ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡ್ತಿರೋ 'ಆಡುಜೀವಿತಂ' ಒಟಿಟಿ ರಿಲೀಸ್ ಡೇಟ್ ಮತ್ತಿತರೆ ವಿವರ..

Published : Mar 31, 2024, 04:17 PM IST
ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡ್ತಿರೋ 'ಆಡುಜೀವಿತಂ' ಒಟಿಟಿ ರಿಲೀಸ್ ಡೇಟ್ ಮತ್ತಿತರೆ ವಿವರ..

ಸಾರಾಂಶ

ಪೃಥ್ವಿರಾಜ್ ಸುಕುಮಾರನ್ ಅವರ 'ಆಡುಜೀವಿತಂ' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಪಡೆಯುತ್ತಿದೆ. ಇದು ಯಾವ ಒಟಿಟಿ ಪ್ಲ್ಯಾಟ್‌ಫಾರಂನಲ್ಲಿ ಯಾವಾಗ ಬಿಡುಗಡೆಯಾಗಲಿದೆ?

ಪೃಥ್ವಿರಾಜ್ ಸುಕುಮಾರನ್ ಅವರ 'ಆಡುಜೀವಿತಂ' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಪಡೆಯುತ್ತಿದೆ. ಮಾ.28ರಂದು ಬಿಡುಗಡೆಯಾಗಿರುವ ಈ ಮಲಯಾಳಂ ಚಿತ್ರವು ಸೆಲೆಬ್ರಿಟಿಗಳು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ. ಭಾರತದಲ್ಲಿ ತನ್ನ ಆರಂಭಿಕ ದಿನದಲ್ಲಿ ರೂ 7 ಕೋಟಿಗಳಿಗಿಂತ ಹೆಚ್ಚು ಮತ್ತು ವಿಶ್ವಾದ್ಯಂತ ರೂ 15 ಕೋಟಿಗಿಂತ ಹೆಚ್ಚು ಸಂಗ್ರಹಿಸಲು ಯಶಸ್ವಿಯಾಗಿದೆ.

ವರದಿಯ ಪ್ರಕಾರ, ಆಡುಜೀವಿತಂ ಚಿತ್ರವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಥಿಯೇಟ್ರಿಕಲ್ ರನ್‌ನ ನಂತರ ಸ್ಟ್ರೀಮ್ ಮಾಡಲು ನಿರ್ಧರಿಸಲಾಗಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ 45 ದಿನಗಳ ಬಳಿಕ ಇದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. 

ಎಕ್ಟೆಂಡೆಡ್ ರನ್ ಟೈಂ
ಮೂಲತಃ 3 ಗಂಟೆ ಮತ್ತು 30 ನಿಮಿಷಗಳನ್ನು ಮೀರಿದ ರನ್‌ಟೈಮ್‌ನೊಂದಿಗೆ ಭಾವನಾತ್ಮಕವಾಗಿ ಆವೇಶದ ನಿರೂಪಣೆಯಾಗಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಆದರೆ, ಚಿತ್ರವು ಸಾಮಾನ್ಯ ಚಲನಚಿತ್ರಗಳ ಅವಧಿಯನ್ನು ಮೀರಿರುವುದರಿಂದ ಸಾಕಷ್ಟು ಕತ್ತರಿ ಹಾಕಿ ಥಿಯೇಟರ್‌ಗೆ ಬಿಡುಗಡೆ ಮಾಡಲಾಗಿದೆ. ಆದರೆ ಒಟಿಟಿಯಲ್ಲಿ ಚಿತ್ರದ ಸಂಪೂರ್ಣ ಕತೆಯನ್ನು ನೋಡಬಹುದಾಗಿದೆ. 

'ಆಡುಜೀವಿತಂ' ಖಂಡಿತವಾಗಿಯೂ ಮಾಲಿವುಡ್‌ನ ಬಹುಮುಖ ನಟ ಪೃಥ್ವಿರಾಜ್ ಸುಕುಮಾರನ್‌ರ ಪುನರಾಗಮನವನ್ನು ಸೂಚಿಸುತ್ತದೆ ಮತ್ತು ಚಿತ್ರಕ್ಕಾಗಿ ಅವರ ಶ್ರಮವು ಅಂತಿಮವಾಗಿ ಉತ್ತಮ ಪ್ರತಿಫಲವನ್ನು ನೀಡಿದೆ.

2008ರಿಂದ ಚಿತ್ರ ನಿರ್ಮಾಣ
ಚಲನಚಿತ್ರದಲ್ಲಿ, ಪೃಥ್ವಿರಾಜ್ ಸುಕುಮಾರನ್ ಸೌದಿ ಅರೇಬಿಯಾಕ್ಕೆ ಮಲಯಾಳಿ ವಲಸೆ ಕಾರ್ಮಿಕನಾಗಿ ಹೋಗಿ ಗುಲಾಮಗಿರಿಗೆ ಒಳಗಾಗುವ ಪಾತ್ರ ಅಭಿನಯಿಸಿದ್ದಾರೆ. ಸುಮಾರು 16 ವರ್ಷಗಳಿಂದ ಚಿತ್ರ ನಿರ್ಮಾಣವಾಗಿದೆ. ಮೂಲತಃ 2008ರಲ್ಲೇ ಈ ಚಿತ್ರಕ್ಕೆ ಪೃಥ್ವಿರಾಜ್ ಒಪ್ಪಿಗೆ ನೀಡಿದ್ದರು. 

ನಿಮಗೆ 3 ಈಡಿಯಟ್ಸ್ ಇಷ್ಟವಾಗಿದ್ರೆ ಈ 7 ಚಿತ್ರಗಳನ್ನು ಮಿಸ್ ಮಾಡ್ದೇ ನೋಡಿ..

ಮಲಯಾಳಂ ಹೊರತಾಗಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಆವೃತ್ತಿಗಳಲ್ಲಿ ಚಿತ್ರವನ್ನು ನೋಡಬಹುದಾಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?