'ನಾನು ದಪ್ಪಗಿದ್ರೆ ಉಳಿದವರಿಗೇನು ಕಷ್ಟಾನೋ ಗೊತ್ತಿಲ್ಲ ಅಷ್ಟಕ್ಕೂ ನಾನು ಹೀಗೆ ಹೇಳೋರ ಬಗೆಗೆಲ್ಲ ತಲೆಕೆಡಿಸೋದೇ ಇಲ್ಲ ಅಂತಾರೆ ನಿತ್ಯಾ ಮೆನನ್.
'ನಾನು ದಪ್ಪಗಿದ್ರೆ ಉಳಿದವರಿಗೇನು ಕಷ್ಟಾನೋ ಗೊತ್ತಿಲ್ಲ ಅಷ್ಟಕ್ಕೂ ನಾನು ಹೀಗೆ ಹೇಳೋರ ಬಗೆಗೆಲ್ಲ ತಲೆಕೆಡಿಸೋದೇ ಇಲ್ಲ ಅಂತಾರೆ ನಿತ್ಯಾ ಮೆನನ್. ಅಷ್ಟಕ್ಕೂ ಉಳಿದ ನಟಿಯರಿಗೆ ಹೋಲಿಸಿದರೆ ನಿತ್ಯಾ ಮೆನನ್ ತೆಳ್ಳಗೆ ಬಳುಕುವ ಬಳ್ಳಿಯಂಥಾ ಮೈಕಟ್ಟು ಹೊಂದಿರುವ ಹೀರೋಯಿನ್ ಅಲ್ಲ. ಸಾಮಾನ್ಯವಾಗಿ ನಾಯಕಿ ಅಂದ ಕೂಡಲೇ ನಮಗೆ ನೆನಪಾಗೋದು ಐಡಿಯಲ್ ಸೈಸ್ ದೇಹ. ಕೆಲವು ಹೀರೋಯಿನ್‌ಗಳಂತೂ ತಮ್ಮ ದೇಹವನ್ನು ಝೀರೋ ಸೈಸ್‌ಗೆ ಇಳಿಸಿ ಫೋಟೋ ಶೂಟ್ ಮಾಡಿಸಿಕೊಳ್ತಾರೆ. ನಮಗೆ ಈ ಥರದ ಅನುಕರಣೆ ಶುರುವಾದದ್ದು ಹಾಲಿವುಡ್ ನಟಿಯರಿಂದ. ಬಾಲಿವುಡ್ ಹುಡುಗೀರು ಯಾವಾಗ ಈ ಹಾಲಿವುಡ್ ನಟಿಯರನ್ನು ಅನುಸರಿಸಲು ಶುರು ಮಾಡಿದರೋ ಆಗ ಅವರಿಂದ ಅದು ದಕ್ಷಿಣ ಭಾರತೀಯ ನಟಿಯರಿಗೂ ಬಂತು. ಇವತ್ತು ಬಾಲಿವುಡ್‌ನಲ್ಲಿ ಈ ದಪ್ಪ ಅಂದರೆ ಅಪರಾಧ ಅನ್ನೋ ಫೀಲು ಯಾವ ಪರಿ ಹಬ್ಬಿದೆ ಅಂದರೆ ದೀಪಿಕಾ ತನ್ನ ವೈಟ್ ಒಂದು ಕೆಜಿ ಜಾಸ್ತಿ ಆದರೆ ವೈಟ್ ಟ್ರೈನಿಂಗ್‌ಅನ್ನು ಹೆಚ್ಚೆಚ್ಚು ಮಾಡಲು ಶುರು ಮಾಡುತ್ತಾರೆ. ಡಯೆಟ್, ವರ್ಕೌಟ್ ಮೂಲಕ ಹೆಚ್ಚಾದ ಒಂದು ಕೆಜಿಯನ್ನು ಇಳಿಸುವವರೆಗೂ ಅವರಿಗೆ ನೆಮ್ಮದಿ ಇರಲ್ಲ. ಸೋನಂ ಕಪೋರ್, ಸಾರಾ ಆಲೀಖಾನ್ ನಂಥವರು ಒಂದು ಕಾಲದಲ್ಲಿ ತಾವೆಷ್ಟು ದಪ್ಪಗಿದ್ವಿ, ಹೇಗೆ ಈ ಲೆವೆಲ್ ಗೆ ದೇಹವನ್ನು ಇಳಿಸಿಕೊಂಡ್ವಿ ಅನ್ನೋದನ್ನೇ ಕಾದಂಬರಿ ಥರ ಹೇಳುತ್ತಾರೆ. ಜನ ಅದನ್ನು ಮುಗ್ಧವಾಗಿ ಕೇಳುತ್ತಾರೆ.
