ಹೃದಯಾಘಾತಕ್ಕೆ ಜೀವ ತೊರೆದ ಸೌತ್‌ ಇಂಡಸ್ಟ್ರಿಯ ಕಣ್ಮಣಿಗಳಿವರು

By Suvarna News  |  First Published Feb 19, 2023, 4:21 PM IST

ಹೃದಯಾಘಾತ ಮಾಮೂಲಿ ಆಗಿರುವ ಈ ದಿನಗಳಲ್ಲಿ ದಕ್ಷಿಣ ಇಂಡಸ್ಟ್ರಿಯ ಕೆಲವು ಖ್ಯಾತ ನಟ-ನಟಿಯರೂ ಇದಕ್ಕೆ ಬಲಿಯಾಗಿದ್ದಾರೆ. ಯಾರವರು? 
 


ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ಈ ಹೃದಯಘಾತ ಸಿನಿ ತಾರೆಯನ್ನೂ ಬಿಟ್ಟಿಲ್ಲ. ನಮ್ಮ ಜೀವನ ಶೈಲಿ, ಆಹಾರ, ವಾತಾವರಣ ಎಲ್ಲವೂ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ ಕೆಲವೊಮ್ಮೆ ವಿಚಿತ್ರ ಎನಿಸುವ ರೀತಿಯಲ್ಲಿ ಜೀವ ಹೋಗುವುದುಂಟು. ಹಿಂದೆಂದೂ ಹೃದಯಾಘಾತದ ಸೂಚನೆಯೇ ಸಿಗದ ವ್ಯಕ್ತಿಗಳು ಏಕಾಏಕಿ ಕುಸಿದು ಸಾಯುವುದನ್ನು ನೋಡಿದ್ದೇವೆ. ವೇದಿಕೆಯ (Stage) ಮೇಲೆ ಚೆನ್ನಾಗಿಯೇ ನಾಟಕ, ನೃತ್ಯ, ಯಕ್ಷಗಾನ ಮುಂದಾದ ಕಲೆಗಳನ್ನು ಪ್ರದರ್ಶಿಸುತ್ತಿರುವ ವೇಳೆ ದಿಢೀರ್​ ಕುಸಿದು ಬಿದ್ದ ವಿಡಿಯೋಗಳಂತೂ ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿಬಿಟ್ಟಿದೆ. ಯಾರಿಗೂ ತೊಂದರೆ ಕೊಡದೇ ಒಂದೇ ಸಲ ಪ್ರಾಣ ಹೋಗುವ ಹೃದಯಾಘಾತವೇ ಬರಲಿ ಎಂದು ಆಶಿಸುವವರೇ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಆದರೆ ಯಾವುದೇ ಸೂಚನೆ ಕೊಡದೇ ಇಂಥ ಜೀವಗಳು ಹೋದಾಗ ಮನೆಯವರಿಗೆ ಆಗುವ ಆಘಾತ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ ಬಿಡಿ. 

ಇಲ್ಲಿ ಹೇಳಹೊರಟಿರುವುದು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ (Hear Attack) ಸಾವನ್ನಪ್ಪಿರುವ ದಕ್ಷಿಣ ಚಿತ್ರರಂಗ ನಟ ನಟಿಯರ ಕುರಿತು. ತಮ್ಮ ಅಚ್ಚುಕಟ್ಟಾದ ನಟನೆಯಿಂದ ಬಹುಕಾಲ ಜನರ ಹೃದಯವನ್ನು ಆಳಿದ ಅನೇಕ ತಾರೆಯರ  ಹಠಾತ್ ಸಾವಿನ ಸುದ್ದಿ ಇತ್ತೀಚೆಗ ಅಭಿಮಾನಿಗಳಲ್ಲಿ ಭೀತಿ ಮೂಡಿಸುತ್ತಿದೆ.  ಇದೀಗ ತಾರಕ್ ರತ್ನ ಮತ್ತು ಮಾಯಿಲ್‌ಸಾಮಿ ಅವರ ಹೆಸರುಗಳು ಈ ಪಟ್ಟಿಗೆ ಸೇರ್ಪಡೆಗೊಂಡಿವೆ. ಈ ತಾರೆಯರ ಹಠಾತ್ ಸಾವು ಅಭಿಮಾನಿಗಳನ್ನು ಗರಬಡಿಯುವಂತೆ ಮಾಡಿದೆ. ಈ ವಿಶೇಷ ವರದಿಯಲ್ಲಿ, ನಾವು ಹೃದಯಾಘಾತದಿಂದ ಸಾವನ್ನಪ್ಪಿದ ದಕ್ಷಿಣ ಚಲನಚಿತ್ರ ತಾರೆಯರ ಬಗ್ಗೆ ಹೇಳಲಿದ್ದೇವೆ.

Tap to resize

Latest Videos

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!
 
