
ಕನ್ನಡದ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ಶ್ರೀಲೀಲಾ ಎಷ್ಟರ ಮಟ್ಟಿಗೆ ಖ್ಯಾತಿಗಳಿಸಿದ್ದಾರೆ ಎಂದರೆ ರಶ್ಮಿಕಾ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಜಾಗಕ್ಕೆ ಈಗ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಶ್ಮಿಕಾ ಹೊರ ನಡೆದ ಜಾಗಕ್ಕೆ ಇದೀಗ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ಹೌದು ರಶ್ಮಿಕಾ ತೆಲುಗು ಸ್ಟಾರ್ ನಿತಿನ್ ಜೊತೆ ಸಿನಿಮಾ ಮಾಡಬೇಕಿತ್ತು. ಆಗಲೇ ಸಿನಿಮಾ ಕೂಡ ಅನೌನ್ಸ್ ಆಗಿತ್ತು. ವೆಂಕಿ ಕುಡುಮಲಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ.
ರಶ್ಮಿಕಾ ಜಾಗಕ್ಕೆ ಶ್ರೀಲಿಲಾ ಕಾಲಿಟ್ಟಿದ್ದಾರೆ. ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ನಿರ್ದೇಶಕ ವೆಂಕಿ ಕುಡುಮಲಾ ಕನ್ನಡದ ನಟಿ ಶ್ರೀಲೀಲಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿ ಶ್ರೀಲೀಲಾ ಜೊತೆ ಮಾತುಕತೆ ನಡೆಸಿದ್ದಾರೆ. ಶ್ರೀಲೀಲಾ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಶ್ರೀಲೀಲಾ ತೆಲುಗು ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆ ಕೂಡ ನಟಿಸಿದ್ದಾರೆ. ಇದೀಗ ನಿತಿನ್ ಸಿನಿಮಾಗೆ ಆಯ್ಕೆ ಆಗಿದ್ದಾರೆ.
ತೆಲುಗು ಸ್ಟಾರ್ ನಿತಿನ್ ಸಿನಿಮಾದಿಂದ ರಶ್ಮಿಕಾ ಔಟ್: ಕಾರಣವೇನು?
ರಶ್ಮಿಕಾ ಈ ಮೊದಲು ವೆಂಕಿ ಕುಡುಮಲಾ ಮತ್ತು ನಿತಿನ್ ಜೊತೆ ಭೀಷ್ಮಾ ಸಿನಿಮಾದಲ್ಲಿ ಕೆಲಸ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆ ಸಿನಿಮಾ ಸಕ್ಸಸ್ ಬಳಿಕ ಅದೇ ತಂಡ ಮತ್ತೆ ಒಂದಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ, ಕುತೂಹಲ ಹೆಚ್ಚಾಗಿತ್ತು. ಇನ್ನೇನು ಈ ಸಿನಿಮಾ ಪ್ರಾರಂಭವಾಗಬೇಕು ಎನ್ನುವಾಗಲೇ ರಶ್ಮಿಕಾ ಹೊರಬಂದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಇದೀಗ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.
ಶ್ರೀಲೀಲಾ ಕೊನೆಯದಾಗಿ ಧಮಾಕ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅನೇಕ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಸ್ಥಾನವನ್ನು ಶ್ರೀಲೀಲಾ ಆಕ್ರಮಿಸಿಕೊಂಡಿದ್ದಾರೆ.
10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಕನ್ನಡತಿ ಶ್ರೀಲೀಲಾ: ಕಾರಣ ಏನ್ ಗೊತ್ತಾ?
ಅಂದಹಾಗೆ ರಶ್ಮಿಕಾ ಈ ಸಿನಿಮಾದಿಂದ ಹೊರ ನಡೆದಿರುವ ಈ ನಿರ್ಧಾರ ಪರಸ್ಪರ ನಿರ್ಧಾರವಾಗಿದೆ ಎನ್ನಲಾಗಿದೆ. ಡೇಟ್ ಸಮಸ್ಯೆಯಿಂದ ರಶ್ಮಿಕಾ ಹೊರಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ರಶ್ಮಿಕಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ರಶ್ಮಿಕಾ ಈಗಾಗಲೇ ಈ ಬಗ್ಗೆ ನಿರ್ಮಾಪಕರ ಜೊತೆ ಚರ್ಚೆ ಮಾಡಿದ್ದು ಸಿನಿಮಾದಿಂದ ಹೊರಗುಳಿಸುವ ಬಗ್ಗೆ ಮಾನಾಡಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.