SPB ಆರೋಗ್ಯ ಗಂಭೀರ, ಲೈಫ್ ಸಪೋರ್ಟ್‌ನಲ್ಲಿ ದಿಗ್ಗಜ ಗಾಯಕ

By Suvarna News  |  First Published Sep 24, 2020, 7:49 PM IST

ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕನ ಆರೋಗ್ಯ ಸ್ಥಿತಿ ಗಂಭೀರ/ ಚೆನ್ನೈನ ಆಸ್ಪತ್ರೆಯಿಂದ ಮಾಹಿತಿ/ ಹಿರಿಯ ಗಾಯಕ SPB ಚೇತರಿಕೆಗೆ ಜಗತ್ತಿನೆಲ್ಲೆಡೆ ಪ್ರಾರ್ಥನೆ


ಚೆನ್ನೈ(ಸೆ. 24) ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(74) ಆರೋಗ್ಯ  ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ತಿಳಿಸಿದೆ.

ಕೊರೋನಾ ದೃಢಪಟ್ಟಿದ್ದರಿಂದ ಕಳೆದ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದ  ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಈಗಲೂ ಇಸಿಎಂಒ ಮತ್ತು ಲೈಫ್ ಸಪೋರ್ಟ್ ನಲ್ಲಿದ್ದಾರೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿದೆ. ಕೊರೋನಾದಿಂದ ಎಸ್‌ಪಿಬಿ ಮುಕ್ತರಾಗಿದ್ದಾರೆ ಎಂದು ಹೇಳಲಾಗಿತ್ತು.

Latest Videos

undefined

ಒಂದೇ ದಿನ 24 ಹಾಡು ಹಾಡಿದ್ದ ಗಾಯಕ

ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿದೆ. ಆಸ್ಪತ್ರೆಯ ತಜ್ಞರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಎಸ್‌ಪಿಬಿ ಶೀಘ್ರ ಗುಣಮುಖರಾಗಲಿ ಎಂದು ದೇಶ ವಿದೇಶಗಳಿಂದ ಅಭಿಮಾನಿಗಳು ಹಾರೈಸಿದ್ದರು. ಸ್ಯಾಂಡಲ್ ವುಡ್ ನ ದಿಗ್ಗಜರು ಸಹ ಒಂದು ಕಡೆ ಸೇರಿ ಹಿರಿಯ ಗಾಯಕನ ಚೇತರಿಕೆಗೆ ಪ್ರಾರ್ಥನೆ ಮಾಡಿದ್ದರು .

40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್ಪಿಬಿ ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಪುತ್ರ ಚರಣ್ ತಂದೆಯವರ ಆರೋಗ್ಯ ತಿಳಿಸುತ್ತಿದ್ದರು. ಗಾಯಕ ಚೇತರಿಸಿಕೊಂಡಿದ್ದು ಐಪಿಎಲ್ ಅಪ್ ಡೇಟ್ ಗಳನ್ನು ನೋಡುತ್ತಿದ್ದಾರೆ ಎಂದು ಚರಣ್ ಹೇಳಿದ್ದರು.

click me!