ಪುನೀತ್​ ರಾಜ್​ಕುಮಾರ್​ (Puneeth Rajkumar), ಚಿರಂಜೀವಿ ಸರ್ಜಾ
ಈ ಪಟ್ಟಿಯಲ್ಲಿ ಮೊದಲಿಗೆ ನಿಲ್ಲುವುದು ಕನ್ನಡದ ಕಣ್ಮಣಿ ಪುನೀತ್​ ರಾಜ್​ಕುಮಾರ್​. ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ, ಸಮಾಜ ಸೇವೆಯ ಮೂಲಕ ಮನೆ ಮಾತಾಗಿರುವ, ಹಲವರ ಬಾಳಿಗೆ ದೀಪವಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಕೂಡ ದೇಶವನ್ನು ಬೆಚ್ಚಿಬೀಳಿಸಿದೆ. 2021ರ ಅಕ್ಟೋಬರ್​ 29ರಂದು ಇವರು ಹೃದಯಾಘಾತದಿಂದ ನಿಧನರಾದರು. ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಜಿಮ್​ನಲ್ಲಿ ಅತಿಹೆಚ್ಚು ವರ್ಕ್​ಔಟ್​ ಮಾಡಿದ್ದೇ ಕಾರಣ ಎಂದು ಊಹಿಸಲಾಗುತ್ತಿದ್ದರೂ ಎಲ್ಲರನ್ನೂ ಬಿಟ್ಟು ಅಗಲಿದರು ಅಪ್ಪು. ಇನ್ನೋರ್ವ ನಟ ಚಿರಂಜೀವಿ ಸರ್ಜಾ (Chiranjeevi Sarja). ಕನ್ನಡದ ಸೂಪರ್ ಸ್ಟಾರ್ ಚಿರಂಜೀವಿ ಸರ್ಜಾ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 2020ರ ಜೂನ್​ 7ರಂದು ಇವರು  ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಾಗ ಅವರಿಗೆ ಕೇವಲ  36 ವರ್ಷ ವಯಸ್ಸು. ಒಂದೇ ವರ್ಷದಲ್ಲಿ ಎರಡು ಕನ್ನಡದ ಕಣ್ಮಣಿಗಳನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು.
 

ತಾರಕ ರತ್ನ  (Taraka Ratna), ಮಾಯಿಲ್‌ಸಾಮಿ 
RRR ಸ್ಟಾರ್ ಜೂನಿಯರ್ ಎನ್​ಟಿಆರ್​ ಅವರ ಸೋದರಸಂಬಂಧಿ ಮತ್ತು ತೆಲುಗು ಸ್ಟಾರ್ ತಾರಕ್ ರತ್ನ ಇತ್ತೀಚೆಗೆ ನಿಧನರಾದರು. ಹೃದಯಾಘಾತದ ನಂತರ ಸುಮಾರು 23 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ತಾರಕ ರತ್ನ ನಿನ್ನೆ (ಫೆ.18)  ನಿಧನರಾದರು. ಅವರಿಗೆ ಕೇವಲ 39 ವರ್ಷ ವಯಸ್ಸು. ಇದೇ 22ರಂದು ಜನುಮದಿನದ ಸಂಭ್ರಮದಲ್ಲಿದ್ದ ತಾರಕ ರತ್ನ ಅವರ ಸಾವು ದಕ್ಷಿಣ ಇಂಡಸ್ಟ್ರಿಯನ್ನು ದಂಗು ಬಡಿಸಿದೆ. ಇದೇ ರೀತಿ ನಟ ಮಾಯಿಲ್ಸಾಮಿ (Mayilsamy). ತಮಿಳು ಚಿತ್ರರಂಗದ ಲೆಜೆಂಡರಿ ಕಾಮಿಡಿ ಸ್ಟಾರ್ ಮಾಯಿಲ್‌ಸಾಮಿ ಕೂಡ ನಮ್ಮೊಂದಿಗಿಲ್ಲ. ಚಿತ್ರನಟ ಹೃದಯಾಘಾತದಿಂದ ಇಂದು (ಫೆ.19) ನಿಧನರಾದರು. ಅವರು 57 ನೇ ವಯಸ್ಸಿನಲ್ಲಿ ನಿಧನರಾದರು.

ಶ್ರೀದೇವಿ (Sridevi), ವಿವೇಕ್​
ನಟಿ ಶ್ರೀದೇವಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇವರ ಸಾವಿನ ಕುರಿತು ಹಲವಾರು ಸಂದೇಹಗಳು ಇದ್ದರೂ ವೈದ್ಯಕೀಯ ವರದಿಯಲ್ಲಿ ಹೃದಯಾಘಾತ ಎಂದು ತಿಳಿಸಲಾಗಿದೆ. . ಕುಟುಂಬ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಟಿ ದುಬೈನಲ್ಲಿ ಬಾತ್​ಟಬ್​ನಲ್ಲಿ ಮುಳುಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ ಹೃದಯಾಘಾತವಾಯಿತು ಎನ್ನಲಾಗಿದೆ.  ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ (Vivekh) ಕೂಡ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅವರು 2021 ರಲ್ಲಿ ನಿಧನರಾದರು. ನಟನಿಗೆ ಕೇವಲ 59 ವರ್ಷ ವಯಸ್ಸಾಗಿತ್ತು.

South Actresses ನಿಜವಾದ ಹೆಸ್ರು ಕೇಳಿದ್ರೆ ಶಾಕ್​ ಆಗ್ತೀರಿ!

ಜಯಪ್ರಕಾಶ ರೆಡ್ಡಿ (Jayaprakash Reddy)
ತೆಲುಗಿನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ಕೂಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟ 2020 ರಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಆಗಿದ್ದರು. 74 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು.

click me!