಟೇ, ಉಪವಾಸ ಉಳಿದಿದ್ದ ಶ್ರೀದೇವಿಯ ಬಿಪಿ ವಿಪರೀತ ಲೋ ಆಗಿ ಅವರು ಸ್ನಾನಕ್ಕೆ ಹೋದಲ್ಲೇ ಬಾತ್‌ಟಬ್‌ ಪಕ್ಕ ಇದ್ದಾಗಲೇ ತಲೆಸುತ್ತಿ ಬಿದ್ದಿದ್ದಾರೆ.

'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?

ಬಾತ್‌ಟಬ್‌ನಲ್ಲಿ ಬಿದ್ದ ಅವರಿಗೆ ಮತ್ತೆ ಮೇಲೇಳಲಾಗದೇ ಅಲ್ಲೇ ಪ್ರಾಣಪಕಷಿ ಹಾರಿಹೋಗಿದೆ. ಅದೆಲ್ಲವನ್ನೂ ಪೊಲೀಸರು ತಿಳಿದುಕೊಂಡೇ ಸಹಜ ಸಾವು ಎಂಬ ರಿಪೋರ್ಟ್‌ ನೀಡಿದ್ದು. ಅನಾರೋಗ್ಯದ ಹೊರತೂ ಮತ್ತೇನೂ ಕಾರಣವಿರಲಿಲ್ಲ' ಎಂದಿದ್ದಾರೆ ಬೋನಿ ಕಪೂರ್. 

click me!