ತೆಲುಗು-ತಮಿಳಿನಲ್ಲಿ ಹೆಚ್ಚಾಗಿ ನಟನೆ, ಆದ್ರೂ ಕೇರಳಕ್ಕೆ ಆಗಾಗ ಹೋಗೋದ್ಯಾಕೆ ನಟಿ ರಮ್ಯಾ ಕೃಷ್ಣನ್?

Published : Feb 13, 2025, 04:44 PM ISTUpdated : Feb 13, 2025, 05:16 PM IST
ತೆಲುಗು-ತಮಿಳಿನಲ್ಲಿ ಹೆಚ್ಚಾಗಿ ನಟನೆ, ಆದ್ರೂ ಕೇರಳಕ್ಕೆ ಆಗಾಗ ಹೋಗೋದ್ಯಾಕೆ ನಟಿ ರಮ್ಯಾ ಕೃಷ್ಣನ್?

ಸಾರಾಂಶ

ರಮ್ಯಾ ಕೃಷ್ಣನ್, ಬಹುಭಾಷಾ ನಟಿ, ಶಿವಗಾಮಿ ಪಾತ್ರದ ಮೂಲಕ ಜಾಗತಿಕ ಮನ್ನಣೆ ಗಳಿಸಿದವರು. ಚಲನಚಿತ್ರ, ಜಾಹೀರಾತುಗಳ ಜೊತೆಗೆ ವ್ಯಾಪಾರ ಉದ್ಯಮಗಳಿಂದ ಮಾಸಿಕ ಐದು ಕೋಟಿಗೂ ಅಧಿಕ ಸಂಪಾದನೆ ಹೊಂದಿದ್ದಾರೆ. ಸೌಂದರ್ಯ ಉದ್ಯಮ, ಆಭರಣ ಮಳಿಗೆಗಳು ಸೇರಿದಂತೆ ಹಲವು ಬಂಡವಾಳ ಹೂಡಿಕೆಗಳಿಂದ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿರುವ ಖ್ಯಾತಿ ರಮ್ಯಾ ಕೃಷ್ಣನ್ (Ramya Krishnan) ಅವರದು. ಕನ್ನಡದಲ್ಲಿ ರಸಿಕ ಸೇರದಂತೆ ಹಲವು ಚಿತ್ರಗಳಲ್ಲಿ ನಟಿ ರಮ್ಯಾ ಕೃಷ್ಣನ್ ಕಾಣಿಸಿಕೊಂಡಿದ್ದರೂ ಕೂಡ ಹೆಚ್ಚಾಗಿ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ (Bahubali) ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣನ್ ಮಾಡಿರುವ 'ಶಿವಗಾಮಿ' ಪಾತ್ರವು ವಿಶ್ವವಿಖ್ಯಾತಿ ಹೊಂದಿದೆ. ಇಂಥ ರಮ್ಯಾ ಕೃಷ್ಣನ್ ತಿಂಗಳಿಗೆ ಅದೆಷ್ಟು ಸಂಪಾದನೆ ಮಾಡ್ತಾರೆ ಗೊತ್ತಾ?

ಹಲವರು ಯೋಚಿಸಬಹುದು, ನಟಿ ರಮ್ಯಾ ಕೃಷ್ಣನ್ ಈಗ ಪೋಷಕ ನಟಿ. ಅವರೇನೂ ಈಗ ಹೀರೋಯಿನ್ ಅಲ್ಲ. ಅವರಿಗೆ ಅದೆಷ್ಟೇ ಕೊಟ್ಟರೂ ಅವರ ಪಾತ್ರ ಸಿನಿಮಾದಲ್ಲಿ ಹೆಚ್ಚು ದಿವಸಗಳೇನೂ ಇರೋದಿಲ್ಲ. ಹೀಗಾಗಿ ರಮ್ಯಾ ಕೃಷ್ಣನ್ ಸಂಪಾದನೆ ತಿಂಗಳಿಗೆ ಅಬ್ಬಬ್ಬಾ ಎಂದರೂ ಒಂದು ಕೋಟಿ ದಾಟಲ್ಲ. ಅವರು ಇತ್ತೀಚೆಗೆ ತುಂಬಾ ಹೆಚ್ಚು ಚಿತ್ರಗಳೇನೂ ಮಾಡುತ್ತಿಲ್ಲ. ಅಷ್ಟಕ್ಕೂ ನಟಿ ರಮ್ಯಾ ಕೃಷ್ಣನ್ ಒಂದು ದಶಕಗಳು ಮೆರೆದ ನಟಿ. ಅವರೇನೂ ಸೌಂದರ್ಯ ಅಥವಾ ಶ್ರೀದೇವಿ ತರಹ ಎಲ್ಲಾ ಸಿನಿಮಾಗಳಲ್ಲಿ ನಾಯಕಿಯಾಗಿಯೇ ಕಾಣಿಸಿಕೊಂಡಿಲ್ಲ. ಆದರೆ ಸತ್ಯ ಸಂಗತಿ ಬೇರೆನೇ ಇದೆ. 

