
ಚೆನ್ನೈ(ಸೆ.25): ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟುವಿಷಮಿಸಿದೆ. ಅವರ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ಅವರು ದಾಖಲಾಗಿರುವ ಚೆನ್ನೈನ ಎಂಜಿಎಂ ಆಸ್ಪತ್ರೆ ಹೇಳಿದೆ.
ಗುರುವಾರ ಸಂಜೆ 6.30ಕ್ಕೆ 74ರ ಹರೆಯದ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮಾಹಿತಿಯನ್ನು ಪ್ರಕಟಿಸಿರುವ ಎಂಜಿಎಂ ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಡಾ .ಅನುರಾಧಾ ಭಾಸ್ಕರನ್, ‘ಕಳೆದ 24 ಗಂಟೆಗಳಲ್ಲಿ ಎಸ್‌ಪಿಬಿ ಅವರ ಆರೋಗ್ಯ ತೀರಾ ವಿಷಮಿಸಿದೆ. ಹೀಗಾಗಿ ಅವರನ್ನು ಅತ್ಯಂತ ಗರಿಷ್ಠ ಮಟ್ಟದ ‘ಜೀವರಕ್ಷಕ ವ್ಯವಸ್ಥೆ’ಯಲ್ಲಿ (ಲೈಫ್ ಸಪೋರ್ಟ್ ಸಿಸ್ಟಂ) ಇರಿಸಲಾಗಿದೆ. ಅವರ ಸ್ಥಿತಿ ತೀರಾ ಗಂಭೀರವಾಗಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ’ ಎಂದು ತಿಳಿಸಿದ್ದಾರೆ.
"
SPB ಆರೋಗ್ಯ ಗಂಭೀರ, ಲೈಫ್ ಸಪೋರ್ಟ್‌ನಲ್ಲಿ ದಿಗ್ಗಜ ಗಾಯಕ
ಆಗಸ್ಟ್ 5ರಂದೇ ಕೊರೋನಾ ಸೋಂಕಿನಿಂದಾಗಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯೆ ಅವರ ಆರೋಗ್ಯ ತೀರಾ ವಿಷಮಿಸಿತ್ತು. ಆದಾಗ್ಯೂ ಚೇತರಿಸಿಕೊಂಡಿದ್ದ ಅವರು ಸೆ.7ರಂದು ಕೊರೋನಾದಿಂದ ಗುಣಮುಖರಾಗಿದ್ದರು. ಆದರೂ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲೇ ಇಡಲಾಗಿತ್ತು. ಬಳಿಕ ನಿತ್ಯ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದ ಎಸ್‌ಪಿಬಿ, ಕೆಲವು ಯೋಗಾಸನಗಳನ್ನೂ ಮಾಡಲು ಆರಂಭಿಸಿದ್ದರು. ಹಾಡುಗಳನ್ನು ಆಲಿಸುತ್ತಿದ್ದರು. ಕಳೆದ ವಾರಾಂತ್ಯ ಅವರು ಆಸ್ಪತ್ರೆಯಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.