ಇಂಥಾ ಟೈಮ್ ನಲ್ಲಿ ನನ್ ಬಾಡಿ ಹೇಗಿದ್ರೆ ನಿಮ್ಗೇನು, ನನ್ನ ದೇಹದ ಬಗ್ಗೆ ಕಮೆಂಟ್ ಮಾಡೋದಕ್ಕೆ ನೀವ್ಯಾರು ಅಂತ ಗಟ್ಟಿ ದನಿ ಎತ್ತಿದವರು ಕನ್ನಡದ ಹುಡುಗಿ ನಿತ್ಯಾ ಮೆನನ್. ಅವರು ತಮ್ಮ ದೇಹದ ಬಗ್ಗೆ ಯಾವತ್ತೂ ಕಾನ್ಶಿಯಸ್ ಆದವರಲ್ಲ. ಸಣ್ಣಗಾಗ್ಬೇಕು ಅಂತ ಎಕ್ಸರ್ ಸೈಸ್, ವರ್ಕೌಟ್ ಮೊರೆ ಹೋದವರಲ್ಲ. ದೇಹ ಆರೋಗ್ಯವಾಗಿರೋದು ಮುಖ್ಯ ಅಂತ ನಂಬಿದವರು. ಅಷ್ಟಕ್ಕೂ ನಿತ್ಯಾ ಐದಡಿಯಷ್ಟೇ ಉದ್ದ ಇರುವ, ತುಸು ದಪ್ಪನೆ ಫಿಸಿಕ್ ಹೊಂದಿರುವ ಮುದ್ದು ಮುಖದ ಹುಡುಗಿ. ಅವರು ಇತ್ತೀಚೆಗೆ ಇಂಗ್ಲೀಷ್ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ 'ದಪ್ಪ, ಸಣ್ಣ ಅಂತೆಲ್ಲ ಮಾತಾಡಿಸೋದ್ರೆ ನಾನು ಸಂದರ್ಶನವನ್ನೇ ಕೊಡಲ್ಲ' ಅಂತ ದೃಢವಾಗಿ ಹೇಳಿದ್ರು. ಈ ಸಂದರ್ಭ ಅವರು ಹೇಳಿರೋ ಒಂದು ಮಾತು ಕಮೆಂಟ್ ಮಾಡೋದು ಮುಟ್ಟಿ ನೋಡ್ಕೊಳ್ಳೋ ಹಾಗಿತ್ತು. 'ಈ ಕಮೆಂಟ್ ಮಾಡೋರನ್ನು ನಾನು ನಿರ್ಲಕ್ಷಿಸುತ್ತೀನಿ. ಏಕೆಂದರೆ ಅವರಿಗೆ ಸಾಮರ್ಥ್ಯ ಇಲ್ಲ, ತಾಕತ್ತಿಲ್ಲದ ಜನ ಅವರು. ಅವರು ನಾವು ಮಾಡಿರೋ ಥರ ಸಾಧನೆ ಮಾಡ್ಲಿ ನೋಡೋಣ. ಅವರಿಂದ ಏನೂ ಮಾಡಕ್ಕಾಗಲ್ಲ. ಹಾಗಂತ ಸುಮ್ನೆ ಕೂರೋದಕ್ಕೂ ಆಗಲ್ಲ. ಅದಕ್ಕಾಗಿ ಅವರು ಇನ್ನೊಬ್ಬರನ್ನು ಟೀಕಿಸೋದನ್ನೇ ಕಸುಬು ಮಾಡಿಕೊಂಡಿರುತ್ತಾರೆ. ನೀವು ಸಾಧನೆಯ ಹಾದಿಯಲ್ಲಿದ್ದರೆ, ಲೈಫ್‌ನಲ್ಲಿ ಏನನ್ನಾದರೂ ಸಾಧಿಸುವ ಛಲ ಇದ್ದರೆ ನೀವು ಇನ್ನೊಬ್ಬರನ್ನು ಟೀಕಿಸೋದರಲ್ಲಿ ಟೈಮ್ ವೇಸ್ಟ್ ಮಾಡಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿ ಯಾವತ್ತೂ ನಮ್ಮನ್ನು ಟೀಕಿಸೋರು ನಮಗಿಂತ ಕೆಳಗಿರುತ್ತಾರೆ. ನಮಗಿಂತ ಮೇಲಿನ ಲೆವೆಲ್‌ನಲ್ಲಿದ್ದೋರು. ಹೆಚ್ಚು ಸಾಧನೆ ಮಾಡಿದೋರು ಯಾವತ್ತೂ ಇನ್ನೊಬ್ಬರನ್ನು ಟೀಕಿಸುವ, ಅವರ ದೇಹದ ಬಗೆಗೆಲ್ಲ ಮಾತಾಡುವ ಕೀಳು ಮಟ್ಟಕ್ಕೆ ಇಳಿಯಲ್ಲ' ಅಂತ ನೇರವಾಗಿ ಕಮೆಂಟಿಗರ ಮೇಲೆ ನಿತ್ಯಾ ಅಟ್ಯಾಕ್ ಮಾಡಿದ್ದಾರೆ.
