ಎಸ್‌ಪಿಬಿ ಕಲ್ಯಾಣದ ಸ್ಟೋರಿ/ ಪತ್ನಿ ಸಾವಿತ್ರಿಯನ್ನು ಅಪಹರಣ ಮಾಡಿ ಮದುವೆಯಾಗಿದ್ದರು/ ಮದುವೆಗೆ ಕುಟುಂವದವರ ವಿರೋಧ ಇತ್ತು/ ಮದುವೆಯಾಗುವ ಸಂದರ್ಭ ಕೈಯಲ್ಲಿ ಇದ್ದಿದ್ದು 500 ರೂ!
ಚೆನ್ನೈ(ಸೆ. 25) ಗಾನ ಗಂಧರ್ವ ಸಂಗೀತ ಲೋಕವನ್ನು ಅಗಲಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಕತೆಯೂ ಒಂದು ಸಾಹಸಗಾಥೆ.
ಎಸ್‌ಪಿಬಿ ಮದುವೆಯನ್ನು ರುಕ್ಮಿಣಿ ಕಲ್ಯಾಣ ಎಂದೇ ಹೇಳಬಹುದು. ದ್ವಾಪರದಲ್ಲಿ ಕೃಷ್ಣ ರುಕ್ಮಿಣಿಯನ್ನು ಅಪಹರಣ ಮಾಡಿ ಮದುವೆಯಾಗಿದ್ದ. ಇಲ್ಲಿ ಎಸ್‌ಪಿಬಿ ಸಾವಿತ್ರಿ ಅವರನ್ನು ಅಪಹರಿಸಿಕೊಂಡು ಬಂದು ಅದೆ ರೀತಿಯಲ್ಲೇ ಮದುವೆಯಾಗಿದ್ದರು.
ಬೆಂಗಳೂನಿಂದ ಸಾವಿತ್ರಿ ಅವರ ಅಪಹರಣ ಮಾಡಿಕೊಂಡು ಸಿಂಹಾಚಲಂನಲ್ಲಿ ಮದುವೆಯಾಗಿದ್ದರು. ಎರಡು ಕುಟುಂಬಗಳಲ್ಲಿಯೂನ ಮದುವೆಗೆ ವಿರೋಧ ಇತ್ತು..ಬುಟಕಟ್ಟು ಸಂಪ್ರದಾಯ ಅಡ್ಡಿ ಬರುತ್ತಿತ್ತು. ಎಸ್‌ಪಿ ಅವರಿಗೆ ಸಾವಿತ್ರಿ ಅವರನ್ನು ವಿವಾಹವಾಗುವ ಆಸೆ ಇತ್ತು. ಇಂಥ ಸಂದರ್ಭದಲ್ಲಿ ಸಾವಿತ್ರಿ ಬೆಂಗಳೂರಿನಲ್ಲಿರುವ ತಮ್ಮ ಸಹೋದರರ ಮನೆಗೆ ಬಂದಿದ್ದರು. ಇದೇ ಅವಕಾಶ ಬಳಸಿಕೊಂಡ ಬಾಲು ಗೆಳೆಯಯರಾದ ಮುರುಳಿ ಮತ್ತು ವಿಠ್ಠಲ್ ನೆರವಿನಿಂದ ಸಾವಿತ್ರಿ ಕಿಡ್ನಾಪ್ ಮಾಡಿಸಿದ್ದರು.
ಅಲ್ಲಿಂದ ಕರೆದುಕೊಂಡು ಹೋಗಿ ಸಿಂಹಾಚಲಂನಲ್ಲಿ ಮದುವೆಯಾದರು. ಸುಬ್ರಮಣಿಯನ್ ಎಂಬ ಸ್ನೇಹಿತರೇ ಕನ್ಯಾದಾನ ನೆರವೇರಿಸಿದದರು. ಈ ಸಂದರ್ಭ ಸ್ನೇಹಿತರ ಗುಂಪಿನ ಬಳಿ ಇದ್ದಿದ್ದು ಕೇವಲ 500 ರೂ. ಒಬ್ಬರಿಗೆ ಒಬ್ಬರು ಹೇಗೋ ಸಹಕಾರ ಮಾಡಿಕೊಂಡು ಮದ್ರಾಸ್ ತಲುಪಿದರು.
ಮದುವೆಯಾದ ಮೇಲೆ ಎರಡು ಕುಟುಂಬಗಳು ಸುಮಾರು ಎರಡು ವರ್ಷ ಕಾಲ ಎಸ್‌ಪಿಬಿ ದಂಪತಿ ಸಂಪರ್ಕದಲ್ಲೇ ಇರಲಿಲ್ಲ. ಮಗಳು ಪಲ್ಲವಿ ಜನಿಸಿದ ಮೇಲೆ ನಿಧಾನಕ್ಕೆ ವಾತಾವರಣ ತಿಳಿಯಾಯಿತು.