ನಟಿ ನಗ್ಮಾ ಒಂದು ಕಾಲದಲ್ಲಿ ಸೌತ್ ಇಂಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ. ಮೆಘಾ ಸ್ಟಾರ್ ಚಿರಂಜೀವಿ ಜತೆ ;ಘರಾನಾ ಮೊಗಡು' ಚಿತ್ರದಲ್ಲಿ ನಟಿಸಿದ ಮೇಲಂತೂ ನಗ್ಮಾ ಹೆಸರು ಗಗನಕ್ಕೆಏ ತಲುಪಿತ್ತು.
ನಟಿ ನಗ್ಮಾ (Nagma)ಒಂದು ಕಾಲದಲ್ಲಿ ಸೌತ್ ಇಂಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ. ಮೆಘಾ ಸ್ಟಾರ್ ಚಿರಂಜೀವಿ ಜತೆ ;ಘರಾನಾ ಮೊಗಡು' ಚಿತ್ರದಲ್ಲಿ ನಟಿಸಿದ ಮೇಲಂತೂ ನಗ್ಮಾ ಹೆಸರು ಗಗನಕ್ಕೆಏ ತಲುಪಿತ್ತು. ಆದರೆ, ಸಿನಿಮಾ ಆಯ್ಕೆಯಲ್ಲಿ ಪದೇಪದೇ ಎಡವಿದ ಜತೆಗೆ, ಪರ್ಸನಲ್ ಲೈಫಿನಲ್ಲಿ ಕೂಡ ನಟಿ ನಗ್ಮಾ ಎಡವಿಬಿಟ್ಟರು. ಅಲ್ಲಿಂದ ನಟಿ ನಗ್ಮಾ ಡೌನ್‌ಫಾಲ್ ಶುರುವಾಯಿತು. ಕನ್ನಡ, ತಮಿಳು ಸೇರಿದಂತೆ ತೆಲುಗು ಚಿತ್ರರಂಗದಲ್ಲಿ ತುಂಬಾ ಬೇಗನೆ ಮಿಂಚಿದ್ದ ನಟಿ ನಗ್ಮಾ, ಅಷ್ಟೇ ಬೇಗ ತೆರೆಮರೆಗೆ ಸರಿದುಬಿಟ್ಟರು. ಹಾಗಿದ್ದರೆ ನಟಿ ನಗ್ಮಾ ಲೈಫಿನಲ್ಲಿ ಅದೇನು ದುರಂತ ಸಂಭವಿಸಿತು?
ಹೌದು, ನಟಿ ನಗ್ಮಾ ನಟನೆ ಮಾಡುವುದರ ಜತೆಗೆ ಮದುವೆಯಾಗಿದ್ದ ನಟರೊಬ್ಬರ ಜೊತೆ ಸಂಬಂಧ ಶುರುವಿಟ್ಟುಕೊಂಡರು ಎನ್ನಲಾಗಿದೆ. ನಟ ಆರ್ ಶರತ್‌ಕುಮಾರ್ (R Sarathkumar)ಜೋಡಿಯಾಗಿ ಸಿನಿಮಾದಲ್ಲಿ ನಟಿಸಿದ ನಗ್ಮಾ ಅವರನ್ನು ನಿಜ-ಜೀವನದಲ್ಲಿ ಕೂಡ 'ಲವ್' ಮಾಡಿಬಿಟ್ಟರು. ಅದನ್ನು ಅರಿತ ಅವರ ಪತ್ನಿ ಛಾಯಾ ಗಂಡ ಶರತ್ ಕುಮಾರ್ ಅವರಿಂದ ಡಿವೋರ್ಸ್ ತೆಗೆದುಕೊಂಡುಬಿಟ್ಟರು. ಸುಂದರ ಸಂಸಾರವನ್ನು ಹಾಳು ಮಾಡಿದವಳು ಎಂಬ ಅಪಖ್ಯಾತಿಗೆ ನಟಿ ನಗ್ಮಾ ಪಾತ್ರರಾದರು.
'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?
ಅದರಿಂದ ಬೇಸತ್ತ ನಗ್ಮಾ ಶರತ್ ಕುಮಾರ್ ಅವರಿಂದ ಅಂತರ ಕಾಯ್ದುಕೊಂಡು ಒಂಟಿಯಾಗಿ ಬದುಕಲು ಶುರು ಮಾಡಿದರು. ಆದರೆ, ಅಲ್ಲಿಗೇ ತಮ್ಮ ಪ್ರೇಮ್ ಕಹಾನಿಯನ್ನು ನಿಲ್ಲಿಸದ ನಟಿ ನಗ್ಮಾ, ಅಂದಿನ ಕಾಲದಲ್ಲಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ ಸೌರವ್ ಗಂಗೂಲಿ (Sourav Ganguly) ಜತೆ ಸಂಬಂಧ ಶುರುವಿಟ್ಟುಕೊಂಡರು ಎನ್ನಲಾಗಿದೆ. ಅದು ಸುದ್ದಿಯಾಗುತ್ತಿದ್ದಂತೆ ಮತ್ತೆ ರಾಮಾಯಾಣ-ಮಹಾಭಾರತ ಶುರುವಾಗುವುದು ಬೇಡ ಎಂದು ಗಂಗೂಲಿ ಅವರಿಂದಲೂ ದೂರವಾಗಿ ಮತ್ತೆ ಒಂಟಿ ಜೀವನಕ್ಕೆ ಮರಳಿದರು ನಟಿ ನಗ್ಮಾ.
ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?
ಅಂದಿನಿಂದ ಇಂದಿನವರೆಗೂ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ ನಗ್ಮಾ. ತಮಿಳು ಖ್ಯಾತ ನಟಿ ಜ್ಯೋತಿಕಾರ (Jyothika) ಅಕ್ಕ ಈ ನಗ್ಮಾ ಎಂಬುದು ಗಮನಿಸಬೇಕಾದ ಸಂಗತಿ. ಮದುವೆಯಾದವರೊಂದಿಗೇ ನಟಿ ನಗ್ಮಾ ಸಂಬಂಧ ಬೆಳೆಸಿದ್ದರಿಂದ, ಅತ್ತ ಸ್ನೇಹಿತರು ಕೈ ತಪ್ಪಿ ಇತ್ತ ಸಿನಿಮಾ ಕೂಡ ಇಲ್ಲದೇ ನಟಿ ನಗ್ಮಾ ಸಾಕಷ್ಟು ಕಷ್ಟ ಹಾಗು ಒಂಟಿತನ ಅನುಭವಿಸಿದರು. ಆದರೆ, ಮಾಡುವುದೇನು ಎಂಬಂತೆ, ಇಂದಿಗೂ ಕೂಡ ಮಾಡಿದ ತಪ್ಪಿಗೆ ಪರಿಣಾಮ ಅನುಭವಿಸುತ್ತಿದ್ದಾರೆ.
ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?
ಸಿನಿಮಾ ಇಲ್ಲದಿದ್ದರೇನಂತೆ, ರಾಜಕೀಯದಲ್ಲಿ ಸಾಧನೆ ಮಾಡಿದರಾಯಿತು ಎಂದು ಬಂದ ನಗ್ಮಾಗೆ ಅಲ್ಲೂ ಕೂಡ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಅತ್ತ ಚಿತ್ರರಂಗವೂ ಇಲ್ಲ, ಇತ್ತ ರಾಜಕೀಯರಂಗವೂ ಇಲ್ಲದೇ ಸದ್ಯ ತ್ರಿಶಂಕು ಸ್ಥಿತಿಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ ನಟಿ ನಗ್ಮಾ.