ತಲೆಗೂದಲು ಬೋಳಿಸಿ ಶಾಕ್ ಕೊಟ್ಟ ನಿತ್ಯಾ ಮೆನನ್; ಇದರ ಹಿಂದಿದೆ ಶಾಕಿಂಗ್ ಘಟನೆ!
undefined
ನಿತ್ಯಾ ಮೆನನ್ ಒಂಭತ್ತು ವರ್ಷದವರಿದ್ದಾಗ ಶಾರ್ಟ್ ಮೂವಿಯೊಂದರಲ್ಲಿ ಕಾಣಿಸಿಕೊಂಡವರು. ಆ ಬಳಿಕ ಕೆಲವು ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಕನ್ನಡದ 'ಸೆವನ್ ಓ ಕ್ಲಾಕ್' ಸಿನಿಮಾದಲ್ಲಿ ಹೀರೋಯಿನ್ ತಂಗಿ ಪಾತ್ರದಲ್ಲಿ ಗಮನ ಸೆಳೆದವರು. ಒಮ್ಮೆ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಹಿಂತಿರುಗಿ ನೋಡಿದವರಲ್ಲ. 'ಮಂಗಲ್ ಪಾಂಡೆ' ಯಂಥಾ ಸಿನಿಮಾ ನಿತ್ಯಾ ಪ್ರತಿಭೆಗೆ ಕನ್ನಡಿ ಹಿಡಿಯಿತು. ಮಣಿರತ್ನಂ ಅವರ 'ಓ ಕಾದಲ್ ಕಣ್ಮಣಿ' ಮೂವಿ ಎಲ್ಲ ಭಾರತೀಯರ ಭಾಷೆಯ ಆಡಿಯನ್ಸ್ ಗಮನವನ್ನೂ ಸೆಳೆಯಿತು. ನಿತ್ಯಾ ಅವರ ಕಣ್ಣು, ಮುಖ, ನಟನೆಯೇ ಮುಖ್ಯವಾಗುತ್ತೆ ಹೊರತು ಅವರ ದೇಹ ನೋಡಿ ಈಕೆ ಅನ್‌ಫಿಟ್ ಅಂತ ಅಂದುಕೊಂಡವರಿಲ್ಲ.
ಎಂದಿಗೂ ಆಡಿಶನ್ ಕೊಡದೇ ಪಂಚಭಾಷಾ ತಾರೆಯಾದ 'ಮೈನಾ' ಹಕ್ಕಿ! ..
ಪಟಪಟನೆ ಕನ್ನಡ ಮಾತಾಡೋ ನಿತ್ಯಾಗೆ ಕನ್ನಡ ಓದು, ಬರವಣಿಗೆಯೂ ಸಲೀಸು. ಕನ್ನಡ ಸಿನಿಮಾ ಸ್ಕ್ರಿಪ್ಟ್ಅನ್ನು ಅವರು ಕನ್ನಡದಲ್ಲೇ ಓದೋದು. ಇವರ ಇನ್ನೊಂದು ಸ್ಪೆಷಾಲಿಟಿ ಅಂದರೆ ಬೇರೆ ಭಾಷೆಗಳಿಗೆ ಹೋದರೂ ಅವರು ಆ ಭಾಷೆಯನ್ನು ಕಲಿತು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಾರೆ. ಕನ್ನಡ, ಮಲೆಯಾಳಂ, ಹಿಂದಿ, ಇಂಗ್ಲೀಷ್, ತಮಿಳು, ತೆಲುಗು ಜೊತೆಗೆ ಫಾರಿನ್ ಲಾಂಗ್ವೇಜ್ ಗಳನ್ನೂ ಇವರು ಮಾತಾಡಬಲ್ಲರು.
ನಿತ್ಯಾ ಮೆನನ್ ಕನ್ನಡದವ್ರಾ? ಕೇರಳದವ್ರಾ?