ಸ್ಟಾರ್ ಹೀರೋ ಸಂಭಾವನೆಗಿಂತ ಹೆಚ್ಚು ತಿಂಗಳ ಆದಾಯ ಗಳಿಸುತ್ತಾರೆ ರಮ್ಯ ಕೃಷ್ಣನ್

ವಯಸ್ಸು 50 ಆದ್ರೂ ನಟಿ ರಮ್ಯಾ ಕೃಷ್ಣನ್ ತಿಂಗಳಿಗೆ ದೊಡ್ಡ ಸ್ಟಾರ್ ಹೀರೋಗಳಿಗಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಕೇರಳದಲ್ಲಿ 5 ಬ್ಯೂಟಿ ಪಾರ್ಲರ್‌ಗಳು, ಹೈದ್ರಾಬಾದ್‌ನಲ್ಲಿ 3 ಜ್ಯೆವೆಲ್ಲರಿ ಶಾಪ್‌ಗಳು, ಸಿನಿಮಾ, ಜಾಹೀರಾತು ಹಾಗೂ ಬಿಸಿನೆಸ್ ಹೀಗೆ ನಾನಾ ಮೂಲಗಳಿಂದ ನಟಿ ರಮ್ಯಾ ಕೃಷ್ಣನ್ ಅವರು ತಿಂಗಳಿಗೆ 5 ಕೋಟಿಗೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ. ಅವ್ರಿಗೆ ಸಿನಿಮಾದಲ್ಲಿ ಕೂಡ ಕಡಿಮೆ ಸಂಭಾವನೆಯೇನೂ ಇಲ್ಲ. ಬಾಹುಬಲಿ ಬಳಿಕ ಅವರ ಸಂಭಾವನೆ ಕೂಡ ಹೆಚ್ಚಿದೆ. 

ಇಂಥ ನಟಿ ರಮ್ಯಾ ಕೃಷ್ಣನ್ ಅವರು ಕೇವಲ ಸಿನಿಮಾ ನಂಬಿ ಕುಳಿತಿಲ್ಲ. ಹಾಗೂ, ಅವರು ಈ ಮೊದಲು ಸಿನಿಮಾ ನಟನೆಯಿಂದ ದುಡಿದು ಗಳಿಸಿದ ಹಣವನ್ನು ಬಿಸಿನೆಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿ ಅದರಿಂದಲೂ ಕೋಟಿ ಕೋಟಿ ಗಳಿಸಿದ್ದಾರೆ. ಈಗಲೂ ತಿಂಗಳಿಗೆ ಕಡಿಮೆ ಎಂದರೂ 5 ಕೋಟಿ ಹಣ ಅವರಿಗೆ ಸಂಪಾದನೆ ಆಗುತ್ತಲೇ ಇರುತ್ತದೆ. ಆದ್ದರಿಂದ ನಟಿ ರಮ್ಯಾ ಕೃಷ್ಣನ್ ಅವರ ಬಗ್ಗೆ ಪೋಷಕ ನಟಿ, ಸಂಪಾದನೆ ಕಮ್ಮಿ ಅಂತ ಯೋಚಿಸಬೇಡಿ. 

ಬ್ಯೂಟಿ ಟ್ರೀಟ್ಮೆಂಟ್ ಪ್ರಶ್ನೆಗೆ ಕೋಪಗೊಂಡ್ರಾ ರಮ್ಯಾ? ಮತ್ತೆ ನಟಿಸೋ ಗುಟ್ಟು ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಕ್ವೀನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?