ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್‌ ಬಗ್ಗೆ Aparna Balamurali ಬೇಸರ

Published : Sep 17, 2022, 10:36 AM ISTUpdated : Sep 17, 2022, 10:38 AM IST
ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್‌ ಬಗ್ಗೆ Aparna Balamurali ಬೇಸರ

ಸಾರಾಂಶ

 ಬಾಡಿ ಶೇಮಿಂಗ್‌ ಬಗ್ಗೆ ಧ್ವನಿ ಎತ್ತಿದ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ..ದಪ್ಪಗಿದ್ದರೇನು?

ಸಾಧು ಕೊಂಗರ ನಿರ್ದೇಶನ ಮಾಡಿದ 'ಸುರರೈ ಪೊಟ್ರು' (Soorarai Pottru) ಸಿನಿಮಾದಲ್ಲಿ ಮಾರನ ಪತ್ನಿಯಾಗಿ ಅಪರ್ಣಾ ಬಾಲಮುರಳಿ (Aparna Balamurali) ಅಭಿನಯಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿ ಪ್ರಮುಖ ಪಾತ್ರಧಾರಿಯಾಗಿ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡರು. ಸಿನಿ ಜರ್ನಿ ಆರಂಭಿಸಿದಾಗಿನಿಂದಲ್ಲೂ ಅಪರ್ಣಾ ತುಂಬಾನೇ chubby and cute. ಆದರೆ ಇದು ಬಾಡಿ ಶೇಮಿಂಗ್‌ಗೆ ಕಾರಣವಾಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಬಾಡಿ ಶೇಮಿಂಗ್:

'ನೀನು ದಪ್ಪಗಾಗಿರುವ ಎಂದು ಯಾರಾದರೂ ಹೇಳಿದರೆ ನಾನು ಬೇಸರ ಮಾಡಿಕೊಳ್ಳುತ್ತಿದ್ದೆ. ಮನಸ್ಸಿಗೆ ತೆಗೆದುಕೊಳ್ಳುತ್ತಿದೆ. ಆದರೆ ಈಗ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ..ಸೂಕ್ಷ್ಮವಾಗಿ ಹೇಳಬೇಕು ಅಂದ್ರೆ ಎಂಟರ್ಟೈನ್ ಮಾಡುವುದಿಲ್ಲ. ಆರೋಗ್ಯ ಸಮಸ್ಯೆಗಳಿಂದ ನನ್ನ ದೇಹದ ತೂಕ ಹೆಚ್ಚಾಗಿರುವುದು. ಆದರೆ ಈಗ ನಾನು ಇರುವ ರೀತಿಯನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಸಿನಿಮಾರಂಗದಲ್ಲಿ ಸಣ್ಣಗಿರುವ ಹುಡುಗಿಯರು ಮಾತ್ರ ನಾಯಕಿ ಆಗಬೇಕು ಅನ್ನೋ ವಿಚಾರವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ವಿಜಯ್ ಸೇತುಪತಿ (Vijay Sethupathi) ಮತ್ತು ಧನುಷ್‌ನ (Danush) ನೋಡಿ ಅವರ ಲುಕ್‌ನ ನೋಡಿ ಜನರು ಅವರ ಸಿನಿಮಾ ನೋಡುವುದಿಲ್ಲ ಅವರು ಹೇಗೆ ಇರಲಿ ಪ್ರತಿಭೆ ಮುಖ್ಯ ಎನ್ನುತ್ತಾರೆ. ಆದರೆ ನಾಯಕಿಯರ ವಿಚಾರದಲ್ಲಿ ಈ ರೀತಿ ಯೋಚನೆ ಯಾಕೆ ಮಾಡುವುದಿಲ್ಲ? ಇದೇ ರೀತಿ ಪರ್ಸನಾಲಿಟಿ ಇರಬೇಕು ಎನ್ನುವುದು ಯಾಕೆ? ನಮ್ಮನ್ನು ಸುಲಭವಾಗಿ ಬಾಡಿ ಶೇಮ್ ಮಾಡುತ್ತಾರೆ ತಾಯಿ ಪಾತ್ರ ಮಾಡಿ ಎನ್ನುತ್ತಾರೆ'

ಡ್ರೆಸ್ ಆಯ್ಕೆ:

'ಸಿನಿ ಜರ್ನಿ ಆರಂಭದಲ್ಲಿ ನಾನು ಸಣ್ಣಗಿದ್ದೆ ಅಗ ಯಾರ ಬಗ್ಗೆನೂ ಕೇರ್ ಮಾಡದೆ sleeveless ಡ್ರೆಸ್ ಧರಿಸುತ್ತಿದ್ದೆ. ಆದರೆ ಈಗ ಧರಿಸಲು ಎರಡು ಸಲ ಯೋಚನೆ ಮಾಡುವೆ. ಇದೆಲ್ಲಾ ಕೆಟ್ಟ ಯೋಚನೆಗಳು ಇದರಿಂದ ನಾನು ಈಗ ಹೊರ ಬರುತ್ತಿರುವೆ'

ಕಥೆ ಆಯ್ಕೆ:

' ಸ್ಟೋರಿ ಲೈನ್‌ಗಳನ್ನು ಮಾತ್ರ ಕೇಳಿ ನಾನು ಸಿನಿಮಾಗಳನ್ನು ಒಪ್ಪಿಕೊಂಡು ತಪ್ಪು ಮಾಡಿರುವ. ಆ ಕೆಟ್ಟ ಘಟನೆಗಳು ಮತ್ತೆ ನಡೆಯಬಾರದು ಎಂದು ನಿರ್ಧಾರ ಮಾಡಿರುವೆ. ಕಥೆ ಹೇಳುವ ನನ್ನ ಪಾತ್ರವನ್ನು ದೊಡ್ಡದಾಗಿ ತೋರಿಸುತ್ತಾರೆ ಆದರೆ ಚಿತ್ರೀಕರಣ ಸಮಯದಲ್ಲಿ ನನ್ನ ಪಾತ್ರ ಏನೂ ಇರುವುದಿಲ್ಲ.  ಇದೆಲ್ಲಾ ತಡೆಯಬೇಕು ಎಂದು ನಾನು ಕಥೆ ಹೇಳಬೇಕು ಎನ್ನುವೆ. ಸೊರರೈ ಪೊಟ್ರು ಸಿನಿಮಾದಿಂದ ಸಂಪೂರ್ಣ ಕಥೆ ಕೇಳುವುದರ ಮಹತ್ವ ಏನೆಂದು ತಿಳಿದುಕೊಂಡೆ. ಚಿತ್ರತಂಡ ಕಥೆ ಸಂಪೂರ್ಣವಾಗಿ ಹೇಳದ ಮೇಲೆ ಸಮಯ ತೆಗೆದುಕೊಂಡು ಕಥೆ ಒಪ್ಪಿಕೊಳ್ಳುವೆ.'

ಕಿರುತೆರೆ ನಟಿ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ಸಿಡಿದ್ದೆದ್ದ ವಿನಯ ಪ್ರಸಾದ್ ಪುತ್ರಿ 

ಸಂಬಳ:

'100% ಶ್ರಮ ಹಾಕಿ ಕೆಲಸ ಮಾಡುವೆ. ಹೀಗಾಗಿ ನಾನು ನನ್ನ ಪ್ರತಿಭೆಗೆ ತಕ್ಕ ಸಂಬಳ ಕೇಳುವುದಕ್ಕೆ ಹೆದರಿಕೊಳ್ಳುವುದಿಲ್ಲ. ಸಂಬಳ (Remuneration) ಬಗ್ಗೆ ಚರ್ಚೆ ಮಾಡಿದಕ್ಕೆ ಹಿಂದೊಮ್ಮೆ ನಿರ್ಮಾಪಕರು ಕೆಟ್ಟದಾಗಿ ಮಾತನಾಡಿದ್ದರು.'

Double XLನಲ್ಲಿ ಸೋನಾಕ್ಷಿ ಸಿನ್ಹಾ; 'ದಪ್ಪಗಿದ್ದರೆ ದಪ್ಪ ಅಂತಾರೆ ತೆಳ್ಳಗಿದ್ದರೆ ಕಡ್ಡಿ ಅಂತಾರೆ'

ಅವಾರ್ಡ್‌ ನಂತರ ಜೀವನ: 

'ವೈಯಕ್ತಿಕವಾಗಿ ನನ್ನಲ್ಲಿ ಏನೂ ಬದಲಾವಣೆಗಳು ಆಗಿಲ್ಲ. ನ್ಯಾಷನಲ್ ಅವಾರ್ಡ್‌ (National Award) ಕೈ ಸೇರಿದ ನಂತರ ನನ್ನ ಧ್ವನಿ ಕೇಳುವವರು ಇದ್ದಾರೆ ಎಂದು ಗೊತ್ತಾಗಿ ಖುಷಿಯಾಗಿದೆ. ಆದರೆ ಕೆಲವು ನನ್ನ ಮಾತು ಕೇಳದೆ ರಿಯಾಕ್ಟ್ ಮಾಡುತ್ತಿದ್ದಾರೆ. ಆಗ ನನಗೆ ಕೋಪ ಬರುತ್ತದೆ, ಸಹಿಸಿಕೊಂಡು ಸುಮ್ಮನಾಗುವೆ'

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!